ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಕಳೆದ ವರ್ಷ ಏಪ್ರಿಲ್ 22ರಂದು ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದರು. ಹೆಂಡತಿ, ಮಕ್ಕಳ ಎದುರಲ್ಲೇ ಗುಂಡು ಹಾರಿಸಿ ಸಾಯಿಸಿದ್ದರು. ಪರಿಣಾಮ 26 ಪ್ರವಾಸಿಗರು ಪ್ರಾಣ ಬಿಟ್ಟಿದ್ದರು. ಕೆಲವರಿಗೆ ಗಾಯಗಳಾಗಿದ್ದವು. ಇವರಲ್ಲಿ ಪುಣೆಯ ಸಂತೋಷ್ ಕೂಡ ಒಬ್ಬರು.

ಪ್ರವಾಸಕ್ಕೆಂದು ಪತ್ನಿ ಪ್ರಗತಿ ಹಾಗೂ ಮಗಳು ಅಸವಾರಿ ಜೊತೆಗೆ ಪಹಲ್ಗಾಮ್ಗೆ ಬಂದಿದ್ದ ಸಂತೋಷ್ ಅವರ ಮೇಲೆ ಭಯೋತ್ಪಾದಕರು ಮೂರು ಗುಂಡು ಹಾರಿಸಿದ್ದರು. ಪತ್ನಿ ಹಾಗೂ ಮಗಳ ಮುಂದೆಯೇ ಸಂತೋಷ್ ಅವರು ಪ್ರಾಣಬಿಟ್ಟಿದ್ದರು.
.ಪಹಲ್ಗಾಮ್ ದಾಳಿ ಕುರಿತು ಪೋಸ್ಟ್: ಜನಪದ ಗಾಯಕಿ ನೇಹಾ ಸಿಂಗ್ಗೆ ಜಾಮೀನು.Pahalgam Terror Attack | ಪಹಲ್ಗಾಮ್ ದಾಳಿಕೋರರಿಗೆ ನೆರವು: ಒಬ್ಬನ ಬಂಧನ.
ಸಂತೋಷ್ ಅವರು ಕುರುಕಲು ತಿಂಡಿ ವ್ಯಾಪಾರ ಮಾಡುತ್ತಿದ್ದರು. ಅಸವಾರಿ ಕೂಡ ಒಂದು ಕಂಪನಿಯಲ್ಲಿ ವ್ಯವಸ್ಥಾಪಕರಾಗಿ (ಹೆಚ್ಆರ್) ಕೆಲಸ ಮಾಡುತ್ತಿದ್ದರು. ಆದರೆ, ತಂದೆಯ ಮರಣದ ನಂತರ ತಾಯಿಗೆ ಸಹಾಯ ಮಾಡುವ ಸಲುವಾಗಿ ಅಸವಾರಿ ತನ್ನ ಕೆಲಸವನ್ನು ತ್ಯಜಿಸಬೇಕಾದ ಸ್ಥಿತಿ ಎದುರಾಯಿತು.

ಭಯೋತ್ಪಾದಕ ದಾಳಿಯ ತಕ್ಷಣದ ನಂತರ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಮಹಾರಾಷ್ಟ್ರ ಸರ್ಕಾರವು ನಮ್ಮ ಕುಟುಂಬಕ್ಕೆ ಭರವಸೆ ನೀಡಿತು. ಭಯೋತ್ಪಾದಕ ದಾಳಿಯ 11 ತಿಂಗಳ ನಂತರ, ಸಂತೋಷ್ ಪುತ್ರಿ ಅಸವರಿಗೆ ಮಾರ್ಚ್ನಲ್ಲಿ ಪುಣೆ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಆಡಳಿತ ಅಧಿಕಾರಿಯಾಗಿ ನೇಮಿಸಲಾಯಿತು. ಅವರು ಪ್ರಸ್ತುತ ತಮ್ಮ ತರಬೇತಿಯನ್ನು ಪೂರ್ಣಗೊಳಿಸುತ್ತಿದ್ದಾರೆ ಮತ್ತು ಏಪ್ರಿಲ್ ಅಂತ್ಯದ ವೇಳೆಗೆ ದ್ವಿತೀಯ ದರ್ಜೆ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಘಟನೆ ನಡೆದ ಒಂದು ವರ್ಷದ ಬಳಿಕ, ಮೃತ ಸಂತೋಷ್ ಅವರ ಪತ್ನಿ ಪ್ರಗತಿ ಮತ್ತು ಮಗಳು ಅಸವರಿ ಅವರು ಮಾನಸಿಕ ಆಘಾತದ ಜೊತೆಗೆ, ಆರ್ಥಿಕ ಸಂಕಷ್ಟವನ್ನೂ ಎದುರಿಸಬೇಕಾಯಿತು. ‘ನಾವು ಹಲವು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇವೆ. ಅಂದು ನಮ್ಮ ಕಣ್ಮುಂದೆ ನಡೆದ ಘಟನೆ ಇನ್ನೂ ಮನಸ್ಸಿನಲ್ಲಿ ಉಳಿದಿದೆ. ಅದು ನಮ್ಮ ಜೀವನದ ಅತ್ಯಂತ ಕಷ್ಟಕರ ವರ್ಷವಾಗಿತ್ತು ಎಂದು ಅಸವರಿ ಹೇಳಿದರು.

ಇನ್ನೂ, ಇದೇ ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರು ತಮ್ಮ ನೋವನ್ನು ಹಂಚಿಕೊಳ್ಳುತ್ತಾ, ವರ್ಷ ಕಳೆದರೂ ನಮ್ಮ ಜೀವನದಲ್ಲಿ ತುಂಬಲಾರದ ಶೂನ್ಯ ಹಾಗೆಯೇ ಇದೆ. ಸರ್ಕಾರಿ ನೆರವು ಮತ್ತು ಭರವಸೆಗಳು ಸಿಕ್ಕಿರಬಹುದು, ಆದರೆ ನಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವನ್ನು ಯಾವುದರಿಂದಲೂ ಸರಿಪಡಿಸಲು ಸಾಧ್ಯವಿಲ್ಲ ಎಂದು ಸಂತ್ರಸ್ತರು ಕಣ್ಣೀರಿಟ್ಟಿದ್ದಾರೆ.

ದಾಳಿಯಲ್ಲಿ ಹತ್ಯೆಗೀಡಾದ ಒಡಿಶಾದ ಪ್ರಶಾಂತ್ ಸತ್ಪತಿ ಅವರ ಪತ್ನಿ ಪ್ರಿಯದರ್ಶನಿ ಆಚಾರ್ಯ ಅವರು ಘಟನೆ ಬಗ್ಗೆ ನೆನೆದು ಕಣ್ಣೀರಿಟ್ಟಿದ್ದಾರೆ. ‘ಆ ಒಂದು ಘಟನೆ ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡ್ತು. ಕುಟುಂಬದ ಆಧಾರಸ್ತಂಭವನ್ನೇ ಹೇಗೆ ಕಸಿದುಕೊಂಡಿತು‘ ಎಂದರು.

ಇದೇ ದಾಳಿಯಲ್ಲಿ ಪ್ರಾಣಬಿಟ್ಟಿದ್ದ ಮಹಾರಾಷ್ಟ್ರದ ಪುಣೆಯ ಉದ್ಯಮಿ ಕೌಸ್ತುಭ್ ಗಣಬೋಟೆ ಅವರ ಪತ್ನಿ ಸಂಗೀತಾ ಮಾತನಾಡಿ, ‘ನನ್ನ ಕೊನೆಯ ಉಸಿರಿರುವವರೆಗೆ ಆ ಕರಾಳ ದಿನವನ್ನು ಮರೆಯಲು ಸಾಧ್ಯವಿಲ್ಲ‘ ಎಂದಿದ್ದಾರೆ.

ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮಿರದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ 100ಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.