ಇಸ್ಲಾಮಾಬಾದ್: ಲಾಹೋರ್ ಮತ್ತು ಅದರ ಸುತ್ತಮುತ್ತಲಿನ ವಿವಿಧ ಬೀದಿ ಹಾಗೂ ರಸ್ತೆಗಳ ಮೂಲ ಐತಿಹಾಸಿಕ ಹೆಸರುಗಳನ್ನು ಮರುಸ್ಥಾಪಿಸುವ ಯೋಜನೆಗೆ ಪಾಕಿಸ್ತಾನದ ಪಂಜಾಬ್ ಸರ್ಕಾರ ಅನುಮೋದನೆ ನೀಡಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಲಾಹೋರ್ನಲ್ಲಿರುವ ಹಲವಾರು ಐತಿಹಾಸಿಕ ಬೀದಿಗಳು, ಗಲ್ಲಿಗಳು ಮತ್ತು ರಸ್ತೆಗಳ ಹೆಸರನ್ನು ಬದಲಾಯಿಸಿ ಈ ಹಿಂದೆ ಸ್ಥಳೀಯ ಗಣ್ಯರ ಹೆಸರುಗಳನ್ನು ಇಡಲಾಗಿತ್ತು. ಈಗ ಮತ್ತೆ ಹಳೆಯ ಹೆಸರನ್ನೇ ಮರುನಾಮಕರಣ ಮಾಡಲು ಮುಂದಾಗಿದ್ದಾರೆ.

‘ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರ ಅಧ್ಯಕ್ಷತೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಪಂಜಾಬ್ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮರುನಾಮಕರಣದ ಮೂಲಕ ನಗರದ ಸಾಂಸ್ಕೃತಿಕ ಗುರುತು ಮತ್ತು ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಉದ್ದೇಶಿಸಲಾಗಿದೆ’ ಎಂದು ಹೇಳಿದ್ದಾರೆ.

ಮುಂದುವರಿದು, ‘ಲಾಹೋರ್ ಹೆರಿಟೇಜ್ ಏರಿಯಾಸ್ ರಿವೈವಲ್ ಯೋಜನೆಯ ಮುಖ್ಯಸ್ಥರೂ ಆಗಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಈ ಉಪಕ್ರಮದ ನೇತೃತ್ವ ವಹಿಸಿದ್ದಾರೆ. ಅವರ ಈ ಪ್ರಸ್ತಾಪಕ್ಕೆ ಕಳೆದ ವಾರ ಸಚಿವ ಸಂಪುಟದ ಅನುಮೋದನೆ ದೊರೆತಿದೆ’ ಎಂದಿದ್ದಾರೆ.

ಇಸ್ಲಾಮ್ಪುರವನ್ನು ಮರಳಿ ‘ಕೃಷ್ಣ ನಗರ’ ಎಂದು ಮರುನಾಮಕರಣ ಮಾಡಲಾಗಿದೆ. ಬಾಬರಿ ಮಸೀದಿ ಚೌಕ್ ಈಗ ‘ಜೈನ್ ಮಂದಿರ್ ಚೌಕ್’ ಆಗಿದೆ. ಮರುನಾಮಕರಣ ಮಾಡಲಾದ ಇತರ ಹೆಸರುಗಳಲ್ಲಿ ಕ್ವೀನ್ಸ್ ರಸ್ತೆ, ಜೈಲು ರಸ್ತೆ, ಡೇವಿಸ್ ರಸ್ತೆ, ಲಾರೆನ್ಸ್ ರಸ್ತೆ, ಎಂಪ್ರೆಸ್ ರಸ್ತೆ, ಸಂತನಗರ, ಧರಂಪುರ, ಬ್ರಾಂಡ್ರೆತ್ ರಸ್ತೆ, ರಾಮ್ ಗಲಿ, ಟೆಂಪ್ಬೆಲ್ ಸ್ಟ್ರೀಟ್, ಲಕ್ಷ್ಮಿ ಚೌಕ್, ಕುಮ್ಹಾರ್ಪುರ, ಮೋಹನ್ ಲಾಲ್ ಬಜಾರ್, ಸುಂದರ್ ದಾಸ್ ರಸ್ತೆ, ಭಗವಾನ್ ಪುರ, ಶಾಂತಿ ನಗರ ಮತ್ತು ಔಟ್ಫಾಲ್ ರಸ್ತೆಗಳು ಸೇರಿವೆ.

ಸರ್ಕಾರದ ನಿರ್ಧಾರವನ್ನು ಸ್ಥಳೀಯ ನಿವಾಸಿಗಳು ಮತ್ತು ವಿದ್ವಾಂಸರು ಸ್ವಾಗತಿಸಿದ್ದಾರೆ.

ಬೀಕನ್ಹೌಸ್ ನ್ಯಾಷನಲ್ ಯೂನಿವರ್ಸಿಟಿ ಉಪನ್ಯಾಸಕ ಸಾದ್ ಮಲಿಕ್ ಮಾತನಾಡಿ, ‘ಕೆಲವು ಸ್ಥಳಗಳ ಹೆಸರು ಸರ್ಕಾರಿ ದಾಖಲೆಗಳಲ್ಲಿ ಅಧಿಕೃತ ಬದಲಾವಣೆಗಳಾಗಿದ್ದರೂ, ಲಾಹೋರ್ನ ಜನರು ತಲೆಮಾರುಗಳಿಂದ ಮೂಲ ಹೆಸರನ್ನೇ ಬಳಸುವುದನ್ನು ಕಾಣಬಹುದಾಗಿದೆ’ ಎಂದು ಹೇಳಿದ್ದಾರೆ.

ಜೈನ್ ಮಂದಿರ ಚೌಕ್ ಹೆಸರಿನ ಮರುನಾಮರಕಣ ಮಾಡಿರುವುದನ್ನು ಧಾರ್ಮಿಕ ವಿದ್ವಾಂಸ ಮೌಲಾನಾ ವಾಜಿದ್ ಖಾದ್ರಿ ಬೆಂಬಲಿಸಿದ್ದಾರೆ. ಐತಿಹಾಸಿಕ ಹೆಸರುಗಳಿಂದ ನಂಬಿಕೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದ ಅವರು, 1990ರ ದಶಕದಲ್ಲಿ ಮಾಡಲಾಗಿದ್ದ ಮರುನಾಮಕರಣಗಳು ರಾಜಕೀಯ ಪ್ರೇರಿತವಾಗಿದ್ದವು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.