ನವದೆಹಲಿ: ಕೇಂದ್ರ ಸರ್ಕಾರ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸದೇ, ತನ್ನ ಸ್ವಾರ್ಥಕ್ಕಾಗಿ ದೇಶದ ಕೃಷಿ ಕ್ಷೇತ್ರವನ್ನು ಬಲಿಕೊಡಲು ಸಿದ್ಧವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಅವರು ಇತ್ತೀಚೆಗೆ ಲೋಕಸಭೆಯ ಅಧಿವೇಶನದಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನೀಡುವ ಕುರಿತು ಪ್ರಸ್ತಾಪಿಸಿ, ‘ಅಮೆರಿಕದ ಜೊತೆಗೆ ಮಾಡಿಕೊಂಡಿರುವ ಒಪ್ಪಂದಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎಂಎಸ್ಪಿ ನೀತಿಯಲ್ಲಿ ಬದಲಾವಣೆ ಆಗಲಿದೆಯೆ’ ಎಂದು ಪ್ರಶ್ನಿಸಿದ್ದರು. ಅದನ್ನು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಸರ್ಕಾರ, 2021ರಲ್ಲಿ ರೈತರಿಗೆ ಶಾಸನಬದ್ಧ ಎಂಎಸ್ಪಿ ನೀಡುವುದಾಗಿ ಹೇಳಿತ್ತು. ಆ ಭರವಸೆಯನ್ನು ಇನ್ನೂ ಏಕೆ ಜಾರಿಗೆ ತರಲಾಗಿಲ್ಲ?’ ಎಂದು ಲೋಕಸಭೆ ಯಲ್ಲಿ ಸರ್ಕಾರಕ್ಕೆ ನೇರ ಪ್ರಶ್ನೆಯನ್ನು ಕೇಳಿದ್ದೆ’ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.

‘ನನ್ನ ಪ್ರಶ್ನೆಗೆ ನೇರವಾಗಿ ಪ್ರತಿಕ್ರಿಯಿಸುವುದರಿಂದ ತಪ್ಪಿಸಿಕೊಂಡ ಸರ್ಕಾರ, ಈಗ ಅಸ್ತಿತ್ವದಲ್ಲಿರುವ ಎಂಎಸ್ಪಿ ನೀತಿಯನ್ನು ಪುನರುಚ್ಚರಿಸಿತು. ರಾಷ್ಟ್ರೀಯ ಆದ್ಯತೆಗಳ ಹೆಸರಿನಲ್ಲಿ ಯಾವುದೇ ತಾರ್ಕಿಕ ಆಧಾರವಿಲ್ಲದೆ ಎಂಎಸ್ಪಿ ಬೋನಸ್ಗಳನ್ನು ನಿಲ್ಲಿಸುವಂತೆ ರಾಜ್ಯಗಳ ಮೇಲೆ ಒತ್ತಡ ಹೇರಿರುವುದನ್ನೂ ಒಪ್ಪಿಕೊಂಡಿದೆ’ ಎಂದು ಅವರು ವಿವರಿಸಿದ್ದಾರೆ.

ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದವು ‘ವ್ಯಾಪಾರೇತರ ಅಡೆತಡೆಗಳನ್ನು ಕಡಿಮೆ ಮಾಡುವ ಬಗ್ಗೆ ಮಾತನಾಡುತ್ತದೆಯೇ’ ಎಂಬ ಮತ್ತೊಂದು ನಿರ್ಣಾಯಕ ಪ್ರಶ್ನೆಯನ್ದು ಕೇಳಿದ್ದಾಗಿ ರಾಹುಲ್ ಹೇಳಿಕೊಂಡಿದ್ದಾರೆ. ‘ಇದು ಎಂಎಸ್ಪಿಯನ್ನು ದುರ್ಬಲಗೊಳಿಸಿ, ಕೃಷಿ ಉತ್ಪನ್ನಗಳ ಸಾರ್ವಜನಿಕ ಸಂಗ್ರಹಣೆಯನ್ನು ವಿಫಲಗೊಳಿಸುವ ಉದ್ದೇಶ ಹೊಂದಿದೆಯೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.