ನವದೆಹಲಿ: ಭಯೋತ್ಪಾದಕರ ವಿರುದ್ಧದ ನಮ್ಮ ಹೋರಾಟವು ಅಚಲವಾಗಿದ್ದು ಭಾರತದ ವಿರುದ್ಧದ ಯಾವುದೇ ಕ್ರಿಯೆಗೆ ಪ್ರತಿಕ್ರಿಯೆ ಶತಸಿದ್ಧ ಎಂದು ಭಾರತದ ಸೇನೆ ತಿಳಿಸಿದೆ.

ಪಹಲ್ಗಾಮ್ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ಇಂದಿಗೆ(ಬುಧವಾರ) ಒಂದು ವರ್ಷ ಕಳೆದಿದೆ. ಈ ಕರಾಳ ದಿನವನ್ನು ನೆನಪಿಸಿಕೊಂಡಿರುವ ಭಾರತದ ಸೇನೆಯು, ಭಯೋತ್ಪಾದಕರ ವಿರುದ್ಧದ ನಮ್ಮ ಹೋರಾಟವು ಅಚಲ. ಭಾರತದ ವಿರುದ್ಧದ ಯಾವುದೇ ಕ್ರಿಯೆಗೆ ಪ್ರತಿಕ್ರಿಯೆ ಶತಸಿದ್ಧ’ ಎಂದು ‘ಎಕ್ಸ್’ನಲ್ಲಿ ಬುಧವಾರ ಪೋಸ್ಟ್ ಹಂಚಿಕೊಂಡಿದೆ.

ಭಾರತದ ವಿರುದ್ಧದ ಕ್ರಿಯೆಗೆ ನಮ್ಮ ಪ್ರತಿಕ್ರಿಯೆ ಶತಸಿದ್ಧವಾಗಿದೆ. ನ್ಯಾಯ ದೊರಕಿಸಿಕೊಡಲಾಗುವುದು ಎಂದು ಬರೆದುಕೊಂಡಿದೆ. ಈ ಪೋಸ್ಟ್ನೊಂದಿಗೆ #SindoorAnniversary #JusticeEndures #NationFirst ಎನ್ನುವ ಹ್ಯಾಶ್ಟ್ಯಾಗ್ಗಳನ್ನೂ ಬಳಸಲಾಗಿದೆ.

ಮಂಗಳವಾರ ಕೂಡ ಪೋಸ್ಟ್ ಹಂಚಿಕೊಂಡಿದ್ದ ಸೇನೆ, ‘ಯಾವಾಗ ಮಾನವೀಯತೆಯ ಗಡಿ ದಾಟಲಾಗುತ್ತದೆಯೊ ಆಗ ಪ್ರತಿಕ್ರಿಯೆ ನೀಡಲಾಗುತ್ತದೆ’ ಎಂದಿತ್ತು. ದಾಳಿ ನಡೆಸಿದ ಉಗ್ರರನ್ನು ಪತ್ತೆ ಮಾಡಲು ಭಾರತದ ಸೇನೆಯು ಆರಂಭಿಸಿದ್ದ ‘ಆಪರೇಷನ್ ಮಹಾದೇವ್’ ಕಾರ್ಯಾಚರಣೆಯನ್ನೂ ಪೋಸ್ಟ್ನಲ್ಲಿ ಸೇನೆ ನೆನಪಿಸಿಕೊಂಡಿದೆ.

2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಮ್ನಲ್ಲಿ ಭಯಾನಕ ಭಯೋತ್ಪಾದಕ ದಾಳಿ ನಡೆದಿತ್ತು. ಮುಗ್ಧ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.

ಭಯೋತ್ಪಾದಕರ ಈ ದಾಳಿಗೆ ಪ್ರತಿಯಾಗಿ ಭಾರತವು ಮೇ 7ಕ್ಕೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಆರಂಭಿಸಿತ್ತು. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದ್ದ ಹಲವಾರು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಲಾಗಿತ್ತು.
.ಪಹಲ್ಗಾಮ್ ದಾಳಿ: ಮೃತ ಆದಿಲ್ ಕುಟುಂಬಕ್ಕೆ ಮನೆ ಕಟ್ಟಿಸಿಕೊಟ್ಟ ಮಹಾರಾಷ್ಟ್ರ DCM .ಪಹಲ್ಗಾಮ್ ದಾಳಿ ಬೆಂಬಲಿಸಿದವರ ವಿರುದ್ಧ ಏನು ಕ್ರಮ:ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.