ಸೋಮನಾಥ (ಗುಜರಾತ್): ಭಾರತ ಯಾವುದೇ ಜಾಗತಿಕ ಒತ್ತಡಗಳಿಗೆ ಮಣಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸೋಮನಾಥ ದೇವಾಲಯದ ಪುನರ್ ಪ್ರತಿಷ್ಠಾಪನೆಯ 75ನೇ ವರ್ಷದ 'ಅಮೃತ ಮಹೋತ್ಸವ'ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಭಾರತವು ಯಾರ ಮುಂದೆಯೂ ತಲೆಬಾಗದು ಎಂದ ಅವರು, 1998ರ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ಮತ್ತು ಸೋಮನಾಥದ ಪುನರುತ್ಥಾನದ ಇತಿಹಾಸವನ್ನು ಸ್ಮರಿಸಿದ್ದಾರೆ. ಇದೇ ವೇಳೆ ಪ್ರತಿಪಕ್ಷಗಳ 'ತುಷ್ಟೀಕರಣ' ರಾಜಕಾರಣದ ‘ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
.Video | ಪೊಲೀಸರ ಎದುರೇ ಭದ್ರತಾ ಸಿಬ್ಬಂದಿ ಮೇಲೆ ಮಹಿಳೆ ಹಲ್ಲೆ: ಆಗಿದ್ದೇನು?.IPL 2026ರಿಂದ ಎರಡು ತಂಡಗಳು ಹೊರಕ್ಕೆ: 4 ಸ್ಥಾನಗಳಿಗಾಗಿ 6 ತಂಡಗಳ ಪೈಪೋಟಿ.
1951ರ ಮೇ 11ರಂದು ಸೋಮನಾಥ ದೇವಾಲಯದ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ಇದು ಸ್ವತಂತ್ರ ಭಾರತದ ಜಾಗೃತ ಪ್ರಜ್ಞೆಯ ಘೋಷಣೆಯಾಗಿತ್ತು ಎಂದು ಬಣ್ಣಿಸಿದ್ದಾರೆ.

1998ರ ಇದೇ ದಿನ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿ ಜಗತ್ತಿಗೆ ತನ್ನ ಸಾಮರ್ಥ್ಯವನ್ನು ತೋರಿಸಿತು. ಜಾಗತಿಕ ಶಕ್ತಿಗಳು ಆರ್ಥಿಕ ನಿರ್ಬಂಧಗಳನ್ನು ಹೇರಿದರೂ ಭಾರತ ಎದೆಗುಂದದೆ ಮೇ 13ರಂದು ಮತ್ತೆರಡು ಪರೀಕ್ಷೆಗಳನ್ನು ನಡೆಸಿ ಇಚ್ಛಾಶಕ್ತಿಯನ್ನು ಪ್ರದರ್ಶಿಸಿತು ಎಂದು ಮೋದಿ ಹೇಳಿದ್ದಾರೆ.

ಸೋಮನಾಥ ಮಂದಿರದ ಪುನರ್ ನಿರ್ಮಾಣದಿಂದ ಹಿಡಿದು ಅಯೋಧ್ಯೆಯ ರಾಮ ಮಂದಿರದವರೆಗೆ ಕೆಲವು ರಾಜಕೀಯ ಶಕ್ತಿಗಳು ದೇಶದ ಘನತೆಗಿಂತ ತುಷ್ಟೀಕರಣಕ್ಕೇ ಆದ್ಯತೆ ನೀಡಿವೆ ಎಂದು ಪ್ರಧಾನಿ ಆರೋಪಿಸಿದ್ದಾರೆ.
.ಮುಂಬೈ ವಿರುದ್ಧ ರೋಚಕ ಗೆಲುವು, ಆದರೂ RCB ಕೋಚ್ಗೆ ಬಿತ್ತು ದಂಡ.ದೇಶದ ಹೆಮ್ಮೆಯ ಕ್ಷಣ: ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಯನ್ನು ಸ್ಮರಿಸಿದ ಮೋದಿ.
ಸರ್ದಾರ್ ಪಟೇಲ್ ಮತ್ತು ಬಾಬು ರಾಜೇಂದ್ರ ಪ್ರಸಾದ್ ಅವರು ಸೋಮನಾಥ ಮಂದಿರ ಮರುನಿರ್ಮಾಣಕ್ಕೆ ಶ್ರಮಿಸಿದಾಗ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ವಿರೋಧ ವ್ಯಕ್ತಪಡಿಸಿದ್ದನ್ನು ಮೋದಿ ಉಲ್ಲೇಖಿಸಿದ್ದಾರೆ.

ಸೋಮನಾಥ ಮಂದಿರದ 75ನೇ ವರ್ಷದ ಸ್ಮರಣಾರ್ಥ ವಿಶೇಷ ಅಂಚೆ ಚೀಟಿಯನ್ನು ಪ್ರಧಾನಿ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.