ನವದೆಹಲಿ: ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಅರ್ಜಿಗಳ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಅರ್ಜಿಗಳ ಸಮಿತಿಯನ್ನು ಪುನರ್ರಚಿಸಿದ ನಂತರ, ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸದನದ ಹತ್ತು ಸದಸ್ಯರ ನಾಮನಿರ್ದೇಶನ ಮಾಡಿದ್ದಾರೆ.

ಇದಲ್ಲದೆ, ರಾಜ್ಯಸಭೆ ಸದಸ್ಯೆ ಡಾ. ಮೇನಕಾ ಗುರುಸ್ವಾಮಿ ಅವರನ್ನು ಕಾರ್ಪೊರೇಟ್ ಕಾನೂನುಗಳು (ತಿದ್ದುಪಡಿ) ಮಸೂದೆ, 2026ರ ಜಂಟಿ ಸಮಿತಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ.

ಅಲ್ಲದೆ, ಈ ಜಂಟಿ ಸಮಿತಿಗೆ ಅರವಿಂದ್ ಗಣಪತ್ ಸಾವಂತ್ ಅವರನ್ನು ಸ್ಪೀಕರ್ ಅವರು ನಾಮನಿರ್ದೇಶನ ಮಾಡಿರುವುದಾಗಿ ಲೋಕಸಭೆಯ ಅಧಿಸೂಚನೆ ತಿಳಿಸಿದೆ.

ಸಮಿತಿ ಸದಸ್ಯರು: ಹರ್ಷ್ ಮಹಾಜನ್, ಗುಲಾಮ್ ಅಲಿ, ಶಂಭು ಶರಣ್ ಪಟೇಲ್, ಮಯಂಕ್ ಕುಮಾರ್ ನಾಯಕ್, ಮಸ್ತಾನ್ ರಾವ್ ಯಾದವ್, ಜೆ.ಬಿ. ಮಾಥೆರ್ ಹಿಶಾಮ್, ಸುಭಾಶೀಷ್ ಖುಂಟಿಯಾ, ರಂಗವ್ರಾ ನಾರ್ಜಾರಿ ಮತ್ತು ಸಂತೋಷ್ ಕುಮಾರ್ ಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.