ನವದೆಹಲಿ: ಬುಡಕಟ್ಟು ಸಮುದಾಯವನ್ನು ರಾಜಕೀಯವಾಗಿ ಸಬಲೀಕರಣಗೊಳಿಸುವ ಮೂಲಕ ಆ ಸಮುದಾಯದವರನ್ನು ಸಾಮಾಜಿಕವಾಗಿ ಬಲಪಡಿಸಲು ಕಾಂಗ್ರೆಸ್ ಬಯಸುತ್ತದೆ. ಅದಕ್ಕಾಗಿ ಪಕ್ಷದಲ್ಲೂ ನಾಯಕತ್ವ, ಸ್ಥಾನಮಾನ ನೀಡಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಕೆಲವು ದಿನಗಳ ಹಿಂದೆ ಆದಿವಾಸಿ ಮುಖಂಡರೊಂದಿಗೆ ನಡೆದ ಸಂವಾದದ ವಿಡಿಯೊವನ್ನು ರಾಹುಲ್ ಹಂಚಿಕೊಂಡಿದ್ದಾರೆ. ‘ಕಾಂಗ್ರೆಸ್ ಪಕ್ಷದಲ್ಲಿ ದೇಶದಾದ್ಯಂತ ಬುಡಕಟ್ಟು ಸಮುದಾಯದ ನಾಯಕತ್ವವನ್ನು ಬೆಳೆಸಲು ನಾವು ಬಯಸುತ್ತೇವೆ’ ಎಂದಿದ್ದಾರೆ.

‘ಬುಡಕಟ್ಟು ಸಮುದಾಯದವರಿಗೆ ಸಹಾಯ ಮಾಡಲು ಬಯಸುತ್ತೇನೆ. ಅದಕ್ಕಾಗಿ ಸಮುದಾಯದ ಜನರು ಒಗ್ಗೂಡಬೇಕು ಮತ್ತು ಆದಿವಾಸಿಗಳ ಹಕ್ಕುಗಳಿಗಾಗಿ ನೈಜ ಹೋರಾಟ ನಡೆಸುವವರು ಮುಂದೆ ಬರಬೇಕು. ಆದಿವಾಸಿ ನಾಯಕರಿಗೆ ಬಲ ತುಂಬಬೇಕೆಂಬುದು ನಮ್ಮ ಬಯಕೆಯಾಗಿದ್ದು, ಪ್ರತಿ ರಾಜ್ಯದಲ್ಲಿ 10-15 ಬುಡಕಟ್ಟು ನಾಯಕರು ಹೊರಹೊಮ್ಮಬೇಕೆಂದು ಆಶಿಸುತ್ತೇವೆ’ ಎಂದು ಅವರು ಬುಡಕಟ್ಟು ಸಮುದಾಯದ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

‘ರಾಜಕೀಯ ಅಧಿಕಾರ ನೀಡುವ ಮೂಲಕ ಅವರನ್ನು ಸಾಮಾಜಿಕವಾಗಿ ಬಲಪಡಿಸುವುದು ನನ್ನ ಗುರಿ. ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ನೀಡುವ ಮೂಲಕ ಈ ಕೆಲಸ ಆರಂಭವಾಗಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.