ನವದೆಹಲಿ: ‘ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಉಂಟಾಗಿರುವ ಪರಿಣಾಮಗಳನ್ನು ನಿಭಾಯಿಸಲು, ಕಾರ್ಯತಂತ್ರ ರೂಪಿಸುವ ಭಾಗವಾಗಿ ಕೇಂದ್ರ ಸರ್ಕಾರ ಏಳು ಉನ್ನತಾಧಿಕಾರ ಸಮಿತಿಗಳನ್ನು ರಚಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದ ಅವರು, ‘ಪೆಟ್ರೋಲ್– ಡೀಸೆಲ್, ಎಲ್ಪಿಜಿ ಸಿಲಿಂಡರ್, ರಸಗೊಬ್ಬರ ಪೂರೈಕೆ ಸರಪಳಿ ಸರಿಪಡಿಸುವುದೂ ಸೇರಿದಂತೆ ಯುದ್ಧದಿಂದ ಉಂಟಾಗಿರುವ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಮಸ್ಯೆಗಳಿಗೆ ಈ ಸಮಿತಿಗಳು ಸಮಗ್ರ ಪರಿಹಾರ ಕಂಡುಕೊಳ್ಳಲಿವೆ. ಕೋವಿಡ್–19 ಸಂದರ್ಭದಲ್ಲೂ, ತಜ್ಞರನ್ನೊಳಗೊಂಡ ಇಂತಹ ಉನ್ನತ ಸಮಿತಿಗಳನ್ನು ರಚಿಸಲಾಗಿತ್ತು’ ಎಂದು ಅವರು ವಿವರಿಸಿದ್ದಾರೆ.

‘ಪಶ್ಚಿಮ ಏಷ್ಯಾ ಸಂಘರ್ಷವು ಜಾಗತಿಕ ಮಟ್ಟದಲ್ಲಿ ಭಾರಿ ಇಂಧನ ಬಿಕ್ಕಟ್ಟು ಸೃಷ್ಟಿಸಿದೆ. ಬಿಕ್ಕಟ್ಟಿನ ಲಾಭ ಪಡೆಯಲು ದುಷ್ಕರ್ಮಿಗಳು ಪ್ರಯತ್ನಿಸುತ್ತಿದ್ದಾರೆ. ಎಲ್ಪಿಜಿ ಸಿಲಿಂಡರ್ಗಳ ಅಕ್ರಮ ದಾಸ್ತಾನು ಆಗಬಾರದು. ಅವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಅವಕಾಶ ಸಿಗಬಾರದು. ಆಯಾ ರಾಜ್ಯ ಸರ್ಕಾರಗಳು ಇದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಪ್ರಧಾನಿ ಸೂಚಿಸಿದ್ದಾರೆ.

‘ಪಶ್ಚಿಮ ಏಷ್ಯಾ ಸಂಘರ್ಷದಿಂದ ದೇಶದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಎದುರಿಸಲು ಕೇಂದ್ರ ಸರ್ಕಾರ ಈಗಾಗಲೇ ಅಂತರ್ ಸಚಿವಾಲಯಗಳ ಸಮಿತಿಗಳನ್ನು ರಚಿಸಿದೆ. ಈ ಸಮಿತಿಗಳು ಆಮದು–ರಫ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿವೆ. ಹಣದುಬ್ಬರ ನಿಯಂತ್ರಿಸಲು, ಸುಸ್ಥಿರ ಆರ್ಥಿಕ ಬೆಳವಣಿಗೆ ದರ ಕಾಯ್ದುಕೊಳ್ಳಲು ಈ ಸಮಿತಿಗಳು ಕಾರ್ಯತಂತ್ರ ರೂಪಿಸಲಿವೆ’ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ರೈತರಿಗೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸಲಾಗಿದೆ. ಲಭ್ಯವಿರುವ ಎಲ್ಲ ಮೂಲಗಳಿಂದ ಕಚ್ಚಾತೈಲ ಮತ್ತು ಅನಿಲ ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ಯುದ್ಧದ ಪರಿಣಾಮಗಳ ಬಗ್ಗೆ ಸರ್ಕಾರವು ಜಾಗರೂಕವಾಗಿದೆ ಮತ್ತು ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದೆ’ ಎಂದು ರಾಜ್ಯಸಭೆಗೆ ತಿಳಿಸಿದ್ದಾರೆ.

ಕೊಲ್ಲಿ ದೇಶಗಳಲ್ಲಿ ಸುಮಾರು 1 ಕೋಟಿಯಷ್ಟು ಭಾರತೀಯರು ನೆಲೆಸಿದ್ದಾರೆ. ಇವರಲ್ಲಿ, ಪಶ್ಚಿಮ ಏಷ್ಯಾ ಸಂಘರ್ಷ ಆರಂಭಗೊಂಡ ನಂತರ ಸುಮಾರು 3.75 ಲಕ್ಷದಷ್ಟು ಜನರು ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ. 700 ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ಇರಾನ್ನಿಂದ 1 ಸಾವಿರದಷ್ಟು ಭಾರತೀಯರು ವಾಪಸ್ ಬಂದಿದ್ದಾರೆ ಎಂದು ಪ್ರಧಾನಿ ಹೇಳಿದರು.

ಪಶ್ಚಿಮ ಏಷ್ಯಾ ಸಂಘರ್ಷ ಮಾತ್ರವಲ್ಲ ಪ್ರತಿಯೊಂದು ಸವಾಲವನ್ನೂ ತಾಳ್ಮೆ ಸಂಯಮ ಮತ್ತು ಶಾಂತ ಮನಸ್ಸಿನಿಂದ ಎದುರಿಸಬೇಕು. ಹೊಸ ಸವಾಲಿಗೆ ಸನ್ನದ್ಧರಾಗಿರಬೇಕು
ನರೇಂದ್ರ ಮೋದಿ ಪ್ರಧಾನಿ

ಶಾಂತಿ ಮರುಸ್ಥಾಪನೆಗೆ ಬೆಂಬಲ

‘ಭಾರತವು ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಪಶ್ಚಿಮ ಏಷ್ಯಾ ವಲಯದಲ್ಲಿ ಶಾಂತಿ ಮರುಸ್ಥಾಪನೆಯನ್ನು ಬಯಸುತ್ತದೆ’ ಎಂದು ಪ್ರಧಾನಿ ಹೇಳಿದ್ದಾರೆ. ‘ಯುದ್ಧವನ್ನು ಕೊನೆಗಾಣಿಸಿ ಹೊರ್ಮುಜ್ ಜಲಸಂಧಿಯ ಮೂಲಕ ತೈಲನೌಕೆಗಳ ಮುಕ್ತ ಸಂಚಾರವನ್ನು ಭಾರತ ಎದುರು ನೋಡುತ್ತಿದೆ. ಇಸ್ರೇಲ್ ಇರಾನ್ ಅಮೆರಿಕ ಮತ್ತು ಕೊಲ್ಲಿ ದೇಶಗಳ ಮುಖಂಡರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಇದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಎಲ್ಲ ಶಾಂತಿಯುತ ಪ್ರಯತ್ನಗಳನ್ನು ದೇಶವು ಬೆಂಬಲಿಸಲಿದೆ’ ಎಂದು ಹೇಳಿದ್ದಾರೆ. ‘ದೇಶದ ಇಂಧನ ಭದ್ರತೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ‘ಕಳೆದ 11 ವರ್ಷಗಳಲ್ಲಿ 53 ಲಕ್ಷ ಮೆಟ್ರಿಕ್ ಟನ್ಗಳಷ್ಟು ತೈಲ ದಾಸ್ತಾನು ಮಾಡಿಕೊಳ್ಳಲಾಗಿದೆ. ಇದರ ಜತೆಗೆ ಹೆಚ್ಚುವರಿಯಾಗಿ 65 ಲಕ್ಷ ಮೆಟ್ರಿಕ್ ಟನ್ನಷ್ಟು ತೈಲ ದಾಸ್ತಾನಿಗೆ ಪ್ರಯತ್ನಗಳು ನಡೆದಿವೆ’ ಎಂದು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.