ಚಂಡೀಗಢ: ಅಮೃತಸರದ ಖಾಸಾದಲ್ಲಿರುವ ಸೇನೆಯ ದಂಡು ಪ್ರದೇಶ ಹಾಗೂ ಜಲಂಧರ್ನಲ್ಲಿರುವ ಭದ್ರತಾ ಪಡೆಯ (ಬಿಎಸ್ಎಫ್) ಕೇಂದ್ರ ಕಚೇರಿ ಬಳಿ ಮಂಗಳವಾರ ರಾತ್ರಿ ಸ್ಫೋಟಗಳು ಸಂಭವಿಸಿವೆ.

ಬಿಎಸ್ಎಫ್ ಕಚೇರಿಯ ಹೊರಗೆ ರಾತ್ರಿ 8 ಗಂಟೆ ಸುಮಾರಿಗೆ ಮೊದಲ ಸ್ಫೋಟ ಸಂಭವಿಸಿದ್ದು, ರಾತ್ರಿ 11 ಗಂಟೆ ಸುಮಾರಿಗೆ ಅಮೃತಸರ ಸೇನಾ ದಂಡು ಪ್ರದೇಶದ ಗಡಿಭಾಗದ ಗೋಡೆ ಬಳಿ ಎರಡನೇ ಸ್ಫೋಟ ಸಂಭವಿಸಿದೆ.

ಬಿಎಸ್ಎಫ್ ಕಚೇರಿ ಬಳಿ ಸಂಭವಿಸಿದ ಸ್ಫೋಟದ ದೃಶ್ಯವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಂದು ಸ್ಕೂಟರ್ ಛಿದ್ರವಾಗಿದ್ದು, ಸಂಚಾರ ಸಿಗ್ನಲ್ ಕಂಬ ಹಾಗೂ ಅಂಗಡಿಯ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.

ಈ ಸ್ಫೋಟಗಳು ಪಂಜಾಬ್ನ ಜನರನ್ನು ಆತಂಕಕ್ಕೀಡು ಮಾಡಿವೆ. ಘಟನಾ ಸ್ಥಳಕ್ಕೆ ಡಿಜಿಪಿ ಗೌರವ್ ಯಾದವ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ, ಬಿಎಸ್ಎಫ್ ಐಜಿಯೊಂದಿಗೆ ಸಭೆ ನಡೆಸಿದ್ದಾರೆ.

‘ಪೊಲೀಸರು ತನಿಖೆ ಕೈಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಕೆಲ ಸುಳಿವುಗಳು ದೊರೆತಿವೆ. ಜಲಂಧರ್ನಲ್ಲಿ ನಡೆದ ಸ್ಫೋಟದಲ್ಲಿ ಯಾವುದೋ ಒಂದು ರೀತಿಯ ಸ್ಫೋಟಕ ವಸ್ತುವನ್ನು ಬಳಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಸ್ಥಳದಲ್ಲಿ ದೊರೆತ ಸ್ಫೋಟಕ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸ್ ಆಯುಕ್ತ ಧನಪ್ರೀತ್ ಕೌರ್ ತಿಳಿಸಿದ್ದಾರೆ.

‘ಸಣ್ಣಪುಟ್ಟ ಸ್ಫೋಟ ನಡೆಸುವ ಬಿಜೆಪಿ’

‘ಅಮೃತಸರ ಹಾಗೂ ಜಲಂಧರ್ ಬಳಿ ಸಂಭವಿಸಿದ ಸ್ಫೋಟಗಳು ಸಣ್ಣ ಮಟ್ಟದವು. ಕಡಿಮೆ ತೀವ್ರತೆ ಹೊಂದಿದ್ದವು’ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಮುಗಿದಿದ್ದು ಈಗ ಪಂಜಾಬ್ನ ಸರದಿ ಎಂದು ಬಿಜೆಪಿಯವರು ಹೇಳಿದ್ದಾರೆ. ಮಂಗಳವಾರ ಸಂಭವಿದ ಸಣ್ಣ ಸ್ಫೋಟಗಳು ಪಂಜಾಬ್ ವಿಧಾನಸಭಾ ಚುನಾವಣೆಗೆ ಅವರ ಸಿದ್ಧತೆಯ ಭಾಗವಾಗಿರುವಂತೆ ತೋರುತ್ತಿವೆ. ಹಿಂಸಾಚಾರವನ್ನು ಪ್ರಚೋದಿಸುವ ಹಾಗೂ ಜನರನ್ನು ಹೆದರಿಸುವ ಮೂಲಕ ಮತ ಪಡೆಯಲು ಪ್ರಯತ್ನಿಸುವುದು ಬಿಜೆಪಿಯ ಕಾರ್ಯವೈಖರಿ’ ಎಂದು ಆರೋಪಿಸಿದ್ದಾರೆ.

‘ಬಿಜೆಪಿಯು ಚುನಾವಣೆ ನಡೆಯುವ ಪ್ರತಿಯೊಂದು ರಾಜ್ಯದಲ್ಲೂ ಗಲಭೆ ದಂಗೆ ನಡೆಯುವಂತೆ ಪ್ರಚೋದಿಸುತ್ತದೆ. ಸಣ್ಣಪುಟ್ಟ ಸ್ಫೋಟಗಳನ್ನು ನಡೆಸುತ್ತದೆ. ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಇದು ಪಂಜಾಬ್ಗಾಗಿ ಅವರ ಸಿದ್ಧತೆಯನ್ನು ತೋರಿಸುತ್ತದೆ’ ಎಂದು ಆರೋಪಿಸಿದ್ದಾರೆ. ‘

ಸಾಕ್ಷ್ಯ ನೀಡಿ ಇಲ್ಲವೇ ರಾಜೀನಾಮೆ ಕೊಡಿ’

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುನಿಲ್ ಜಾಖಡ್ ‘ಈ ಆರೋಪಕ್ಕೆ ಸಾಕ್ಷ್ಯಾಧಾರ ನೀಡಬೇಕು ಇಲ್ಲವೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ. ‘ಮಾನ್ ಅವರ ಹೇಳಿಕೆಯು ಬೇಜವಾಬ್ದಾರಿಯುತ ಅಜಾಗರೂಕ ಹಾಗೂ ಕಳವಳಕಾರಿಯಾದದ್ದು. ಈ ಸ್ಫೋಟಗಳ ಹಿಂದೆ ಪಾಕಿಸ್ತಾನದ ಐಎಸ್ಐ ಕೈವಾಡವಿರುವ ಬಗ್ಗೆ ಡಿಜಿಪಿ ಹೇಳಿದ್ದಾರೆ. ಆದರೆ ಮುಖ್ಯಮಂತ್ರಿಯು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಿಜೆಪಿಯ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಪಾಕಿಸ್ತಾನದ ಐಎಸ್ಐ ಕೈವಾಡ ಶಂಕೆ’

‘ಈ ಸ್ಫೋಟಗಳ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ ಈ ಘಟನೆಯ ಹಿಂದೆ ಪಾಕಿಸ್ತಾನದ ಐಎಸ್ಐ ಕೈವಾಡವಿರಬಹುದು’ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ. ‘ಅಪರೇಷನ್ ಸಿಂಧೂರ ವಾರ್ಷಿಕೋತ್ಸವಕ್ಕೆ ಪಂಜಾಬ್ನಲ್ಲಿ ಅಡ್ಡಿ ಉಂಟುಮಾಡಲು ಪಾಕಿಸ್ತಾನದ ಐಎಸ್ಐ ಯೋಜನೆಗಳ ಭಾಗವಾಗಿ ಈ ಸ್ಫೋಟ ನಡೆದಿರಬಹುದು’ ಎಂದು ಶಂಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.