ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ–ಪುಣೆ ಸೇರಿ 11 ವಂದೇ ಭಾರತ್‌ ರೈಲುಗಳಿಗೆ ಸೆಪ್ಟೆಂಬರ್ 15ರಂದು ಚಾಲನೆ

Published : 10 ಸೆಪ್ಟೆಂಬರ್ 2024, 16:22 IST
Last Updated : 10 ಸೆಪ್ಟೆಂಬರ್ 2024, 16:22 IST
ಫಾಲೋ ಮಾಡಿ
Comments

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ 11 ರೈಲುಗಳಿಗೆ ಸೆ.15ರಂದು ಜೆಮ್‌ಶೆಡ್‌ಪುರದಲ್ಲಿ ಚಾಲನೆ ನೀಡಲಿದ್ದಾರೆ.

ಹುಬ್ಬಳ್ಳಿ–ಪುಣೆ, ಪುಣೆ– ನಾಗ್ಪುರ, ಗಯಾ–ಹೌರಾ, ಬಾಗಲ್‌ಪುರ–ಹೌರಾ, ನಾಗ್ಪುರ–ಸಿಕಂದರಾಬಾದ್‌, ಆಗ್ರಾ–ಬನಾರಸ್‌, ರಾಯಪುರ–ವಿಶಾಖಪಟ್ಟಣ, ಟಾಟನಗರ–ಪಟ್ನಾ. ದಿಯೋಘರ್‌–ವಾರಾಣಸಿ ಮತ್ತು ಟಾಟನಗರ–ಬೃಹಂಪುರ(ಒಡಿಶಾ) ಮಾರ್ಗಗಳಲ್ಲಿ ನೂತನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಸಂಚರಿಸಲಿವೆ.

ಇದೇ ವೇಳೆ, ವಾರಾಣಸಿ–ದೆಹಲಿ ಮಾರ್ಗದಲ್ಲಿ ಪ್ರಸ್ತುತ ಸಂಚರಿಸುತ್ತಿರುವ 16 ಬೋಗಿಗಳ ವಂದೇಭಾರತ್‌ ರೈಲಿನ ಬದಲಾಗಿ 20 ಬೋಗಿಗಳ ನೂತನ ವಂದೇ ಭಾರತ್‌ ರೈಲಿಗೂ ಮೋದಿ ಅವರು ಚಾಲನೆ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT