‘ನಾನು ಜೆಡಿಎಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ’ ಎಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯ, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೇರಲು ಸಾಧ್ಯವಾಗಿದ್ದು ಕಾಂಗ್ರೆಸ್ ಪಕ್ಷದಿಂದ.

ಜೆಡಿಎಸ್ ಪಕ್ಷದಿಂದ 2005ರಲ್ಲಿ ಉಚ್ಛಾಟನೆಗೊಂಡಾಗ ಸಿದ್ದರಾಮಯ್ಯ ಅವರ ಹಿಂದೆ ಬೆನ್ನುಲುಬಾಗಿ ನಿಂತದ್ದು ‘ಅಹಿಂದ’ ಸಮುದಾಯ. ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯದ ಜನರು ಅಪಾರ ಸಂಖ್ಯೆಯಲ್ಲಿ ಅವರೊಂದಿಗೆ ನಿಂತಿದ್ದು ಅವರ ಜನಪ್ರಿಯತೆಯನ್ನೂ ಹೆಚ್ಚಿಸಿತ್ತು. ಅದರಿಂದಾಗಿ, ಕಾಂಗ್ರೆಸ್ನಲ್ಲಿ ದೊಡ್ಡ ಅವಕಾಶಗಳ ಬಾಗಿಲು ತೆರೆದುಕೊಂಡವು. ಪಕ್ಷಕ್ಕೂ ಅದರಿಂದ ಲಾಭವಾಯಿತು.

ಕಾಂಗ್ರೆಸ್ ಪಕ್ಷವು 2008ರ ವಿಧಾನಸಭಾ ಚುನಾವಣೆಯನ್ನು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎದುರಿಸಿದರೂ, ಬಿ.ಎಸ್. ಯಡಿಯೂರಪ್ಪ ಸರ್ಕಾರ ರಚನೆಯಾದಾಗ, 2009ರಲ್ಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದು ಸಿದ್ದರಾಮಯ್ಯ. ರಾಜ್ಯ ರಾಜಕಾರಣದಲ್ಲಿ ಅವರ ಪ್ರಭಾವ ಎಷ್ಟಿತ್ತೆಂಬುದಕ್ಕೆ ಇದೊಂದು ಸಾಕ್ಷಿಯಷ್ಟೇ.

ಮತ್ತೊಂದು ಪಕ್ಷದಿಂದ ಅಧಿಕಾರಕ್ಕೇರಿದ ನಾಯಕರು
ಸಿದ್ದರಾಮಯ್ಯ ಮಾತ್ರವಲ್ಲ, ಅಧಿಕಾರಕ್ಕಾಗಿನ ಒಳಜಗಳ, ನಾಯಕತ್ವಕ್ಕಾಗಿನ ಭಿನ್ನಮತ, ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದಲ್ಲಿ ಉಚ್ಚಾಟನೆ, ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಅಸಮಾಧಾನ ಅಥವಾ ಮತ್ಯಾವುದೋ ಕಾರಣಗಳಿಂದಾಗಿ ಮೂಲ/ಮಾತೃ ಪಕ್ಷವನ್ನು ಬಿಟ್ಟು ಬೇರೆ ಬೇರೆ ಪಕ್ಷಗಳ ಬೆನ್ನೇರಿದವರು ಸಾಕಷ್ಟು ಮಂದಿ ಇದ್ದಾರೆ.

ಆ ರೀತಿ ಮತ್ತೊಂದು ಪಕ್ಷಕ್ಕೆ ಹೋಗಿ ಅಲ್ಲಿಯೂ ತಮ್ಮ ಪ್ರಭಾವ ವಿಸ್ತರಿಸಿಕೊಂಡು ಅಧಿಕಾಕ್ಕೇರಿದ ನಾಯಕರ ಪಟ್ಟಿ ಇಲ್ಲಿದೆ.

ಮಾಣಿಕ್ ಸಾಹ (ತ್ರಿಪುರ)
2016ರಲ್ಲಿ ಬಿಜೆಪಿಗೆ ಸೇರುವ ಮುನ್ನ ಕಾಂಗ್ರೆಸ್ನಲ್ಲಿದ್ದ ಮಾಣಿಕ್ ಸಾಹ, ತ್ರಿಪುರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ 2022ರಲ್ಲಿ ನೇಮಕಗೊಂಡರು. ಅದೇ ವರ್ಷ ವಿಧಾನಸಭೆ ಪ್ರವೇಶಿಸಿ, ಮುಖ್ಯಮಂತ್ರಿಯೂ ಆದರು.

ಎನ್.ಬಿರೇನ್ ಸಿಂಗ್ (ಮಣಿಪುರ)
ಕಾಂಗ್ರೆಸ್ ತೊರೆದು 2016ರಲ್ಲಿ ಬಿಜೆಪಿ ಸೇರಿದ ಬಿರೇನ್ ಸಿಂಗ್, 2017ರಲ್ಲಿ ಮಣಿಪುರದ ಮುಖ್ಯಮಂತ್ರಿ ಗಾದಿಗೇರಿದರು.

ಸಾಮ್ರಾಟ್ ಚೌಧರಿ (ಬಿಹಾರ)
1990ರಲ್ಲಿ ಲಾಲು ಯಾದವ್ ಅವರ ಆರ್ಜೆಡಿ ಸೇರಿದ್ದ ಸಾಮ್ರಾಟ್ ಚೌಧರಿ, 2010ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಸೇರ್ಪಡೆಯಾಗಿದ್ದರು. 2017ರಲ್ಲಿ ಬಿಜೆಪಿ ಸೇರಿದ ಚೌಧರಿ, ಇದೀಗ (2026) ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ.

ಪೆಮಾ ಖಂಡು (ಅರುಣಾಚಲ ಪ್ರದೇಶ)
2016ರಲ್ಲಿ ಕಾಂಗ್ರೆಸ್ನಿಂದ ಹೊರಬಂದು ‘ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ’ ಸೇರಿದ್ದ ಪೆಮಾ ಕಂಡು, ಅದೇ ವರ್ಷ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅವರು 2016ರಿಂದಲೂ ಅರುಣಾಚಲದ ಮುಖ್ಯಮಂತ್ರಿಯಾಗಿದ್ದಾರೆ.

ಜ್ಯೋತಿರಾಧಿತ್ಯ ಸಿಂಧಿಯಾ (ಮಧ್ಯಪ್ರದೇಶ)
ಆಗಿನ ಮುಖ್ಯಮಂತ್ರಿ ಕಮಲನಾಥ್ ಅವರೊಂದಿಗಿನ ಭಿನ್ನಮತದ ಕಾರಣ ಕಾಂಗ್ರೆಸ್ ತೊರೆದು 2020ರಲ್ಲಿ ಬಿಜೆಪಿ ಸೇರಿದ ಜ್ಯೋತಿರಾಧಿತ್ಯ ಸಿಂಧಿಯಾ, ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ (ಅಸ್ಸಾಂ)
1991ರಿಂದ 2015ರ ವರೆಗೆ ಕಾಂಗ್ರೆಸ್ನಲ್ಲಿದ್ದ ಹಿಮಂತ ಬಿಸ್ವಾ ಶರ್ಮಾ, 2015ರಲ್ಲಿ ಬಿಜೆಪಿ ಸೇರಿದರು. ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಅವರೊಂದಿಗಿನ ಭಿನ್ನಮತ ಮತ್ತು ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕಾರಣದಿಂದ ಅವರು ಪಕ್ಷ ತೊರೆದಿದ್ದರು.

2021ರಿಂದ ಅಸ್ಸಾಂ ಮುಖ್ಯಮಂತ್ರಿಯಾಗಿದ್ದಾರೆ.

ಸುವೇಂದು ಅಧಿಕಾರಿ (ಪಶ್ಚಿಮ ಬಂಗಾಳ)
ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತನಾಗಿದ್ದ ಸುವೇಂದು ಅಧಿಕಾರಿ, ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಅಸಮಾಧಾನದಿಂದ 2020ರಲ್ಲಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.

2026ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸುವೇಂದು ನೇತೃತ್ವದಲ್ಲಿ ಭಾರಿ ಬಹುಮತ ಸಾಧಿಸಿರುವ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರಿದೆ. ಸುವೇಂದು ಮುಖ್ಯಮಂತ್ರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.