ನವದಹೆಲಿ: ತಮಿಳುನಾಡಿನ ಮುಖ್ಯಮಂತ್ರಿಯಾಗಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಅವರ ಪ್ರಮಾಣವಚನ ಸಮಾರಂಭವನ್ನು ಒಳಗೊಂಡ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದರು. ಆದರೆ ಈ ವಿಡಿಯೊವನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿತ್ತು ಎಂದು ಕಾಂಗ್ರೆಸ್ ದೂರಿದೆ.

ಆದರೆ ಕಾಂಗ್ರೆಸ್ ಆರೋಪವನ್ನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಳ್ಳಿ ಹಾಕಿದೆ.

ಈ ಕುರಿತು ಸ್ವತಃ ರಾಹುಲ್ ಗಾಂಧಿ ಅವರೇ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ವಿಜಯ್ ಜೊತೆಗಿನ ನನ್ನ ವಿಡಿಯೊವನ್ನು ಐ.ಟಿ ಕಾಯ್ದೆಯಡಿ ಏಕೆ ನಿರ್ಬಂಧಿಸಲಾಯಿತು? ಇದರಲ್ಲಿ ಭಯಾನಕವಾಗಿ ಅಂತದ್ದೇನಿತ್ತು ಎಂದು ಪ್ರಶ್ನಿಸಿದ್ದಾರೆ.

'ಅಷ್ಟಕ್ಕೂ ಪ್ರಧಾನಿ ಮೋದಿ ಯಾರನ್ನು ಭಯಪಡುತ್ತಿದ್ದಾರೆ' ಎಂದು ರಾಹುಲ್ ಕೇಳಿದ್ದಾರೆ.

'ಅವರು ಮೊದಲು ನನ್ನ ರೀಲ್ಸ್ ಅನ್ನು ನಿರ್ಬಂಧಿಸಿದರು. ಬಳಿಕ ಅದನ್ನು ಏಕೆ ನಿರ್ಬಂಧಿಸಲಾಯಿತು ಎಂದು ಪ್ರಶ್ನಿಸಿರುವ ಸ್ಟೋರಿಯನ್ನೇ ನಿರ್ಬಂಧಿಸಿದ್ದಾರೆ' ಎಂದು ರಾಹುಲ್ ಆಪಾದಿಸಿದ್ದಾರೆ.

ಮತ್ತೊಂದೆಡೆ ಸ್ಪಷ್ಟನೆ ನೀಡಿರುವ ಕೇಂದ್ರವು, ಸಾಮಾಜಿಕ ಮಾಧ್ಯಮದಲ್ಲಿ ಕೈಗೊಂಡಿರುವ ಕ್ರಮಕ್ಕೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದೆ.

ರಾಹುಲ್ ಗಾಂಧಿ ಅವರ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.

‘ರಾಹುಲ್ ಗಾಂಧಿ ಅವರ ಕೆಲವು ಪೋಸ್ಟ್ಗಳನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರ್ಬಂಧಿಸಿದೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳು ತಪ್ಪು ಮಾಹಿತಿ ನೀಡುತ್ತಿವೆ. ಈ ಕ್ರಮಕ್ಕೂ ಸಚಿವಾಲಯಕ್ಕೂ ಯಾವುದೇ ಸಂಬಂಧವಿಲ್ಲ. ಆ ಸಾಮಾಜಿಕ ಮಾಧ್ಯಮ ವೇದಿಕೆಯ ಆಂತರಿಕ ವ್ಯವಸ್ಥೆಯು ತಪ್ಪಾಗಿ ಪೋಸ್ಟ್ ಅನ್ನು ಬ್ಲಾಕ್ ಮಾಡಲು ಗುರುತಿಸಿದ್ದರಿಂದ ಹೀಗಾಗಿದೆ. ಈಗ ಅದನ್ನು ಪುನಃಸ್ಥಾಪಿಸಲಾಗಿದೆ’ ಎಂದು ಸಚಿವಾಲಯ ತಿಳಿಸಿದೆ.
.ತಾಯಿಯೇ ನಮ್ಮ ಗುರು, ಮೊದಲ ಗೆಳತಿ: ಅಮ್ಮನ ಬಗ್ಗೆ ರಾಹುಲ್ ಗಾಂಧಿ ಭಾವುಕ ಪೋಸ್ಟ್.ಹೊಸ ಪೀಳಿಗೆ, ಹೊಸ ಧ್ವನಿ, ಹೊಸ ಕಲ್ಪನೆ:ವಿಜಯ್ ಸರ್ಕಾರಕ್ಕೆ ರಾಹುಲ್ ಗಾಂಧಿ ಹಾರೈಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.