ನವದೆಹಲಿ: 'ಪ್ರಧಾನಿ ನರೇಂದ್ರ ಮೋದಿ ರಾಜಿ ಮಾಡಿಕೊಂಡಿದ್ದು, ದೇಶವನ್ನು ಮುನ್ನಡೆಸಲು ಅಸಮರ್ಥರಾಗಿದ್ದಾರೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಪಶ್ಚಿಮ ಏಷ್ಯಾದ ಸಂಘರ್ಷದಿಂದ ಉಂಟಾಗುತ್ತಿರುವ ಸವಾಲುಗಳನ್ನು ಎದುರಿಸಲು ನಾಗರಿಕರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ರಾಹುಲ್, 'ನಿನ್ನೆ ಮೋದಿ ಅವರು ಜನರು ತ್ಯಾಗಗಳನ್ನು ಮಾಡಬೇಕೆಂದು ಕೋರಿದ್ದಾರೆ. ಚಿನ್ನ ಖರೀದಿಸಬಾರದು, ವಿದೇಶಗಳಿಗೆ ಪ್ರಯಾಣ ಬೆಳೆಸಬಾರದು, ಪೆಟ್ರೋಲ್ ಬಳಕೆ ಕಡಿಮೆ ಮಾಡಬೇಕು, ರಸಗೊಬ್ಬರ ಹಾಗೂ ಅಡುಗೆ ಎಣ್ಣೆ ಮಿತವಾಗಿ ಬಳಕೆ ಮಾಡಬೇಕು, ಮೆಟ್ರೊದಲ್ಲಿ ಪ್ರಯಾಣಿಸಬೇಕು ಮತ್ತು ಮನೆಯಿಂದಲೇ ಕೆಲಸ ಮಾಡಲು ವಿನಂತಿಸಿದ್ದಾರೆ. ಇವೆಲ್ಲವೂ ಸಲಹೆಗಳಲ್ಲ. ಸರ್ಕಾರದ ವೈಫಲ್ಯಗಳಿಗೆ ಸಾಕ್ಷ್ಯಗಳಾಗಿವೆ' ಎಂದು ವಾಗ್ದಾಳಿ ನಡೆಸಿದ್ದಾರೆ.

'ಕಳೆದ 12 ವರ್ಷಗಳಲ್ಲಿ ಪ್ರಧಾನಿ ಮೋದಿ ದೇಶವನ್ನು ಎಂತಹ ದುಸ್ಥಿತಿಗೆ ತಂದಿದ್ದಾರೆ ಎಂದರೆ ಸಾರ್ವನಜನಿಕರಿಗೆ ಏನು ಖರೀದಿಸಬೇಕು, ಏನು ಖರೀದಿಸಬಾರದು, ಎಲ್ಲಿಗೆ ಹೋಗಬೇಕು ಎಂದು ಎಲ್ಲಿಗೆ ಹೋಗಬಾರದು ಎಂಬುದನ್ನು ಹೇಳುವ ಸ್ಥಿತಿಗೆ ಬಂದಿದೆ' ಎಂದು ದೂರಿದ್ದಾರೆ.

'ಪ್ರತಿ ಬಾರಿಯೂ ಹೊಣೆಯನ್ನು ಜನರ ಮೇಲೆ ಹೊರಿಸುತ್ತಾರೆ. ಅಲ್ಲದೆ ಸ್ವತಃ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಾರೆ' ಎಂದು ಆರೋಪಿಸಿದ್ದಾರೆ.

'ರಾಜಿ ಮಾಡಿಕೊಂಡ ಪ್ರಧಾನಿಗೆ ಇನ್ನು ಮುಂದೆ ದೇಶವನ್ನು ಮುನ್ನಡೆಸುವುದು ಅಸಾಧ್ಯವಾಗಿದೆ' ಎಂದು ಹೇಳಿದ್ದಾರೆ.
.ವಿಜಯ್ ಜೊತೆಗಿನ ವಿಡಿಯೊಗೆ ನಿರ್ಬಂಧ: ಮೋದಿಗೆ ಭಯ ಏಕೆ ಎಂದು ರಾಹುಲ್ ಪ್ರಶ್ನೆ.ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಲ್ಲೆಲ್ಲಾ ಸರ್ಕಾರ ಅಭದ್ರ; ಪ್ರಧಾನಿ ಮೋದಿ ಲೇವಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.