ಚಂಡೀಗಢ: ಹರಿಯಾಣದ ಸೋನಿಪತ್ನ ಮದೀನಾ ಗಾಮ್ರಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದು, ರೈತ ಕುಟುಂಬದ ಮದುವೆಯಲ್ಲಿ ಭಾಗಿಯಾಗಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕಾಂಗ್ರೆಸ್ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದೆ.

2023ರಲ್ಲಿ ರಾಹುಲ್ ಗಾಂಧಿ ಶಿಮ್ಲಾ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಮದೀನಾ ಗ್ರಾಮಕ್ಕೆ ಭೇಟಿ ನೀಡಿದ್ದರು. ರೈತರ ಜೊತೆಗೂಡಿ ಭತ್ತ ನಾಟಿ ಮಾಡಿದ್ದರು. ರಾಹುಲ್ಗೆ ಭತ್ತ ನಾಟಿ ಮಾಡಲು ರೈತ ಸಂಜಯ್ ಮಲಿಕ್ ಸಹಾಯ ಮಾಡಿದ್ದರು.
.ಪಶ್ಚಿಮ ಏಷ್ಯಾ ಸಂಘರ್ಷದಿಂದ LPG ಕೊರತೆ: ತಿಂಗಳಿಗೆ ಒಂದೇ ಸಿಲಿಂಡರ್.ಡಿಕೆಶಿಗೆ ಉಜ್ವಲ ರಾಜಕೀಯ ಭವಿಷ್ಯವಿದೆ, ಹೋರಾಟದಲ್ಲಿ ಜೊತೆಯಾಗಿರುವೆ: ಸಿದ್ದರಾಮಯ್ಯ.
ರೈತ ಕುಟುಂಬಗಳ ಜತೆ ಮಾತುಕತೆ ನಡೆಸಿದ್ದ ರಾಹುಲ್, ರೈತ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆಲಿಸಿದರು. ಮಲಿಕ್ ಕುಟುಂಬವನ್ನು ಭೇಟಿಯಾಗಿದ್ದ ಅವರು ನಿಮ್ಮ ಪ್ರತಿಯೊಂದು ಸುಖ–ದುಃಖಗಳಲ್ಲಿ ಭಾಗಿಯಾಗುವುದಾಗಿ ಮಾತು ನೀಡಿದ್ದರು. ಕೊಟ್ಟ ಮಾತಿನಂತೆ ಅವರು ಮಲಿಕ್ ಅವರ ಮಗಳ ಮದುವೆಯಲ್ಲಿ ಭಾಗಿಯಾಗಿದ್ದಾರೆ. ರಾಹುಲ್ ಭೇಟಿ ರೈತನ ಕುಟುಂಬದಲ್ಲಿ ಸಂತಸ ತಂದಿದೆ.

ಕುಟುಂಬವು ಈ ಹಿಂದೆಯೇ ಗಾಂಧಿಯವರನ್ನು ಸಮಾರಂಭಕ್ಕೆ ಆಹ್ವಾನಿಸಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಳಿ ಟಿ-ಶರ್ಟ್, ಹಸಿರು ಪ್ಯಾಂಟ್ ಧರಿಸಿದ್ದ ರಾಹುಲ್, ಗೋಹಾನಾದ ಪ್ರಸಿದ್ಧ 'ಜಿಲೇಬಿ' ಸೇರಿದಂತೆ ಹರಿಯಾಣದ ಸಾಂಪ್ರದಾಯಿಕ ಖಾದ್ಯಗಳನ್ನು ಸವಿದರು.
.ರೋಣ: ಮಲಪ್ರಭೆ ತಟದಲ್ಲಿ ಕಾಮನ್ ಚಿಫ್ಚಾಫ್ ಹಕ್ಕಿ ಗೋಚರ.ಮಾಹಿತಿ ತಂತ್ರಜ್ಞಾನ ಕಾಯ್ದೆ: ಕೇಂದ್ರದ ಅರ್ಜಿ ವಿಚಾರಣೆಗೆ 'ಸುಪ್ರೀಂ' ಒಪ್ಪಿಗೆ.
ಶ್ರೀಮಂತರು, ಕೈಗಾರಿಕೋದ್ಯಮಿಗಳ ಮದುವೆಗಳಿಗೆ ಹಾಜರಾಗಲು ಪ್ರಮುಖ ನಾಯಕರು ಪೈಪೋಟಿ ನಡೆಸುವ ಯುಗದಲ್ಲಿ, ರಾಹುಲ್ ಗಾಂಧಿ ಅವರು ಸುಮಾರು ಮೂರು ವರ್ಷಗಳ ಹಿಂದೆ ಭತ್ತ ನಾಟಿ ಮಾಡಲು ಸಹಾಯ ಮಾಡಿದ್ದ ರೈತ ಸಂಜಯ್ ಅವರ ಮಗಳ ಮದುವೆಯಲ್ಲಿ ಭಾಗವಹಿಸುವ ಮೂಲಕ ತಾವು ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
.ಜಿಬಿಎ ವ್ಯಾಪ್ತಿಯಲ್ಲಿ ಹೆಚ್ಚುವರಿ ತೆರಿಗೆ, ದಂಡ ವಿಧಿಸುವುದಿಲ್ಲ: ಡಿಕೆಶಿ .VIDEO| ಒಳ ಮೀಸಲಾತಿ: ಸಮಸ್ಯೆ ಬಗೆಹರಿಸುವುದು ಹೇಗೆ ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.