ನವದೆಹಲಿ: ‘ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ಇ) ವೈಫಲ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅವರು ತಮ್ಮ ಸರ್ಕಾರದ ಉಳಿವಿನ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಹೊರತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಅಲ್ಲ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.

‘ಸಿಬಿಎಸ್ಇಯ ಆನ್–ಸ್ಕ್ರೀನ್ ಮಾರ್ಕಿಂಗ್ (ಒಎಸ್ಎಂ) ಗೊಂದಲದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಕೋಎಂಪ್ಟ್ಗೆ ನೀಡಿರುವ ಒಪ್ಪಂದದ ಕುರಿತೂ ತನಿಖೆ ನಡೆಸಬೇಕು’ ಎಂದು ಅವರು ‘ಎಕ್ಸ್’ ಪೋಸ್ಟ್ನಲ್ಲಿ ಒತ್ತಾಯಿಸಿದ್ದಾರೆ.

‘ಸಿಬಿಎಸ್ಇ ಮೂರು ಬಾರಿ ಒಎಸ್ಎಂ ಟೆಂಡರ್ ಕರೆದಿತ್ತು. ಮೊದಲ ಬಾರಿಗೆ ಒಂದೂ ಬಿಡ್ ಬಂದಿರಲಿಲ್ಲ. ಎರಡನೇ ಬಾರಿಗೆ ಅರ್ಹ ಬಿಡ್ದಾರರು ಇರಲಿಲ್ಲ. ಕೊನೆಗೆ, ತಾಂತ್ರಿಕ ಅಂಶಗಳ ಪಟ್ಟಿಯಿಂದ ಕೆಲ ಷರತ್ತುಗಳನ್ನು ಸಡಿಲಗೊಳಿಸಿದ ಬಳಿಕ ಕೋಎಂಪ್ಟ್ಗೆ ಟೆಂಡರ್ ನೀಡಲಾಗಿದೆ. ಸ್ಕ್ಯಾನಿಂಗ್ ರೆಸಲ್ಯೂಷನ್ ಪ್ರಮಾಣವನ್ನು ಕಡಿತಗೊಳಿಸಲಾಗಿದೆ. ರೋಬೊಟಿಕ್ ಸ್ಕ್ಯಾನರ್ ಅಗತ್ಯವಿದ್ದರೂ ಅದನ್ನು ಕೈಬಿಡಲಾಗಿದೆ. ಸಿಎಂಎಂಐ ಪ್ರಮಾಣೀಕರಣವನ್ನು 5ನೇ ಹಂತದಿಂದ 3ನೇ ಹಂತಕ್ಕೆ ಇಳಿಸಲಾಗಿದೆ. ಉತ್ತರ ಪತ್ರಿಕೆಗಳಲ್ಲಿ ಉಂಟಾಗುವ ದೋಷಗಳಿಗೆ ವಿಧಿಸುತ್ತಿದ್ದ ದಂಡವನ್ನು ರದ್ದುಪಡಿಸಲಾಗಿದೆ’ ಎಂದು ಆರೋಪಿಸಿದ್ದಾರೆ.

‘ದೇಶದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸೇವೆಗಳ ಕಂಪನಿಯಾದ ಟಿಸಿಎಸ್ ಮೂರನೇ ಸುತ್ತಿನಲ್ಲಿಯೂ ಅರ್ಹತೆ ಗಳಿಸಿತ್ತು. ಆದರೆ, ಟೆಂಡರ್ ಪಡೆಯುವಲ್ಲಿ ವಿಫಲವಾಗಿತ್ತು. ಆದರೆ, ವೈಫಲ್ಯಗಳ ಅದ್ಭುತ ದಾಖಲೆಯನ್ನು ಹೊಂದಿರುವ ಸಿಒಇಎಂಪಿಟಿ ಕಂಪನಿ ಈ ವಿಷಯದಲ್ಲಿ ಯಶಸ್ಸು ಕಂಡಿದೆ. ಇಂದು ಸಿಬಿಎಸ್ಇ ವಿದ್ಯಾರ್ಥಿಗಳು ಯಾವುದರ ಬಗ್ಗೆ ದೂರುತ್ತಿದ್ದಾರೆ? ಸರಿಯಾಗಿ ಸ್ಕ್ಯಾನ್ ಮಾಡದ ಉತ್ತರ ಪತ್ರಿಕೆಗಳು, ನಾಪತ್ತೆಯಾದ ಪುಟಗಳು ಹಾಗೂ ಮೌಲ್ಯಮಾಪನ ಪೋರ್ಟಲ್ ವೈಫಲ್ಯ’ ಎಂದು ರಾಹುಲ್ ಆರೋಪಿಸಿದ್ದಾರೆ.

‘ದೇಶದಾದ್ಯಂತ ಒಎಸ್ಎಂ ವ್ಯವಸ್ಥೆಯನ್ನು ಜಾರಿಗೆ ತರುವ ಮುನ್ನ ಸಿದ್ಧತೆಗಾಗಿ ಕನಿಷ್ಠ ಒಂದು ಅಥವಾ ಎರಡು ವರ್ಷಗಳು ಬೇಕಾಗುತ್ತವೆ ಎಂದು ಶಿಕ್ಷಕರು ಸಿಬಿಎಸ್ಇಗೆ ತಿಳಿಸಿದ್ದರು. ಆದರೆ, ಈ ವ್ಯವಸ್ಥೆಯನ್ನು ತರಾತುರಿಯಲ್ಲಿ ಜಾರಿಗೆ ತರಲಾಗಿದೆ’ ಎಂದು ಹೇಳಿದ್ದಾರೆ.

‘ಹೀಗಾಗಿ, ನಾನು ಮತ್ತೊಮ್ಮೆ ಕೇಳಲು ಬಯಸುತ್ತೇನೆ. ಕೋಂಎಪ್ಟ್ಗೆ ಟೆಂಡರ್ ಸಿಗಬೇಕೆಂದು ಯಾರು ಬಯಸಿದ್ದರು? ತಾಂತ್ರಿಕ ಷರತ್ತುಗಳನ್ನು ಸಡಿಲಗೊಳಿಸಿದವರು ಯಾರು’ ಎಂದು ಪ್ರಶ್ನಿಸಿದ್ದಾರೆ.

‘ಒಪ್ಪಂದದ ವೇಳೆ ಸರಿಯಾದ ಪ್ರಕ್ರಿಯೆ ಅನುಸರಿಸಲಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಮತ್ತು ಸಿಬಿಎಸ್ಇ ಅಧಿಕಾರಿಗಳು ಹೇಳುತ್ತಾರೆ. ಅದು ಉತ್ತರವಲ್ಲ; ಅದು ಹೊಣೆಗಾರಿಕೆಯಲ್ಲ. ಕೆಲಸವನ್ನು ಸರಿಯಾಗಿ ಮಾಡಬಲ್ಲ ಅತ್ಯುತ್ತಮ ಕಂಪನಿಗೆ ಪ್ರಾಮಾಣಿಕವಾಗಿ ಒಪ್ಪಂದವನ್ನು ನೀಡಲಾಗಿದೆಯೇ ಎಂಬುದು ಪ್ರಶ್ನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.