ಚಂಡೀಗಢ: ಆಮ್ ಆದ್ಮಿ ಪಕ್ಷದ ಏಳು ಮಂದಿ ರಾಜ್ಯಸಭಾ ಸದ್ಯಸರು ಬಿಜೆಪಿಗೆ ಸೇರ್ಪಡೆಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಮೇ 5ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬುಧವಾರ ಹೇಳಿದ್ದಾರೆ.

ಬಿಜೆಪಿ ಸೇರಿರುವ ರಾಜ್ಯಸಭೆ ಸಂಸದರ ಸ್ಥಾನ ಹಿಂಪಡೆಯುವ ಕುರಿತು ಪಕ್ಷದ ಶಾಸಕರೊಂದಿಗೆ ಭೇಟಿಯಾಗಲು ಸಮಯಾವಕಾಶ ನೀಡುವಂತೆ ಮಾನ್ ಅವರು ರಾಷ್ಟ್ರಪತಿ ಅವರಿಗೆ ಮನವಿ ಮಾಡಿದ್ದರು.

‘ರಾಷ್ಟ್ರಪತಿಯವರು ಮೇ 5ರಂದು ಮಧ್ಯಾಹ್ನ 12 ಗಂಟೆಗೆ ಭೇಟಿ ಮಾಡಲು ಸಮಯ ನಿಗದಿಪಡಿಸಿದ್ದಾರೆ. ನಾನು ಖಂಡಿತವಾಗಿಯೂ ಅವರನ್ನು ಭೇಟಿಯಾಗುತ್ತೇನೆ’ ಎಂದು ಮಾನ್ ಸುದ್ದಿಗಾರರಿಗೆ ತಿಳಿಸಿದರು.

ಏಪ್ರಿಲ್ 24ರಂದು ಆಮ್ ಆದ್ಮಿ ಪಕ್ಷದ 10 ರಾಜ್ಯಸಭಾ ಸಂಸದ ಪೈಕಿ ಏಳು ಸಂಸದರಾದ ರಾಘವ್ ಛಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್, ಹರ್ಭಜನ್ ಸಿಂಗ್, ರಾಜೇಂದ್ರ ಗುಪ್ತಾ, ವಿಕ್ರಮಜಿತ್ ಸಾಹಿ ಮತ್ತು ಸ್ವಾತಿ ಮಲಿವಾಲ್ ಅವರು ಬಿಜೆಪಿ ಸೇರಿದ್ದರು. 'ಪಕ್ಷವು ತನ್ನ ಮೂಲ ತತ್ವಗಳು ಮತ್ತು ನೈತಿಕ ಮೌಲ್ಯಗಳಿಂದ ದೂರ ಸರಿದಿದೆ’ ಎಂದು ಅವರು ಆರೋಪಿಸಿದ್ದರು.

ಪಕ್ಷ ತೊರೆದ ಏಳು ಸದ್ಯಸರ ಪೈಕಿ ಆರು ಮಂದಿ ಪಂಜಾಬ್ನವರಾಗಿದ್ದಾರೆ. ರಾಜ್ಯಸಭಾ ಅಧ್ಯಕ್ಷ ಸಿ.ಪಿ.ರಾಧಾಕೃಷ್ಣನ್ ಸೋಮವಾರ ಬಿಜೆಪಿಯೊಂದಿಗೆ ಸದ್ಯಸರ ವಿಲೀನವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.