ಜಮ್ಮು: ಪಾಕಿಸ್ತಾನದ ಡ್ರೋನ್ ಅಂತರರಾಷ್ಟ್ರೀಯ ಗಡಿಯನ್ನು ದಾಟಿ, ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಹಳ್ಳಿಗಳಲ್ಲಿ ಭದ್ರತಾ ಪಡೆಗಳು ಶನಿವಾರ ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ರಾಮಗಢ ವಲಯದ ಕಂಡ್ರಾಲ್, ಅಬ್ತಾಲ್ ಮತ್ತು ಬಹದ್ದೂರ್ಪುರ ಗ್ರಾಮಗಳ ಮೇಲೆ ಪಾಕಿಸ್ತಾನದ ಡ್ರೋನ್ ಕೆಲವು ನಿಮಿಷಗಳ ಕಾಲ ಹಾರಾಟ ನಡೆಸಿತ್ತು. ಹೀಗಾಗಿ ಈ ಪ್ರದೇಶಗಳನ್ನು ಕಣ್ಗಾವಲಿನಲ್ಲಿ ಇರಿಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
.ಇರಾನ್ನ ಖರ್ಗ್ ದ್ವೀಪದ ಮೇಲೆ ಭಾರಿ ಬಾಂಬ್ ದಾಳಿ ನಡೆಸಿದ್ದೇವೆ ಎಂದ ಟ್ರಂಪ್.ಭಾರತದ ಹಡಗುಗಳ ಸಂಚಾರಕ್ಕೆ ಸಹಕರಿಸುತ್ತೇವೆ: ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ.
ಭಾರತ ಮತ್ತು ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿ ಬಳಿ ಡ್ರೋನ್ ಮೂಲಕ ಎಸೆಯಲಾದ ₹12 ಕೋಟಿ ಮೌಲ್ಯದ 2 ಕೆ.ಜಿಯಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದರು.

ಬಿಷ್ಣಾಹ್ ಪ್ರದೇಶದ ಬಹದೂರ್ಪುರ ಗ್ರಾಮದಲ್ಲಿನ ಕೃಷಿ ಜಮೀನಿನಲ್ಲಿ ಬುಧವಾರ ರಾತ್ರಿ ಹೆರಾಯಿನ್ ಪತ್ತೆಯಾಗಿತ್ತು. ಜಮ್ಮು ಪೊಲೀಸರು ಹಾಗೂ ಗಡಿ ಭದ್ರತಾ ಪಡೆಯ ಕಾರ್ಯಾಚರಣೆ ನಡೆಸಿ ಅದನ್ನು ವಶಪಡಿಸಿಕೊಂಡರು.
.ಬಾಲೇಂದ್ರ ಶಾ: ನೇಪಾಳ ಜೆನ್ ಝೀಗಳ ‘ಕ್ರಾಂತಿ ಪುರುಷ’.ಕಸರಸಂ: ನೈಸರ್ಗಿಕ ವಯಾಗ್ರಾ ಕಲ್ಲಂಗಡಿ ಸಿಪ್ಪೆಯ ದಿಢೀರ್ ಇಡ್ಲಿ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.