ಭಾರತದಲ್ಲಿ ಸುಮಾರು 120 ವರ್ಷದ ಅವಧಿಯಲ್ಲಿ ಪ್ರಮುಖ ಪಕ್ಷಗಳಲ್ಲಿ ವಿಭಜನೆ ಪ್ರಕ್ರಿಯೆ ನಿರಂತರವಾಗಿ ನಡೆದುಕೊಂಡು ಬಂದಿದೆ. ದೇಶದ ಮಟ್ಟಿಗೆ ಅತ್ಯಂತ ಹಳೆಯ ಹಾಗೂ ಸಂಘಟನೆ ಹೊಂದಿದ್ದ ಕಾಂಗ್ರೆಸ್, ಜನತಾಪಕ್ಷ, ಕಮ್ಯುನಿಸ್ಟ್ ಪಕ್ಷಗಳ ಜತೆಗೆ ಪ್ರಾದೇಶಿಕ ಪಕ್ಷಗಳು ಎರಡು ಮೂರು ಹೋಳಾಗಿವೆ. ಇದು ಈಗಲೂ ಮುಂದುವರಿದಿದೆ. ಇದಕ್ಕೆ ಹೊಸ ಸೇರ್ಪಡೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ತಮಿಳುನಾಡಿನ ಎಐಎಡಿಎಂಕೆ ಪಕ್ಷಗಳ ವಿಭಜನೆ

ಕವಲೊಡೆದ ಕಾಂಗ್ರೆಸ್

* ಅಖಿಲ ಭಾರತ ಕಾಂಗ್ರೆಸ್ ಅತಿ ಹೆಚ್ಚು ಬಾರಿ ವಿಭಜನೆಗೆ ಒಳಗಾಗಿದೆ. ಮೊದಲ ಬಾರಿ ಕಾಂಗ್ರೆಸ್ ಒಡೆದು ಹೋದದ್ದು 1969ರಲ್ಲಿ. ಮೊರಾರ್ಜಿ ದೇಸಾಯಿ, ಕಾಮರಾಜ್, ಎಸ್. ನಿಜಲಿಂಗಪ್ಪ ಅವರಂತಹ ಹಿರಿಯ ನಾಯಕರು ಪಕ್ಷದಿಂದ ಹೊರ ಬಂದು ರೂಪಿಸಿದ್ದು ಕಾಂಗ್ರೆಸ್(ಒ).

* ಕಾಂಗ್ರೆಸ್ ಮತ್ತೊಮ್ಮೆ ಒಡೆದದ್ದು 1978ರಲ್ಲಿ. ಆಗ ರಾಜಗೋಪಾಲಾಚಾರಿ, ಮಿನು ಮಸಾನಿ ಸಹಿತ ಹಲವರು ಸಿಡಿದೆದ್ದರು. ಆಗ ಕಾಂಗ್ರೆಸ್ ಸ್ವತಂತ್ರ ಪಕ್ಷವಾಗಿ ರೂಪುಗೊಂಡಿತು.

* ಇದೇ ವೇಳೆ ಇಂದಿರಾಗಾಂಧಿ ಅವರ ಬಣದಡಿ ಇಂದಿರಾ ಕಾಂಗ್ರೆಸ್ ಹುಟ್ಟಿಕೊಂಡಿತು. ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಕಾಂಗ್ರೆಸ್ (ಐ) ಸಕ್ರಿಯವಾಯಿತು.

* ಇದಾದ ನಂತರ 1998ರಲ್ಲಿ ಪಶ್ಚಿಮ ಬಂಗಾಳದ ಪ್ರಮುಖ ನಾಯಕಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ನಿಂದ ದೂರವಾದರು. ಅವರು ಹುಟ್ಟು ಹಾಕಿದ್ದು ತೃಣಮೂಲ ಕಾಂಗ್ರೆಸ್ ಪಕ್ಷ. ಆನಂತರ ಒಂದೂವರೆ ದಶಕ ಕಾಲ ಅಧಿಕಾರದಲ್ಲಿದ್ದ ಮಮತಾ 2026ರ ಚುನಾವಣೆಯಲ್ಲಿ ಸೋತರು. ಈಗ ಆ ಪಕ್ಷವೂ ಒಡೆಯುವ ಹಂತ ತಲುಪಿದ್ದು ರುತಬ್ರತಾ ಬ್ಯಾನರ್ಜಿ ಬಣ ರೂಪುಗೊಂಡಿದೆ.

* 1999ರಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ವಿಘಟನೆ ಕಂಡಿತು. ಹಿರಿಯ ನಾಯಕ ಶರದ್ ಪವಾರ್ ಅವರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ( ಎನ್ಸಿಪಿ) ಅನ್ನು ಹುಟ್ಟು ಹಾಕಿದರು. ಮೂರು ವರ್ಷದ ಹಿಂದೆ ಈ ಪಕ್ಷವೂ ಒಡೆದು ಅಜಿತ್ ಪವಾರ್ ಪ್ರತ್ಯೇಕ ಬಣ ರೂಪಿಸಿಕೊಂಡು ಬಿಜೆಪಿ ಜತೆ ಸೇರಿದರು. ಅಜಿತ್ ಪವಾರ್ ನಂತರ ಪತ್ನಿ ಸುನೇತ್ರಾ ಪವಾರ್ ಪಕ್ಷ ಮುನ್ನಡೆಸುತ್ತಿದ್ದಾರೆ. ಎನ್ಸಿಪಿ ಎರಡೂ ಬಣಗಳು ಸಕ್ರಿಯವಾಗಿವೆ

* ಆಂಧ್ರಪ್ರದೇಶದಲ್ಲಿ 2011ರಲ್ಲಿ ಕಾಂಗ್ರೆಸ್ ಒಡೆದು ವೈಎಸ್ಆರ್ ಕಾಂಗ್ರೆಸ್ ರೂಪುಗೊಂಡಿತು. ಜಗನ್ ಮೋಹನ್ ರೆಡ್ಡಿ ಅಧಿಕಾರಕ್ಕೂ ಬಂದರು. ಹಿಂದಿನ ವರ್ಷ ಈ ಪಕ್ಷವೂ ಸೋಲು ಅನುಭವಿಸಿದೆ.

* ಮಣಿಪುರದಲ್ಲಿ ಪಿ.ಎ.ಸಂಗ್ಮ, ಛತ್ತೀಸಗಡದಲ್ಲಿ ಅಜಿತ್ ಜೋಗಿ ಕಾಂಗ್ರೆಸ್ ವಿರುದ್ದ ಸಿಡಿದೆದ್ದು ತಮ್ಮದೇ ಪಕ್ಷ ಕಟ್ಟಿಕೊಂಡರು. ಕೇರಳಂ, ಜಮ್ಮು ಕಾಶ್ಮೀರ ಸಹಿತ ಹಲವರು ರಾಜ್ಯಗಳಲ್ಲಿ ಕಾಂಗ್ರೆಸ್ ಬಣ ಹುಟ್ಟಿಕೊಂಡವು. ಪಂಜಾಬ್, ಹರಿಯಾಣದಲ್ಲೂ ಕಾಂಗ್ರೆಸ್ ವಿಭಜನೆಯಾದ ಇತಿಹಾಸ ಹೊಂದಿದೆ

ಜನತಾಪರಿವಾರ

* ಕಾಂಗ್ರೆಸ್ ನಂತರ ಪ್ರಮುಖ ರಾಜಕೀಯ ಪಕ್ಷವಾದ ಜನತಾಪಕ್ಷವೂ ಹಲವು ರೂಪದಲ್ಲಿ ವಿಭಜನೆ ಕಂಡಿದೆ. 1977ರಲ್ಲಿ ಜನತಾಪಕ್ಷ ವಿಭಜನೆಯಾಗಿ ಬಿಜೆಪಿ ರೂಪ ಪಡೆಯಿತು. 1980ರಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಯಿತು.

* ಜನತಾಪಕ್ಷದಲ್ಲಿಯೇ ಇನ್ನೊಂದು ಬಣ 1998ರಲ್ಲಿ ಜನತಾದಳವಾಗಿ ಸಮಾಜವಾದಿ ರೂಪ ಪಡೆಯಿತು. ಕರ್ನಾಟಕ ಮಾತ್ರವಲ್ಲದೇ, ಬಿಹಾರ ಸಹಿತ ಹಲವು ರಾಜ್ಯಗಳಲ್ಲಿ ಜನತಾದಳ ಸಂಘಟನೆ ಶುರುವಾಯಿತು.

* 1992ರಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮುಲಾಯಂ ಸಿಂಗ್ ಯಾದವ್ ಸಹಿತ ಹಲವರ ನಾಯಕತ್ವದಲ್ಲಿ ಅಸ್ತಿತ್ವಕ್ಕೆ ಬಂದಿತು.

* ಬಿಹಾರದಲ್ಲಿ ಜನತಾದಳವು ಎರಡು ಭಾಗವಾಗಿ ಜನತಾದಳ (ಸಂಯುಕ್ತ) 1997ರಲ್ಲಿ ಹುಟ್ಟಿಕೊಂಡಿತು. ಶರದ್ ಯಾದವ್, ನಿತೀಶ್ ಕುಮಾರ್, ಜಾರ್ಜ್ ಫರ್ನಾಂಡಿಸ್, ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್ ಸಹಿತ ಹಲವರು ಜೆಡಿ ಯುನಲ್ಲಿ ಗುರುತಿಸಿಕೊಂಡರು. ಈಗ ನಿತೀಶ್ ಕುಮಾರ್ ನೇತೃತ್ವದಲ್ಲಿ ಜೆಡಿಯು ಸಕ್ರಿಯವಾಗಿದೆ.

* 1989ರಲ್ಲಿಯೇ ಸಮಾಜವಾದಿ ಜನತಾದಳ ರೂಪಿಸಿ ನಂತರ ಜನತಾದಳವನ್ನು ಸೇರಿದ್ದ ಎಚ್.ಡಿ. ದೇವೇಗೌಡ ಅವರು ಸಿದ್ದರಾಮಯ್ಯ ಸಹಿತ ಹಲವರೊಂದಿಗೆ 1999ರಲ್ಲಿ ಜನತಾದಳ( ಜಾತ್ಯತೀತ) ಹುಟ್ಟು ಹಾಕಿದರು. ಇದಕ್ಕೂ ಮೊದಲೇ ರಾಮಕೃಷ್ಣ ಹೆಗಡೆ ಅವರು ಲೋಕಜನಶಕ್ತಿ, ಜಾರ್ಜ್ ಫರ್ನಾಂಡಿಸ್ ಅವರು ಸಮತಾ ಪಕ್ಷ, ರಾಮವಿಲಾಸ್ ಪಾಸ್ವಾನ್ ಲೋಕಜನಶಕ್ತಿ ಪಕ್ಷ ಹುಟ್ಟು ಹಾಕಿದ್ದು, ಈಗ ಅವರ ಪುತ್ರ ಚಿರಾಗ್ ಪಾಸ್ವಾನ್ ಪಕ್ಷ ಮುನ್ನೆಡೆಸುತ್ತಿದ್ದಾರೆ.

* ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಶಿವಸೇನೆ ಮಹಾರಾಷ್ಟ್ರದಲ್ಲಿ 2023ರಲ್ಲಿ ಎರಡು ಹೋಳಾಯಿತು. ಉದ್ದವ್ ಠಾಕ್ರೆ ಬಣ ಹಾಗೂ ಏಕನಾಥ ಶಿಂದೆ ಬಣ ಪ್ರತ್ಯೇಕಗೊಂಡಿತು. ಉದ್ಧವ್ ಬಣ ಕಾಂಗ್ರೆಸ್, ಶಿಂಧೆ ಬಣ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದೆ.

ಕಮ್ಯುನಿಸ್ಟ್ ಪಕ್ಷ

* ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷಗಳ ಅಸ್ತಿತ್ವವೂ ಹಳೆಯದ್ದೇ. 1925ರಲ್ಲಿ ಆರಂಭಗೊಂಡ ಕಮ್ಯುನಿಸ್ಟ್ ಪಕ್ಷ ಶತಮಾನವನ್ನು ಪೂರೈಸಿದೆ. ಪಶ್ಚಿಮ ಬಂಗಾಳ, ಕೇರಳ, ತ್ರಿಪುರ ಸಹಿತ ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಈ ಪಕ್ಷ 2026ರಲ್ಲಿ ಕೇರಳ ಚುನಾವಣೆ ನಂತರ ಎಲ್ಲೆಡೆ ಅಧಿಕಾರ ಕಳೆದುಕೊಂಡಿದೆ.

* 1964ರಲ್ಲಿ ಕಮ್ಯುನಿಸ್ಟ್ ಪಕ್ಷದ ವಿಚಾರ ಭಿನ್ನಾಭಿಪ್ರಾಯದಿಂದ ಒಡಕು ಕಾಣಿಸಿಕೊಂಡು ಸಿಪಿಐ ಮಾರ್ಕ್ವಿಸ್ಟ್(ಎಂ) ಪಕ್ಷ ಅಸ್ತಿತ್ವಕ್ಕೆ ಬಂದಿತು.

* 1977 ರಲ್ಲಿ ಸಿಪಿಐಎಂ ಪಕ್ಷವು ಮತ್ತೆ ಒಡೆದು ಸಿಪಿಐಎಂ ಲೆನಿನ್ ಪಕ್ಷ ಬಣ ಸೃಷ್ಟಿಯಾಯಿತು.

ದ್ರಾವಿಡ ಪಕ್ಷ

* ತಮಿಳುನಾಡಿನಲ್ಲಿ ದ್ರಾವಿಡ ಚಳವಳಿ ಫಲವಾಗಿ ರೂಪುಕೊಂಡಿದ್ದು ಡಿಎಂಕೆ ಪಕ್ಷ. ಜಸ್ಟಿಸ್ ಪಾರ್ಟಿ ಅಣ್ಣಾದುರೈ ನೇತೃತ್ವದಲ್ಲಿ 1949ರಲ್ಲಿ ಡಿಎಂಕೆಯಾಗಿ ಪ್ರತ್ಯೇಕ ರೂಪ ಪಡೆಯಿತು. 1967ರಲ್ಲಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿತು.

* ಎಂ.ಕರುಣಾನಿಧಿ ಹಾಗೂ ಎಂ.ಜಿ.ರಾಮಚಂದ್ರನ್ ಅವರ ನಡುವಿನ ಭಿನ್ನಾಭಿಪ್ರಾಯದಲ್ಲಿ ಎಐಎಡಿಎಂಕೆ ಹುಟ್ಟಿಕೊಂಡಿತು. 1972ರಲ್ಲಿ ರಚನೆಯಾದ ನಂತರ ತಮಿಳುನಾಡಿನಲ್ಲಿ ಅಧಿಕಾರವನ್ನೂ ಪಡೆಯಿತು.

* ಜಯಲಲಿತಾ ನಿಧನ ನಂತರ ನಾಯಕತ್ವ ಕೊರತೆ ಎದುರಿಸಿದ ಎಐಎಡಿಎಂಕೆ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಪನ್ನೀರಸೆಲ್ವಂ ನಡುವಿನ ಭಿನ್ನಾಭಿಪ್ರಾಯದಿಂದ ವಿಘಟನೆಯಾಯಿತು. 2026ರ ಚುನಾವಣೆ ನಂತರ ಎಐಎಡಿಎಂಕೆ ಷಣ್ಮುಗಂ ಬಣ ರೂಪುಗೊಂಡು ಆಡಳಿತಾರೂಢ ಟಿವಿಕೆಗೆ ಬೆಂಬಲ ಸೂಚಿಸಿದೆ. ಕೆಲ ಶಾಸಕರು ರಾಜೀನಾಮೆ ಕೂಡ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.