ಹೈದರಾಬಾದ್: ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ತೆಲುಗು ನಟ ಹಾಗೂ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಬಗ್ಗೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ಜನರು ತಮ್ಮನ್ನು ವಿಜಯ್ ಅವರೊಂದಿಗೆ ಹೋಲಿಕೆ ಮಾಡುತ್ತಿರುವುದು ಒತ್ತಡ ಉಂಟುಮಾಡುತ್ತಿದೆ ಎಂದು ಪವನ್ ಕಲ್ಯಾಣ್ ಪ್ರತಿಕ್ರಿಯಿಸಿದ್ದಾರೆ.

ಮಂಗಳಗಿರಿಯಲ್ಲಿರುವ ಜನಸೇನಾ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಪವನ್, ತಮಿಳುನಾಡು ಸಿಎಂ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ್ದಾರೆ.

‘ತಮಿಳುನಾಡು ಚುನಾವಣೆ ಬಳಿಕ ಜನರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ನಮ್ಮ ನೆರೆಯ ರಾಜ್ಯದಲ್ಲಿ ನಟ (ವಿಜಯ್) ತಮ್ಮದೇ ಪಕ್ಷ ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ. ಅದರ ಬೆನ್ನಲ್ಲೇ, ಸಾಕಷ್ಟು ಜನರು ನೀವೂ ಅವರಂತೆಯೇ ಆಗಬೇಕು ಎಂಬುದಾಗಿ ಸಂದೇಶಗಳನ್ನು ಕಳುಹಿಸಲಾರಂಭಿಸಿದ್ದಾರೆ’ ಎಂದು ಪವನ್ ಹೇಳಿಕೊಂಡಿದ್ದಾರೆ.

ಜನರ ಸಂದೇಶಗಳ ಬಗ್ಗೆ ತೆಲುಗಿನ ನುಡಿಗಟ್ಟೊಂದನ್ನು ಹೇಳಿರುವ ಅವರು, ‘ಪರಿಸ್ಥಿತಿ ಹೇಗಿದೆ ಎಂದರೆ, ಪಕ್ಕದ ಮನೆಯವರು ಮದುವೆಯಾದದ್ದಕ್ಕೆ ಅನಗತ್ಯವಾಗಿ ಸಂಭ್ರಮಿಸಿದಂತಾಗಿದೆ. ತಮ್ಮ ಕುಟುಂಬದ ಮದುವೆಯಲ್ಲ ಎಂಬುದನ್ನು ಅರಿಯದೆ ಸಣ್ಣ ಮಕ್ಕಳು ಎಲ್ಲೆಂದರಲ್ಲಿ ಓಡಾಡಿಕೊಂಡಿರುವಂತೆ’ ಎಂದು ಚಟಾಕಿ ಹಾರಿಸಿದ್ದಾರೆ.

ಮುಂದುವರಿದು, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಭಿನ್ನವಾಗಿದೆ. ಎರಡನ್ನೂ ಹೋಲಿಕೆ ಮಾಡಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.