10 ಅಭ್ಯರ್ಥಿಗಳ ಬಿಜೆಪಿಯ 6ನೇ ಪಟ್ಟಿ ಬಿಡುಗಡೆ
ನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಬಿಜೆಪಿಯು 10 ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಿದೆ. ಉಧಂಪುರ ಪೂರ್ವ ಕ್ಷೇತ್ರದಿಂದ ಆರ್.ಎಸ್.ಪಥಾನಿಯಾ ಹಾಗೂ ಬಂಡಿಪೊರಾ ಕ್ಷೇತ್ರದಿಂದ ನಾಸೀರ್ ಅಹಮ್ಮದ್ ಲೋನ್ ಅವರನ್ನು ಕಣಕ್ಕಿಳಿಸಲಾಗಿದೆ. 90 ವಿಧಾನಸಭಾ ಸದಸ್ಯರನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯು ಮೂರು ಹಂತದಲ್ಲಿ ನಡೆಯಲಿದೆ. ಫಕೀರ್ ಮೊಹಮ್ಮದ್ ಖಾನ್ ಅವರು ಗುರೇಜ್ (ಎಸ್.ಟಿ ಮೀಸಲು) ಅಬ್ದುಲ್ ರಶೀದ್ ಖಾನ್ ಅವರು ಸೋನಾವಾರಿ ಹಾಗೂ ಗುಲಾಂ ಮೊಹಮ್ಮದ್ ಮಿರ್ ಅವರು ಹಂದ್ವಾರದಿಂದ ಸ್ಪರ್ಧಿಸಲಿದ್ದಾರೆ. ಭರತ್ ಭೂಷಣ್ ಅವರು ಕಥುವಾ ರಾಜೀವ್ ಭಗತ್ ಅವರು ಬಿಷ್ಣಾ ಹಾಗೂ ಸುರೀಂದರ್ ಭಗತ್ ಅವರು ಮರ್ಹಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಈ ಮೂರು ಕ್ಷೇತ್ರಗಳು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಾಗಿವೆ. ಬಹು ವಿಧಾನಸಭಾ ಕ್ಷೇತ್ರದಿಂದ ವಿಕ್ರಂ ರಂಧಾವಾ ಅವರನ್ನು ಕಣಕ್ಕಿಳಿಸಿದೆ.