ನವದೆಹಲಿ/ಲೂಧಿಯಾನ: ಪಂಜಾಬ್ ಕೈಗಾರಿಕಾ ಸಚಿವ ಸಂಜೀವ್ ಅರೋರಾ ಮತ್ತು ಅವರ ಆಪ್ತರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
.ಆಪ್ ಸಂಸದ ಅಶೋಕ್ ಮಿತ್ತಲ್ ಮೇಲೆ ಇ.ಡಿ ದಾಳಿ: ಚುನಾವಣೆ ಸಿದ್ಧತೆ ಎಂದ ಮಾನ್ .
ಲೂಧಿಯಾನ ಸೇರಿದಂತೆ ರಾಜ್ಯದ ಹಲವು ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ (ಎಎಪಿ) ಪ್ರಮುಖ ನಾಯಕರಾಗಿರುವ ಅರೋರಾ ಅವರ ಮನೆ ಮತ್ತು ಕಚೇರಿಗಳ ಮೇಲೆ 2024 ರಲ್ಲಿಯೂ ಇ.ಡಿ ದಾಳಿ ನಡೆಸಿತ್ತು.

ಕೈಗಾರಿಕೆಗೆ ಮೀಸಲಾಗಿರುವ ಭೂಮಿಯನ್ನು ವಸತಿ ಯೋಜನೆಗಳಿಗೆ ಅಕ್ರಮವಾಗಿ ಬಳಸಿಕೊಂಡು ಅರೋರಾ ಅವರಿಗೆ ಸೇರಿದ ಕಂಪನಿಗಳು ಮತ್ತು ಇತರ ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಭಾರಿ ನಷ್ಟ ಉಂಟುಮಾಡಿವೆ. ಕೋಟ್ಯಂತರ ರೂಪಾಯಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಇ.ಡಿ ಈ ಹಿಂದೆ ಹೇಳಿತ್ತು.
.ರಾಘವ್ ಛಡ್ಡಾಗೆ ನೀಡಿದ್ದ ಝಡ್ ಪ್ಲಸ್ ಭದ್ರತೆ ಹಿಂಪಡೆದ ಪಂಜಾಬ್ ಸರ್ಕಾರ.
ಕೆಲವು ದಿನಗಳ ಹಿಂದೆಯಷ್ಟೇ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ರಾಜ್ಯಸಭಾ ಸಂಸದ ಅಶೋಕ್ ಕುಮಾರ್ ಮಿತ್ತಲ್ ಅವರಿಗೆ ಸೇರಿದ ಮನೆ, ಪಂಜಾಬ್ ಹಾಗೂ ಹರಿಯಾಣದಲ್ಲಿರುವ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.
.ಬಿಜೆಪಿಯೊಂದಿಗೆ ರಾಘವ್ ಚಡ್ಡಾ ರಾಜಿ ಮಾಡಿಕೊಂಡಿದ್ದಾರೆ: ಪಂಜಾಬ್ ಸಿಎಂ ಮಾನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.