ಮುಂಬೈ (ಪಿಟಿಐ): ಕ್ರಿಮಿನಲ್ ಆರೋಪ ಹೊತ್ತ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳನ್ನು ಪದಚ್ಯುತಗೊಳಿಸುವ ಮಸೂದೆ ಪರಿಶೀಲಿಸುತ್ತಿರುವಅಪರಾಜಿತಾ ಸಾರಂಗಿ ಸಾರಥ್ಯದ ಜಂಟಿ ಸದನ ಸಮಿತಿಯು (ಜೆಪಿಸಿ) ಮಹಾ ರಾಷ್ಟ್ರದಲ್ಲಿ ಸೋಮವಾರ ಅಭಿಪ್ರಾಯ ಸಂಗ್ರಹಿಸಿತು.

ಮಹಾರಾಷ್ಟ್ರ ಸರ್ಕಾರ ದೊಂದಿಗೆ ಚರ್ಚಿಸಿದ ಸಾರಂಗಿ ಅವರು, ‘ಪ್ರಸ್ತಾವಿತ ಶಾಸನವು ಭಾರತದ ಪ್ರಜಾಪ್ರಭುತ್ವದ ಚೌಕಟ್ಟನ್ನು ಬಲಪಡಿಸುವಲ್ಲಿ ಒಂದು ಮೈಲಿಗಲ್ಲು’ ಎಂದು ಹೇಳಿದರು.

ಸಂವಿಧಾನ (130ನೇ ತಿದ್ದುಪಡಿ) ಮಸೂದೆ– 2025, ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರು ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಅವಧಿ ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧಕ್ಕೆ ಸಂಬಂಧಿಸಿದಂತೆ ಸತತ 30 ದಿನ ಬಂಧನದಲ್ಲಿದ್ದರೆ ಪದಚ್ಯುತಗೊಳ್ಳಲಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಸಮಿತಿಗೆ ಮೂರು ಪ್ರಮುಖ ಸಲಹೆ ನೀಡಿದ್ದಾರೆ. ಅವನ್ನು ಪರಿಶೀಲಿಸಲಾಗುವುದು ಎಂದು ಸಾರಂಗಿ ತಿಳಿಸಿದರು.

ಮಹಾರಾಷ್ಟ್ರ ಸರ್ಕಾರ, ರಾಜಕೀಯ ಪಕ್ಷಗಳು, ಅಧಿಕಾರಿಗಳು, ಮಾನವ ಹಕ್ಕುಗಳ ಆಯೋಗ ಹಾಗೂ ವಿವಿಧ ಸಂಘಟನೆಗಳ ಜೊತೆ ಸಮಿತಿಯು ಮುಂಬೈನಲ್ಲಿ ಸಭೆ ನಡೆಸಿ ಚರ್ಚಿಸಿತು.

ಜೆಪಿಸಿ ಎಲ್ಲರಿಂದಲೂ ಸಲಹೆ ಆಲಿಸುತ್ತಿದೆ. ಇವನ್ನು ಕ್ರೋಡೀಕರಿಸಿ, ವಿಶ್ಲೇಷಣೆಗೊಳಪಡಿಸಿದ ನಂತರ ಸಮಗ್ರ ವರದಿಯೊಂದನ್ನು ಸಿದ್ಧಗೊಳಿಸಿ ಲೋಕಸಭಾ ಸ್ಪೀಕರ್ ಓಂಬಿರ್ಲಾ ಅವರಿಗೆ ಸಲ್ಲಿಸಲಿದೆ ಎಂದು ಅಪರಾಜಿತಾ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-51-1651063821

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.