ನವದೆಹಲಿ: ಸಂಸತ್ನಲ್ಲಿ ಗುರುವಾರ ಮಂಡನೆಯಾಗಲಿರುವ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತ ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ- 2026’ರಲ್ಲಿನ ಅವಕಾಶಗಳ ವಿರುದ್ಧ ಮತ ಹಾಕುವುದಕ್ಕೆ ವಿರೋಧ ಪಕ್ಷಗಳು ಬುಧವಾರ ನಿರ್ಧರಿಸಿವೆ.

‘ಕೇಂದ್ರ ಸರ್ಕಾರವು ತನಗೆ ಅನುಕೂಲವಾಗುವಂತೆ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ ಮಾಡಿ ಅಧಿಕಾರ ಕಸಿದುಕೊಳ್ಳುವ ಪ್ರಯತ್ನದ ಭಾಗವಿದು. ಇದರ ವಿರುದ್ಧ ಮತ ಚಲಾಯಿಸಲಾಗುವುದು’ ಎಂದೂ ವಿಪಕ್ಷಗಳು ಗುಡುಗಿವೆ.

ಇದರೊಂದಿಗೆ, ಏ.16ರಿಂದ ಆರಂಭವಾಗಲಿರುವ ಸಂಸತ್ನ ಮೂರು ದಿನಗಳ ವಿಶೇಷ ಅಧಿವೇಶನವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ವಿರೋಧ ಪಕ್ಷಗಳು ಅಭೂತಪೂರ್ವ ಮುಖಾಮುಖಿಯಾಗುವುದಕ್ಕೆ ಸಾಕ್ಷಿಯಾಗಲಿದೆ.

ಅಂಗೀಕಾರ ಸಾಧ್ಯತೆವೇ?: ಲೋಕಸಭೆಯಲ್ಲಿ ಗುರುವಾರ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತ ‘ಸಂವಿಧಾನ (131ನೇ ತಿದ್ದುಪಡಿ) ಮಸೂದೆ- 2026 ಅನ್ನು ಮಂಡಿಸಲಾಗುತ್ತಿದೆ. ಇದು ಅಂಗೀಕಾರವಾಗುವುದಕ್ಕೆ ಮೂರನೇ ಎರಡರಷ್ಟು ಬಹುಮತ ಅಗತ್ಯ.

ಪ್ರಸ್ತುತ ಲೋಕಸಭೆಯ ಸದಸ್ಯ ಬಲ 540 ಇದೆ. ಈ ಪೈಕಿ ಆಡಳಿತಾರೂಢ ಎನ್ಡಿಎ ಸಂಸದರ ಸಂಖ್ಯೆ 294 ಹಾಗೂ ವಿಪಕ್ಷಗಳ ಸಂಸದರ ಸಂಖ್ಯೆ 238. ಒಂದು ವೇಳೆ ಎಲ್ಲ 540 ಸಂಸದರು ಅಧಿವೇಶನದಲ್ಲಿ ಹಾಜರಿದ್ದಲ್ಲಿ, ಮಸೂದೆ ಅಂಗೀಕಾರವಾಗಲು 361 ಮತಗಳು ಅಗತ್ಯ.

ವಿರೋಧ ಪಕ್ಷಗಳು ಈ ಮಸೂದೆಯನ್ನು ವಿರೋಧಿಸುವುದಾಗಿ ಹೇಳಿವೆ. ಈ ಪೈಕಿ, ಕನಿಷ್ಠ 18 ಪಕ್ಷಗಳ 234 ಸಂಸದರು ಮಸೂದೆ ವಿರುದ್ಧ ಮತ ಹಾಕುವುದಾಗಿ ಸ್ಪಷ್ಟಪಡಿಸಿವೆ. ಮಸೂದೆ ವಿರುದ್ಧ ಮತ ಹಾಕುವುದಕ್ಕಾಗಿ ವಿಪಕ್ಷಗಳು ಒಗ್ಗಟ್ಟಾಗಿವೆ. ಇದು ಮಸೂದೆ ಅಂಗೀಕರಿಸುವ ಸರ್ಕಾರದ ಪ್ರಯತ್ನಕ್ಕೆ ಎದುರಾಗಲಿರುವ ಬಹುದೊಡ್ಡ ತೊಡಕು.

ನಾವು ಮೊದಲಿನಿಂದಲೂ ಮಹಿಳಾ ಮೀಸಲಾತಿಗೆ ಬೆಂಬಲಿಸುತ್ತಾ ಬಂದಿದ್ದೇವೆ. ಈ ಹಿಂದಿನ ತಿದ್ದುಪಡಿ ಕಾಯ್ದೆಯನ್ನೆ ಅನುಷ್ಠಾನಗೊಳಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ

ಖರ್ಗೆ ನಿವಾಸದಲ್ಲಿ ಸಭೆ

ಅಧಿವೇಶನ ವೇಳೆ ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ವಿಪಕ್ಷಗಳ ನಾಯಕರ ಸಭೆ ನಡೆಯಿತು. ಕ್ಷೇತ್ರಗಳ ಮರುವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಮಸೂದೆ ಮಂಡನೆ ವೇಳೆ ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಭೆ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು‘ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ ಈ ಕುರಿತ ಮಸೂದೆಯನ್ನು ಮಂಡಿಸಲು ಕೇಂದ್ರ ಅನುಸರಿಸುತ್ತಿರುವ ವಿಧಾನಕ್ಕೆ ನಮ್ಮ ವಿರೋಧವಿದೆ’ ಎಂದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಕೆ.ಸಿ.ವೇಣುಗೋಪಾಲ್ ಮುಖಂಡರಾದ ಟಿ.ಆರ್.ಬಾಲು(ಡಿಎಂಕೆ) ತೇಜಸ್ವಿ ಯಾದವ್(ಆರ್ಜೆಡಿ) ಸಾಗರಿಕಾ ಘೋಷ್(ಟಿಎಂಸಿ) ಸಂಜಯ್ ರಾವುತ್ ಹಾಗೂ ಅರವಿಂದ ಸಾವಂತ್(ಶಿವಸೇನಾ–ಯುಬಿಟಿ) ಸುಪ್ರಿಯಾ ಸುಳೆ(ಎನ್ಸಿಪಿ–ಶರದ್ ಪವಾರ್) ಆ್ಯನಿ ರಾಜಾ(ಸಿಪಿಐ) ನೀಲೋತ್ಪಲ್ ಬಸು(ಸಿಪಿಎಂ) ಸಂಜಯ್ ಸಿಂಗ್(ಎಎಪಿ)ಇ.ಟಿ.ಮೊಹಮ್ಮದ್ ಬಷೀರ್(ಐಯುಎಂಎಲ್) ಎನ್.ಕೆ.ಪ್ರೇಮಚಂದ್ರನ್(ಆರ್ಎಸ್ಪಿ) ಸಭೆಯಲ್ಲಿ ಪಾಲ್ಗೊಂಡಿದ್ದರು. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ವರ್ಚುವಲ್ ಆಗಿ ಪಾಲ್ಗೊಂಡಿದ್ದರು.
.ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ: ಉತ್ತರದ ರಾಜ್ಯಗಳಿಗೆ ಲಾಭ– ದಕ್ಷಿಣಕ್ಕೆ ಹೊಡೆತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.