ತಿರುವನಂತಪುರಂ: ಕೇರಳದ ಪಾಲಕ್ಕಾಡ್ ವಿಧಾನಸಭೆ ಚುನಾವಣೆಯಲ್ಲಿ ಏರ್ಪಟ್ಟಿರುವ ತ್ರಿಕೋನ ಸ್ಪರ್ಧೆಯಲ್ಲಿ ‘ಬಿರಿಯಾನಿ ಹೌಸ್’ ಎಲ್ಲರ ಗಮನ ಸೆಳೆಯುತ್ತಿದೆ.

ಸಿಪಿಎಂ ನೇತೃತ್ವದ ಎಲ್ಡಿಎಫ್ ಪಕ್ಷದ ಅಭ್ಯರ್ಥಿ-ಹೋಟೆಲ್ ಉದ್ಯಮಿ ಎನ್ಎಂಆರ್ ರಜಾಕ್, ಪಾಲಕ್ಕಾಡ್ನಲ್ಲಿರುವ ಜನಪ್ರಿಯ ಎನ್ಎಂಆರ್ ಬಿರಿಯಾನಿ ಹೌಸ್ ನಡೆಸುವ ಕುಟುಂಬದ ಸದಸ್ಯರಲ್ಲಿ ಒಬ್ಬರು. ‘ರಾವುತ್ತರ್ ಬಿರಿಯಾನಿ’ಗೆ ಹೆಸರುವಾಸಿಯಾದ ಈ ‘ಬಿರಿಯಾನಿ ಹೌಸ್’ ಪಾಲಕ್ಕಾಡ್ನಲ್ಲಿ ನಾಲ್ಕು ಶಾಖೆಗಳನ್ನು ಹೊಂದಿದೆ.

ರಜಾಕ್ಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಪಕ್ಷದ ಫೈರ್ಬ್ರ್ಯಾಂಡ್ ನಾಯಕಿ ಶೋಭಾ ಸುರೇಂದ್ರನ್ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಕ್ಷದಿಂದ ಪಾಲಕ್ಕಾಡ್ನ ಖ್ಯಾತ ನಟ, ಹಾಸ್ಯನಟ ರಮೇಶ್ ಪಿಶಾರಣಿ ಅವರು ಕಣದಲ್ಲಿದ್ದಾರೆ. ತ್ರಿಕೋನ ಸ್ಪರ್ಧೆಯಲ್ಲಿ ‘ಬಿರಿಯಾನಿ ಹೌಸ್’ ಹೆಚ್ಚು ಸದ್ದು ಮಾಡುತ್ತಿದೆ. ಕಳೆದ ಮೂರು ಚುನಾವಣೆಗಳಲ್ಲಿ ದ್ವಿತೀಯ ಸ್ಥಾನ ಪಡೆದು ಈ ಬಾರಿ ಗೆಲ್ಲುವ ಭರವಸೆಯೊಂದಿಗೆ ಕಣಕ್ಕಿಳಿದಿರುವ ಅವರಿಗೆ ‘ಬಿರಿಯಾನಿ ಹೌಸ್’ ಖ್ಯಾತಿ ತೀವ್ರ ಸ್ಪರ್ಧೆ ನೀಡುವಂತೆ ಕಾಣುತ್ತಿದೆ.

ಎನ್ಎಂಆರ್ ರಜಾಕ್ ಅವರನ್ನು ಸಿಪಿಎಂ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಎಂದು ಘೋಷಿಸಿದ ತಕ್ಷಣ, ‘ಎನ್ಎಂಆರ್ ಬಿರಿಯಾನಿ ಹೌಸ್’ ವ್ಯಾಪಕವಾಗಿ ಜನರನ್ನು ಸೆಳೆಯಲು ಆರಂಭಿಸಿದೆ.

2009-10ರಲ್ಲಿ ರಜಾಕ್ ಮತ್ತು ಸಹೋದರರು ತಮ್ಮ ತಾಯಿಯವರ ಬಿರಿಯಾನಿ ಖಾದ್ಯದ ಬಗೆಯನ್ನೇ ನೆಚ್ಚಿಕೊಂಡು ‘ಬಿರಿಯಾನಿ ಹೌಸ್’ ಆರಂಭಿಸಿದರು. ಇವರು ತಯಾರಿಸುವ ‘ರಾವುತ್ತರ್ ಬಿರಿಯಾನಿ’, ಮಾಂಸ ಮತ್ತು ಅನ್ನವನ್ನು ಪ್ರತ್ಯೇಕವಾಗಿ ಬೇಯಿಸುವ ಸಾಮಾನ್ಯ ಬಿರಿಯಾನಿ ಪಾಕವಿಧಾನಗಳಿಗಿಂತ ಭಿನ್ನವಾಗಿದೆ. ಇದರಲ್ಲಿ ಅನ್ನ ಮತ್ತು ಮಾಂಸ ಎರಡನ್ನೂ ಒಟ್ಟಿಗೆ ಬೇಯಿಸಲಾಗುತ್ತದೆ.

ಪಾಲಕ್ಕಾಡ್ನಲ್ಲಿರುವ ಎನ್ಎಂಆರ್ ಬಿರಿಯಾನಿ ಹೌಸ್ ಫುಡ್ ವ್ಲಾಗರ್ಸ್ ನೆಚ್ಚಿನ ತಾಣವಾಗಿದೆ. ಬಿರಿಯಾನಿ ಮಳಿಗೆಯು, ಮಟನ್, ಚಿಕನ್ ಸೇರಿದಂತೆ ವೈವಿಧ್ಯಮಯ ಮಾಂಸಾಹಾರ ಪೂರೈಸುತ್ತದೆ.

ಅಂದಹಾಗೆ, 2021ರ ವಿಧಾನಸಭಾ ಚುನಾವಣೆಯಲ್ಲಿ ಪಾಲಕ್ಕಾಡ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ‘ಮೆಟ್ರೊ ಮ್ಯಾನ್’ ಈ.ಶ್ರೀಧರನ್ ಗಮನ ಸೆಳೆದಿದ್ದರು. ಶ್ರೀಧರನ್ ಅವರು ಕಾಂಗ್ರೆಸ್ ಅಭ್ಯರ್ಥಿ ಶಫಿ ಪರಂಬಿಲ್ ಅವರ ಎದುರು 3859 ಮತಗಳಿಂದ ಪರಾಭವಗೊಂಡಿದ್ದರು.

2016ರಲ್ಲಿ ಶೋಭಾ ಸುರೇಂದ್ರನ್ ಅವರು ಪಾಲಕ್ಕಾಡ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದು, ಎರಡನೇ ಸ್ಥಾನ ಪಡೆದಿದ್ದರು. ಆಗ ಎಲ್ಡಿಎಫ್ ಅಭ್ಯರ್ಥಿ ಮೂರನೇ ಸ್ಥಾನ ಪಡೆದಿದ್ದರು. ಶೋಭಾ ಅವರು, ಪರಂಬಿಲ್ ಎದುರು 17483 ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.