ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹31.93 ಕೋಟಿ ಅಕ್ರಮ: ಬ್ಯಾಂಕ್‌ ಮಾಜಿ ವ್ಯವಸ್ಥಾಪಕ ಸೆರೆ

Published 18 ಜುಲೈ 2023, 15:41 IST
Last Updated 18 ಜುಲೈ 2023, 15:41 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ)ವು ಖಾಸಗಿ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕರೊಬ್ಬರನ್ನು ಇತ್ತೀಚೆಗೆ ಬಂಧಿಸಿದೆ.

ಪಟ್ನಾ ಮೂಲದ ಸಮಿತ್‌ ಕುಮಾರ್‌ ಬಂಧಿತ. ಇ.ಡಿ ಅಧಿಕಾರಿಗಳು ಅವರನ್ನು ಜುಲೈ 10ರಂದು ವಶಕ್ಕೆ ಪಡೆದಿದ್ದು, ಜು. 11ರಂದು ಹಣ ‘ಅಕ್ರಮ ವರ್ಗಾವಣೆ ತಡೆ ಕಾಯಿದೆ’ (ಪಿಎಂಎಲ್‌ಎ) ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  ನ್ಯಾಯಾಲಯವು ಅವರನ್ನು ಜುಲೈ 20ರ ವರೆಗೆ ಇ.ಡಿ ವಶಕ್ಕೆ ನೀಡಿದೆ.   

ಪಟ್ನಾದ ಬೋರಿಂಗ್‌ ರಸ್ತೆ ವ್ಯವಸ್ಥಾಪಕರಾಗಿದ್ದ ವೇಳೆ ಸಮಿತ್‌ ‘ಭೂಸ್ವಾಧೀನಗಳ ಸಕ್ಷಮ ಪ್ರಾಧಿಕಾರ  ಮತ್ತು ಜಿಲ್ಲಾ ಭೂಸ್ವಾಧೀನ ಅಧಿಕಾರಿ (ಸಿಎಎಲ್‌ಎ ಕಮ್‌ ಡಿಎಲ್‌ಎಒ)’ಗಳ ಖಾತೆಗಳಿಂದ ನಕಲಿ ಖಾತೆಗಳಿಗೆ, 13 ವಹಿವಾಟುಗಳಲ್ಲಿ ₹31.93 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬಿಹಾರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಈ ವಂಚನೆಯಲ್ಲಿನ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಇ.ಡಿ ಪ್ರಕರಣ ದಾಖಲಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT