ವಿಲ್ಲುಪುರಂ: ನಮ್ಮ ಪಕ್ಷದ ಮೂಲತತ್ವಗಳಿಗೆ ವಿರುದ್ಧವಾಗಿ ಪುತ್ರ ಅನ್ಬುಮಣಿ ರಾಮದಾಸ್ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಿ ತಪ್ಪು ಎಸಗಿದೆ ಎಂದು ಹೇಳುವ ಮೂಲಕ ತಮಿಳುನಾಡಿನ ಪಟ್ಟಾಳಿ ಮಕ್ಕಳ್ ಕಚ್ಚಿ ಸಂಸ್ಥಾಪಕ ಎಸ್.ರಾಮದಾಸ್ ಗುರುವಾರ ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ಪುತ್ರ ಅನ್ಬುಮಣಿ ರಾಮದಾಸ್ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ವಿಮುಕ್ತಿಗೊಳಿಸಿದ್ದ ಎಸ್.ರಾಮದಾಸ್, ಕಾರ್ಯಾಧ್ಯಕ್ಷ ಸ್ಥಾನವನ್ನು ನೀಡಿದ್ದರು.

ಥೈಲಪುರಂನಲ್ಲಿ ಮಾತನಾಡಿದ 85 ವರ್ಷದ ರಾಮದಾಸ್ ‘ಅನ್ಬುಮಣಿ 35 ವರ್ಷದವನಿದ್ದಾಗ ಅವರನ್ನು ಕೇಂದ್ರದಲ್ಲಿ ಮಂತ್ರಿ ಮಾಡಿ ತಪ್ಪು ಹೆಜ್ಜೆ ಇಟ್ಟಿದ್ದೆ. 2024ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ನನ್ನ ಮಗ ಬಲವಂತ ಮಾಡಿದ್ದ‘ ಎಂದು ಹೇಳಿದ್ದಾರೆ.

ಅಗತ್ಯ ಬಿದ್ದರೆ ಪಕ್ಷದ ಸಾಮಾನ್ಯ ಸಭೆ ಕರೆದು ಅನ್ಬುಮಣಿಯನ್ನು ಪಕ್ಷದ ಪದವಿಯಿಂದ ತಗೆದುಹಾಕುವುದಾಗಿಯೂ ಹೇಳಿದ್ದಾರೆ. ಅನ್ಬುಮಣಿ ಅವರು 2004 ಮತ್ತು 2009ರ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.