ನವದೆಹಲಿ: ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ಸುಮಾರು 10 ಲಕ್ಷ ಜನರು ಇನ್ಸ್ಟಾಗ್ರಾಂನಲ್ಲಿ ಅನ್ಫಾಲೊ ಮಾಡಿದ್ದಾರೆ.

ಶುಕ್ರವಾರ ಎಎಪಿಯ 6 ರಾಜ್ಯಸಭಾ ಸಂಸದರ ಜೊತೆ ರಾಘವ್ ಚಡ್ಡಾ ಬಿಜೆಪಿಗೆ ಸೇರಿದ್ದರು. ಆದರೆ, ಚಡ್ಡಾ ಅವರ ಈ ನಿರ್ಧಾರ ಜೆನ್–ಝಿಗಳಿಗೆ ಮೆಚ್ಚುಗೆಯಾದಂತೆ ಕಾಣುತ್ತಿಲ್ಲ ಎಂದು ವರದಿಗಳು ತಿಳಿಸಿವೆ.

ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಚಡ್ಡಾ ಅವರು ಬಿಜೆಪಿಗೆ ಸೇರಿದ 24 ಗಂಟೆಗಳ ಒಳಗಾಗಿ ಇನ್ಸ್ಟಾಗ್ರಾಂನಲ್ಲಿ ಸುಮಾರು ಹತ್ತು ಲಕ್ಷ ಫಾಲೊವರ್ಸ್ಗಳನ್ನು ಕಳೆದುಕೊಂಡಿದ್ದಾರೆ. ಶುಕ್ರವಾರ 14.6 ಮಿಲಿಯನ್ ಇದ್ದ ಫಾಲೊವರ್ಸ್ಗಳ ಸಂಖ್ಯೆ, ಶನಿವಾರ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ 13.5 ಮಿಲಿಯನ್ಗೆ ಇಳಿದಿದೆ.

ಯುವಜನತೆ, ವಿಶೇಷವಾಗಿ ಜೆನ್-ಝಿಗಳ ಆಕ್ರೋಶ ಇದಕ್ಕೆ ಪ್ರಮುಖ ಕಾರಣವಿರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

‘ಇನ್ಸ್ಟಾಗ್ರಾಮ್ನಲ್ಲಿ ಜೆನ್-ಝಿ ಆರಂಭಿಸಿದ ವೈರಲ್ 'ಅನ್ಫಾಲೋ' ಅಭಿಯಾನದಿಂದಾಗಿ 24 ಗಂಟೆಗಳಲ್ಲಿ ರಾಘವ್ ಚಡ್ಡಾ ಅವರ ಫಾಲೋವರ್ಗಳ ಸಂಖ್ಯೆ 10 ಲಕ್ಷದಷ್ಟು ಕುಸಿದಿದೆ. ಇಂಟರ್ನೆಟ್ ನಿಮ್ಮನ್ನು ರಾತ್ರೋರಾತ್ರಿ ಹೀರೋ ಮಾಡಬಲ್ಲದು, ಅದೇ ರೀತಿ ರಾತ್ರೋರಾತ್ರಿ ಶೂನ್ಯಕ್ಕೂ ತಳ್ಳಬಲ್ಲದು’ ಎಂದು ಎನ್ಸಿಪಿ (ಎಸ್ಪಿ) ವಕ್ತಾರ ಅನೀಶ್ ಗವಾಂಡೆ ಹೇಳಿದ್ದಾರೆ.

ಜೆನ್–ಝಿಗಳ ಹೀರೊ ಆಗಿದ್ದ ಚಡ್ಡಾ:

ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುವ ವಿಷಯಗಳನ್ನು ಮುಖ್ಯ ಚರ್ಚೆಗೆ ತರುವ ಮೂಲಕ ಚಡ್ಡಾ, ಜೆನ್–ಝಿಗಳ ಹೀರೊ ಆಗಿದ್ದರು.

ಪಿತೃತ್ವ ರಜೆ , ಸಂಚಾರ ದಟ್ಟಣೆ, ಗಿಗ್ ಕಾರ್ಮಿಕರ ಶೋಷಣೆಯಂತಹ ವಿಷಯಗಳ ಬಗ್ಗೆ ಅವರು ಧ್ವನಿ ಎತ್ತಿದ್ದರು. ಗಿಗ್ ಕಾರ್ಮಿಕರ ಸವಾಲುಗಳ ಬಗ್ಗೆ ತಿಳಿದುಕೊಳ್ಳಲು ಒಂದು ದಿನಮಟ್ಟಿಗೆ ಬ್ಲಿಂಕಿಟ್ ಡೆಲಿವರಿ ಬಾಯ್ ಆಗಿಯೂ ಕೆಲಸ ಮಾಡಿದ್ದರು.

ಚಡ್ಡಾ ಅವರನ್ನು ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ತೆಗೆದುಹಾಕಿದಾಗಲೂ ಅವರಿಗೆ ಅಪಾರ ಬೆಂಬಲ ವ್ಯಕ್ತವಾಗಿತ್ತು. ‘ಜೆನ್–ಝಿ’ ಪಕ್ಷವನ್ನು ಸ್ಥಾಪಿಸುವಂತೆಯೂ ಸಲಹೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.