ಚೆನ್ನೈ: ತಮಿಳುನಾಡಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಭರ್ಜರಿ ಮುನ್ನಡೆ ಸಾಧಿಸಿರುವ ಬೆನ್ನಲೇ ಚುನಾವಣೆ ಚಾಣಕ್ಷ ಖ್ಯಾತಿಯ ಪ್ರಶಾಂತ್ ಕಿಶೋರ್ ಅವರ ಭವಿಷ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗುತ್ತಿದೆ.

ಪ್ರಶಾಂತ್ ಕಿಶೋರ್ ಅವರು ಸುಮಾರು ಒಂದು ವರ್ಷದ ಹಿಂದೆ ನುಡಿದಿದ್ದ ಭವಿಷ್ಯದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಪಕ್ಷದ ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಶಾಂತ್ ಕಿಶೋರ್ ಚುನಾವಣೆ ಪೂರ್ವ ಒಪ್ಪಂದ ಮಾಡಿಕೊಳ್ಳದಂತೆ ವಿಜಯ್ ಅವರಿಗೆ ಹೇಳಿದ್ದರು.

ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿಶೋರ್ ಹೀಗೆ ಹೇಳಿದ್ದರು ‘ಈ ವಿಡಿಯೊವನ್ನು ಸೇವ್ ಮಾಡಿಟ್ಟುಕೊಳ್ಳಿ; ಒಂದು ವೇಳೆ ವಿಜಯ್ ಅವರು ಚುನಾವಣೆಯಲ್ಲಿ ಒಬ್ಬಂಟಿಯಾಗಿ ಸ್ಪರ್ಧಿಸಿದರೆ, ಅವರು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದ್ದಾರೆ ಎಂದು ಹೇಳಿದ್ದರು.
.ಕಿಂಗ್ ಮೇಕರ್ ಅಲ್ಲ 'ಕಿಂಗ್' ಆಗುವತ್ತ ದಳಪತಿ ವಿಜಯ್: TVK ಕೈ ಹಿಡಿದ ಅಂಶಗಳಿವು....ತಮಿಳುನಾಡು ಚುನಾವಣೆ: ಸ್ಟ್ರಾಂಗ್ ರೂಂಗಳ ಮೇಲೆ ನಿಗಾ ವಹಿಸಿ–ಅಭ್ಯರ್ಥಿಗಳಿಗೆ ವಿಜಯ್.
ಸದ್ಯದ ಟ್ರೆಂಡ್ಗಳ ಪ್ರಕಾರ, ವಿಜಯ್ ಅವರ ಟಿ.ವಿ.ಕೆ 109 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಪ್ರಬಲ ಪಕ್ಷಗಳಾದ ಎಐಎಡಿಎಂಕೆ 60 ಮತ್ತು ಡಿಎಂಕೆ 65 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದ್ದು, ಟಿವಿಕೆ ಪಕ್ಷ ಮ್ಯಾಜಿಕ್ ಸಂಖ್ಯೆ ಸಮೀಪಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.