ನವದೆಹಲಿ: ಸ್ವಿಟ್ಜರ್ಲೆಂಡ್ನ ವಾಯು ಗುಣಮಟ್ಟ ಪರಿಶೀಲನಾ ಸಂಸ್ಥೆ ಐಕ್ಯುಏರ್ ವಾರ್ಷಿಕ ವರದಿಯಲ್ಲಿ, ಜಗತ್ತಿನ ಅತಿಹೆಚ್ಚು ಮಾಲಿನ್ಯಯುಕ್ತ ದೇಶಗಳ ಪಟ್ಟಿಯಲ್ಲಿ ಪಾಕಿಸ್ಥಾನವು ಮೊದಲ ಸ್ಥಾನದಲ್ಲಿದೆ.

ಈ ಪಟ್ಟಿಯಲ್ಲಿ ಬಾಂಗ್ಲಾದೇಶ ಮತ್ತು ತಜಕಿಸ್ತಾನವು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದರೆ, ಭಾರತವು 6ನೇ ಸ್ಥಾನದಲ್ಲಿದೆ. 20ನೇ ಸ್ಥಾನದಲ್ಲಿ ಚೀನಾ, 110ರಲ್ಲಿ ಬ್ರಿಟನ್, 120ರಲ್ಲಿ ಅಮೆರಿಕ ದೇಶಗಳಿವೆ.

143 ದೇಶಗಳ 9,446 ನಗರಗಳಲ್ಲಿನ 40 ಸಾವಿರಕ್ಕೂ ಅಧಿಕ ನಿಯಂತ್ರಕ ಮೇಲ್ವಿಚಾರಣಾ ಕೇಂದ್ರಗಳಿಂದ ಮಾಹಿತಿ ಸಂಗ್ರಹಿಸಿ ಈ ವರದಿಯನ್ನು ತಯಾರಿಸಲಾಗಿದೆ ಎಂದು ಐಕ್ಯೂಏರ್ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಅಪಾಯಕಾರಿ ಸಣ್ಣ ಕಣಗಳ ಮಾನದಂಡವಾದ ‘ಪಿಎಂ2.5’ ಪ್ರಮಾಣಕ್ಕಿಂತ ಕೇವಲ 13 ದೇಶಗಳು ಮಾತ್ರ ಇದಕ್ಕಿಂತ ಕಡಿಮೆ ಮಾಲಿನ್ಯ ಹೊಂದಿವೆ ಎಂದು ಹೇಳಿದೆ.

ಇದಕ್ಕಾಗಿ ಜಗತ್ತಿನಾದ್ಯಂತ ಹಲವು ಸರ್ಕಾರಿ ಸಂಸ್ಥೆಗಳು, ವಿಶ್ವ ವಿದ್ಯಾನಿಲಯಗಳು, ಎನ್ಜಿಒ, ವಿಜ್ಞಾನಿಗಳು ಹಾಗೂ ಖಾಸಗಿ ಉದ್ಯಮಿಗಳ ನೆರವನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಭಾರತದ ಲೋನಿ, ವಿಶ್ವದ ಮಾಲಿನ್ಯಯುಕ್ತ ನಗರ:

ವಿಶ್ವದ ಅತೀ ಮಾಲಿನ್ಯಯುಕ್ತ ನಗರಗಳ ಪಟ್ಟಿಯಲ್ಲಿ ಭಾರತದ ಲೋನಿ ನಗರವು ಮೊದಲ ಸ್ಥಾನದಲ್ಲಿದೆ. ಇದು ಉತ್ತರ ಪ್ರದೇಶ ರಾಜ್ಯದ ಗಾಜಿಯಾಬಾದ್ಗೆ ಸಮೀಪದಲ್ಲಿದೆ.

ವಿಶ್ವದ 25 ಮಾಲಿನ್ಯಯುಕ್ತ ನಗರಗಳ ಪಟ್ಟಿಯಲ್ಲಿ ಭಾರತ, ಪಾಕಿಸ್ತಾನ ಮತ್ತು ಚೀನಾದ ನಗರಗಳೇ ಇವೆ.

ಪ್ರಮುಖ ಅಂಶಗಳು

* 143ರಲ್ಲಿ 130 ದೇಶಗಳು ಮತ್ತು ಪ್ರಾಂತ್ಯಗಳು ವಿಶ್ವ ಆರೋಗ್ಯ ಸಂಸ್ಥೆಯ ನಿಗದಿಪಡಿಸಿದ ಮಟ್ಟವನ್ನು ತಲುಪಿಲ್ಲ.

* ಮಾಲಿನ್ಯಯುಕ್ತ ದೇಶಗಳ ಪಟ್ಟಿಯಲ್ಲಿ ಬಾಂಗ್ಲಾದೇಶ ಎರಡನೇ ಮತ್ತು ತಜಿಕಿಸ್ತಾನ್ ಮೂರನೇ ಸ್ಥಾನದಲ್ಲಿವೆ.

* 2024ರ ಅಂಕಿಅಂಶಗಳ ಪ್ರಕಾರ ಅತ್ಯಂತ ಮಾಲಿನ್ಯಯುಕ್ತ ದೇಶ ಎನಿಸಿಕೊಂಡಿದ್ದ ಚಡ್ 2025ರಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು, ಆದರೆ ಕಳೆದ ವರ್ಷದ ಪಿಎಂ2.5 ಸಾಂದ್ರತೆಯಲ್ಲಿನ ಇಳಿಕೆ ದತ್ತಾಂಶದಲ್ಲಿನ ವ್ಯತ್ಯಾಸಕ್ಕೆ ಕಾರಣವಾಗಿರಬಹುದು.

* ಕಳೆದ ಮಾರ್ಚ್ನಲ್ಲಿ, ಅಮೆರಿಕವು ತನ್ನ ರಾಯಭಾರ ಕಚೇರಿ ಮತ್ತು ದೂತಾವಾಸ ಕಟ್ಟಡಗಳಿಂದ ಮಾಲಿನ್ಯದ ದತ್ತಾಂಶವನ್ನು ಸಂಗ್ರಹಿಸುತ್ತಿದ್ದ ಜಾಗತಿಕ ಮೇಲ್ವಿಚಾರಣಾ ಕಾರ್ಯಕ್ರಮವನ್ನು ಬಜೆಟ್ ಕಾರಣಕ್ಕೆ ಸ್ಥಗಿತಗೊಳಿಸಿತ್ತು.

* ‘ಮಾರ್ಚ್ನಲ್ಲಿ ನಷ್ಟವಾದ ದತ್ತಾಂಶವು (ಚಡ್ನಲ್ಲಿ) ‘ಪಿಎಂ2.5’ ಮಟ್ಟದಲ್ಲಿ ಗಮನಾರ್ಹ ಕುಸಿತವನ್ನು ತೋರಿಸಿತ್ತು, ಆದರೆ ವಾಸ್ತವ ಸಂಗತಿ ನಮಗೆ ತಿಳಿದಿಲ್ಲ’ ಎಂದು ಪ್ರಮುಖ ಲೇಖಕ ಕ್ರಿಸ್ಟಿ ಚೆಸ್ಟರ್ ಶ್ರೋಡರ್ ಹೇಳಿದ್ದಾರೆ.

* ಅಮೆರಿಕದ ನಿರ್ಧಾರದಿಂದ ಅನೇಕ ಮಾಲಿನ್ಯಯುಕ್ತ ದೇಶಗಳ ಪ್ರಾಥಮಿಕ ದತ್ತಾಂಶ ನಷ್ಟವಾಗಿದೆ ಮತ್ತು ಮಾಹಿತಿ ಕೊರತೆಯ ಕಾರಣಕ್ಕೆ ಬುರುಂಡಿ, ತುರ್ಕ್ಮೆನಿಸ್ತಾನ್ ಮತ್ತು ಟೋಗೊ ದೇಶಗಳನ್ನು 2025ರ ವರದಿಯಲ್ಲಿ ಕೈಬಿಡಲಾಗಿದೆ.

* 2025 ರಲ್ಲಿ ವಿಶ್ವದ ಶೇ 14ರಷ್ಟು ನಗರಗಳು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನು ತಲುಪಿವೆ. ಇದು ಹಿಂದಿನ ವರ್ಷಕ್ಕಿಂತ ಶೇ 17ರಷ್ಟು ಕಡಿಮೆಯಾಗಿದೆ. ಕೆನಡಾದಲ್ಲಿ ಸಂಭವಿಸಿದ ಕಾಳ್ಗಿಚ್ಚು ಪ್ರಕರಣಗಳಿಂದಾಗಿ ಅಮೆರಿಕ ಮತ್ತು ಯುರೋಪ್ನಾದ್ಯಂತ ಪಿಎಂ2.5 ಹೆಚ್ಚಾಗಿದೆ.

* 2025ರಲ್ಲಿ ಮಾನದಂಡವನ್ನು ಪೂರೈಸಿದ ದೇಶಗಳಲ್ಲಿ ಆಸ್ಟ್ರೇಲಿಯಾ, ಐಸ್ಲೆಂಡ್, ಎಸ್ಟೋನಿಯಾ ಮತ್ತು ಪನಾಮಾ ಸೇರಿವೆ.

* ಲಾವೋಸ್, ಕಾಂಬೋಡಿಯಾ ಮತ್ತು ಇಂಡೋನೇಷ್ಯಾಗಳಲ್ಲಿ 2024ಕ್ಕೆ ಹೋಲಿಸಿದರೆ ಪಿಎಂ2.5 ಪ್ರಮಾಣದಲ್ಲಿ ಗಮನಾರ್ಹ ಇಳಿಕೆಯಾಗಿದೆ. ಮಂಗೋಲಿಯಾದಲ್ಲಿ ಸರಾಸರಿ ಸಾಂದ್ರತೆಯು ಪ್ರತಿ ಘನ ಮೀಟರ್ಗೆ ಶೇ 31ರಷ್ಟು ಕುಸಿದಿದ್ದು, 17.8 ಮೈಕ್ರೋ ಗ್ರಾಂಗೆ ತಲುಪಿದೆ.

* ಹಿಂದಿನ ವರ್ಷಕ್ಕೆ ಹೋಲಿಸಿದರೆ, 2025ರಲ್ಲಿ 75 ದೇಶಗಳಲ್ಲಿ ಕಡಿಮೆ ಪಿಎಂ2.5 ಮಟ್ಟ ಕಂಡುಬಂದಿದೆ. 54 ದೇಶಗಳು ಹೆಚ್ಚಿನ ಸರಾಸರಿ ಸಾಂದ್ರತೆಯನ್ನು ದಾಖಲಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.