ಸೋಲಾಪುರ: ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪಂಢರಪುರ–ತಿರುಪತಿ ವಾರಾಂತ್ಯ ವಿಶೇಷ ರೈಲುಗಳನ್ನು ಇನ್ನು ಮುಂದೆ ನಿಯಮಿತ ರೈಲುಗಳಾಗಿ ಪರಿವರ್ತಿಸಲಾಗಿದೆ ಎಂದು ಮಧ್ಯ ರೈಲ್ವೆ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ರೈಲು ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಭಕ್ತರು ಹಾಗೂ ಸಾಮಾನ್ಯ ಪ್ರಯಾಣಿಕರಿಗೆ ಉಪಯುಕ್ತವಾಗಲಿದೆ.

ಪಂಢರಪುರದ ವಿಠ್ಠಲ-ರುಕ್ಮಿಣಿ ಕ್ಷೇತ್ರ ಮತ್ತು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ಕ್ಷೇತ್ರಗಳ ನಡುವಿನ ರೈಲು ಸಂಪರ್ಕವನ್ನು ಈ ಸೇವೆ ಇನ್ನಷ್ಟು ಬಲಪಡಿಸಲಿದೆ.

ವಾರಾಂತ್ಯ ರೈಲುಗಳು: ಪ್ರಸ್ತುತ ವಿಶೇಷ ರೈಲಾಗಿ ಸಂಚರಿಸುತ್ತಿರುವ 07012 ತಿರುಪತಿ–ಪಂಢರಪುರ ವಾರಾಂತ್ಯ ವಿಶೇಷ ರೈಲನ್ನು ಮೇ 16 ರಿಂದ ನಿಯಮಿತ ಸೇವೆಯಾಗಿ 17437 ತಿರುಪತಿ–ಪಂಢರಪುರ ಸಾಪ್ರಾಹಿಕ ರೈಲಾಗಿ ಪರಿವರ್ತಿಸಲಾಗಿದೆ.

ಪ್ರಸ್ತುತ ವಿಶೇಷ ರೈಲಾಗಿ ಸಂಚರಿಸುತ್ತಿರುವ 07032 ಪಂಢರಪುರ–ತಿರುಪತಿ ವಾರಾಂತ್ಯ ವಿಶೇಷ ರೈಲನ್ನು ಮೇ 17 ರಿಂದ ನಿಯಮಿತ ಸೇವೆಯಾಗಿ 17438 ಪಂಢರಪುರ–ತಿರುಪತಿ ಸಾಪ್ತಾಹಿಕ ರೈಲಾಗಿ ಪರಿವರ್ತಿಸಲಾಗಿದೆ.

ರೈಲು ಸಂಖ್ಯೆ 17437 ತಿರುಪತಿ–ಪಂಢರಪುರ ವಾರಾಂತ್ಯ ರೈಲು ಪ್ರತಿ ಶನಿವಾರ ತಿರುಪತಿಯಿಂದ ಸಂಜೆ 4 ಗಂಟೆಗೆ ಹೊರಟು, ಮುಂದಿನ ದಿನ ಸಂಜೆ 7 ಗಂಟೆಗೆ ಪಂಢರಪುರ ತಲುಪುತ್ತದೆ.

ರೈಲು ಸಂಖ್ಯೆ 17438 ಪಂಢರಪುರ–ತಿರುಪತಿ ವಾರಾಂತ್ಯ ರೈಲು ಪ್ರತಿ ಭಾನುವಾರ ಪಂಢರಪುರದಿಂದ ರಾತ್ರಿ 8 ಗಂಟೆಗೆ ಹೊರಟು, ಮರು ದಿನ ರಾತ್ರಿ 11.30 ಗಂಟೆಗೆ ತಿರುಪತಿ ತಲುಪುತ್ತದೆ.

ನಿಲುಗಡೆ: ಮೋಡ್ಲಿಂಬ್, ಕುರ್ಡು ವಾಡಿ, ಲಾತೂರ್, ಉದಗೀರ್, ಬೀದರ್, ಜಹೀರಾಬಾದ್, ಬೇಗಂ ಪೇಟ್, ಸಿಕಂದರಾಬಾದ್, ಕಾಚಿಗುಡಾ, ಕರ್ನೂಲ್ ಸಿಟಿ, ಎರ್ರಗುಂಟ್ಲ, ಕಡಪ ಮತ್ತು ರೇಣಿಗುಂಟಾ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-26-1410937534

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.