ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ನಂಟು ಹೊಂದಿದ ಆರೋಪದ ಮೇಲೆ ನೇಪಾಳದ ಒಬ್ಬ ಪ್ರಜೆಯೂ ಸೇರಿದಂತೆ 8 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಶಂಕಿತರು ರಾಜಧಾನಿ ದೆಹಲಿ, ಮುಂಬೈ, ಪಂಜಾಬ್, ಚಂಡೀಗಢದ ಸೇರಿದಂತೆ ದೇಶದ ಪ್ರಮುಖ ಸಂಸ್ಥೆಗಳು, ಪೊಲೀಸ್, ಭದ್ರತಾ ಪಡೆಗಳ ಕಚೇರಿ, ರೈಲು ನಿಲ್ದಾಣ, ಉದ್ಯಾನ ಹಾಗೂ ಸೇತುವೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿಸಿದ್ದಾರೆ.

ಭೂಗತ ಲೋಕದ ಪಾತಕಿ ಶಹಜಾದ್ ಭಟ್ಟಿ ನಿರ್ದೇಶನದಂತೆ ವಿಧ್ವಂಸಕ ಕೃತ್ಯವೆಸಗಲು ಸಂಚು ನಡೆಸಿದ್ದರು. ಬಂಧಿತರಿಂದ ಪಾಕಿಸ್ತಾನಿ ನಿರ್ಮಿತ ನಾಲ್ಕು ಹ್ಯಾಂಡ್ ಗ್ರೆನೇಡ್ಗಳು, 2 ಪಿಸ್ತೂಲ್ಗಳು, 24 ಜೀವಂತ ಗುಂಡುಗಳು, ಕದ್ದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸ್ ವಿಶೇಷ ಆಯುಕ್ತ (ವಿಶೇಷ ಘಟಕ) ಅನಿಲ್ ಶುಕ್ಲಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ವಿಜಯ್ ಅಲಿಯಾಸ್ ಶೂಟರ್ (23), ಜಾರ್ಖಂಡ್ನ ನಿತೀಶ್ ಪಾಸ್ವಾನ್ (23), ಮಹಾರಾಷ್ಟ್ರದ ತೌಕೀರ್ ರಿಜ್ವಾನ್ ಅಹಮ್ಮದ್ ಶೇಕ್ (27), ಸಾಜಿದ್ ಮೆಹಬೂಬ್ ಶೇಕ್ ಅಲಿಯಾಸ್ ಅರ್ಬಾಜ್ ಖಾನ್ (27) ಪಂಜಾಬ್ನ ಹರ್ವೀಂದರ್ ಸಿಂಗ್ (28) ಗಗನ್ದೀಪ್ ಸಿಂಗ್ (28) ಮಂಜೀತ್ ಸಿಂಗ್ (23) ಹಾಗೂ ನೇಪಾಳದ ಪ್ರಜೆ ಅನಾಗ್ ಕಾಮಿ ಲಾಮಾ (66) ಅವರನ್ನು ಬಂಧಿಸಲಾಗಿದೆ.

ಬಂಧಿತರ ವಿರುದ್ಧ ಬಿಎನ್ಎಸ್ ಹಾಗೂ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.