ನವದೆಹಲಿ : 2023ರ ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಪೂರಕ ಆರೋಪ ಪಟ್ಟಿಯನ್ನು ದೆಹಲಿ ಹೈಕೋರ್ಟ್ಗೆ ಶನಿವಾರ ಸಲ್ಲಿಸಲಾಯಿತು.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತ್ ಬನ್ಸಲ್ ಅವರು, ‘ಆರೋಪಿಗಳಾದ ನೀಲಂ ರಾನೋಲಿಯಾ ಮತ್ತು ಅಮೋಲ್ ಧನರಾಜ್ ಶಿಂದೆ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ 13,967 ಪುಟಗಳಿರುವ ಪೂರಕ ಆರೋಪ ಪಟ್ಟಿಯನ್ನು ತನಿಖಾಧಿಕಾರಿ ಸಲ್ಲಿಸಿದ್ದಾರೆ. ದಾಖಲೆಗಳ ಪರಿಶೀಲನೆ ಸೇರಿದಂತೆ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 29ರಂದು ನಡೆಸಲಾಗುವುದು’ ಎಂದು ಹೇಳಿದರು.

2023ರ ಡಿಸೆಂಬರ್ 13ರಂದು ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ. ಎಂಬವರು ಲೋಕಸಭೆಯ ವೀಕ್ಷಕರ ಗ್ಯಾಲರಿಗೆ ಪ್ರವೇಶಿಸಿ, ಘೋಷಣೆಗಳನ್ನು ಕೂಗುತ್ತಾ ‘ಸ್ಮೋಕ್ ಕ್ಯಾನ್’ ಹಾರಿಸಿ ದಾಂದಲೆ ಎಬ್ಬಿಸಿದ್ದರು. ಸಂಸತ್ ಹೊರಗೆ ಶಿಂದೆ ಮತ್ತು ರನೋಲಿಯಾ ಘೋಷಣೆ ಕೂಗುತ್ತಾ ಬಣ್ಣದ ಹೊಗೆ ಮೂಡುವಂತೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.