‘ಸೋಮವಾರ ರಾತ್ರಿ 9.15ರ ಸುಮಾರಿಗೆ ಅಮೃತಸರ ಜಿಲ್ಲೆಯ ರತನ್ ಖುರ್ದ್ ಹಳ್ಳಿಯ ಸಮೀಪ ಅನುಮಾನಾಸ್ಪದ ವ್ಯಕ್ತಿಯೊಬ್ಬ ಅಂತರರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ದಾಟುತ್ತಿರುವುದು ಕಂಡುಬಂದಿದೆ. ಭದ್ರತಾ ಪಡೆಯು ಹಲವು ಬಾರಿ ಎಚ್ಚರಿಕೆ ನೀಡಿದ ಬಳಿಕವೂ, ಗಡಿ ದಾಟಲು ಪ್ರಯತ್ನಿಸಿದ್ದಾನೆ. ಅಲ್ಲದೆ, ಆಕ್ರಮಣಕಾರಿ ಸನ್ನೆಗಳನ್ನು ಪ್ರದರ್ಶಿಸಿದ್ದಾನೆ’ ಎಂದು ಅವರು ತಿಳಿಸಿದ್ದಾರೆ.
ಕರ್ತವ್ಯದಲ್ಲಿದ್ದ ಭದ್ರತಾ ಪಡೆಯ ಸಿಬ್ಬಂದಿ ನುಸುಳುಕೋರನನ್ನು ಗುಂಡಿಕ್ಕಿ ಕೊಂದಿದ್ದಾರೆ. ಆತನ ಬಳಿ ₹270 ಪಾಕಿಸ್ತಾನಿ ಕರೆನ್ಸಿ ಮತ್ತು ಅರ್ಧ ಹರಿದ ₹10ರ ನೋಟು ಪತ್ತೆಯಾಗಿದೆ. ಅಂತರರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಪಡೆಯ ಯೋಧರು ಕಾವಲು ಕಾಯುತ್ತಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.