ಬುಧವಾರ, 20 ಮೇ 2026
×
ADVERTISEMENT

ಪಶ್ಚಿಮ ಏಷ್ಯಾ ಬಿಕ್ಕಟ್ಟು | ಸಮರ್ಥವಾಗಿ ಭಾರತ ಮುಖಾಮುಖಿ: ಪ್ರಧಾನಿ ಮೋದಿ

Published : 28 ಮಾರ್ಚ್ 2026, 14:21 IST
Last Updated : 28 ಮಾರ್ಚ್ 2026, 14:21 IST
ADVERTISEMENT
ಫಾಲೋ ಮಾಡಿ
Comments
ನವದೆಹಲಿ ಬಳಿ ನೊಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಶನಿವಾರ ಮಾತುಕತೆಯಲ್ಲಿ ತೊಡಗಿದ್ದರು

ನವದೆಹಲಿ ಬಳಿ ನೊಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಶನಿವಾರ ಮಾತುಕತೆಯಲ್ಲಿ ತೊಡಗಿದ್ದರು 

ಪಿಟಿಐ ಚಿತ್ರ

ಭಾರತವು ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲಕ್ಕಾಗಿ ಕೊಲ್ಲಿ ರಾಷ್ಟ್ರಗಳನ್ನು ಅವಲಂಬಿಸಿದೆ. ಅಲ್ಲಿನ ಬಿಕ್ಕಟ್ಟಿನಿಂದಾಗಿ ಕಂಡುಬರುತ್ತಿರುವ ಹೊರೆಯನ್ನು ದೇಶದ ಜನರ ಮೇಲೆ ಬೀಳದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ
ನರೇಂದ್ರ ಮೋದಿ, ಪ್ರಧಾನಿ
ದೆಹಲಿಯ 2ನೇ ವಿಮಾನ ನಿಲ್ಧಾಣ
ಜೆವರ್ ಬಳಿ ಶನಿವಾರ ಉದ್ಘಾಟನೆಗೊಂಡ ನೊಯ್ಡಾ ಅಂತರರಾಷ್ಟ್ರೀಯ ವಿಮಾನನಿಲ್ದಾಣವು  ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೇವೆ ಒದಗಿಸುವ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ₹11200 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ರಸ್ತೆ ರೈಲ್ವೆ ಹಾಗೂ ಮೆಟ್ರೊ ರೈಲುಗಳಿಂದ ಈ ವಿಮಾನನಿಲ್ದಾಣ ಸಂಪರ್ಕ ಹೊಂದಿದ್ದು ಬಹು ವಿಧದ ಸಾರಿಗೆ ಹಬ್‌ ಆಗಿ ಇದು ಅಭಿವೃದ್ಧಿಗೊಳ್ಳಲಿದೆ. ಈ ವಿಮಾನನಿಲ್ದಾಣವು ಆರಂಭಿಕ ಹಂತದಲ್ಲಿ ವರ್ಷಕ್ಕೆ 1.2 ಕೋಟಿ ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ. ನಂತರದಲ್ಲಿ ವಾರ್ಷಿಕ 7 ಕೋಟಿ ಪ್ರಯಾಣಿಕರಿಗೆ ಸೇವೆ ಒದಗಿಸುವಷ್ಟು ಸಾಮರ್ಥ್ಯ ಹೊಂದಲಿದೆ. ಆರಂಭದಲ್ಲಿ ವಾರ್ಷಿಕ 2.5 ಲಕ್ಷ ಟನ್ ಸರಕು ನಿರ್ವಹಣೆ ಸಾಮರ್ಥ್ಯ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT