ನವದೆಹಲಿ: ಲೋಕಸಭೆಯ ಪ್ರತಿ ಆರರಲ್ಲಿ ಒಬ್ಬ ಬಿಜೆಪಿ ಸಂಸದರು ವೋಟ್ ಚೋರಿ (ಮತ ಕಳ್ಳತನ) ಮೂಲಕ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಪರಿಭಾಷೆಯಲ್ಲಿ ಹೇಳುವುದಾದರೆ ಅಂತಹವರನ್ನು ‘ನುಸುಳುಕೋರರು’ ಎನ್ನಬಹುದೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

‘ಮತ ಕಳ್ಳತನದ ಮೂಲಕ ಕೆಲವೊಮ್ಮೆ ವೈಯಕ್ತಿಕ ಸ್ಥಾನಗಳನ್ನು ಕದಿಯಲಾಗುತ್ತದೆ. ಇನ್ನು ಕೆಲವು ಬಾರಿ ಇಡೀ ಸರ್ಕಾರವನ್ನೇ ಕದಿಯಬಹುದು. ಲೋಕಸಭೆಯಲ್ಲಿ ಈಗಿರುವ ಬಿಜೆಪಿಯ 240 ಸಂಸದರಲ್ಲಿ ಪ್ರತಿ ಆರನೇ ಸಂಸದರು ಮತ ಕಳ್ಳತನದ ಮೂಲಕವೇ ಗೆದ್ದಿದ್ದಾರೆ’ ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಒಂದು ವೇಳೆ ನ್ಯಾಯಸಮ್ಮತವಾಗಿ ಚುನಾವಣೆ ನಡೆದರೆ ಬಿಜೆಪಿ ಇಂದು ಲೋಕಸಭೆಯಲ್ಲಿ 140 ಸ್ಥಾನಗಳನ್ನು ಕೂಡ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಮತ ಕಳ್ಳತನದ ಮೂಲಕವೇ ಗೆದ್ದವರನ್ನು ಗುರುತಿಸುವುದು ಕಷ್ಟವೇನಲ್ಲ. ಬಿಜೆಪಿಯ ಪರಿಭಾಷೆಯಲ್ಲಿ ಹೇಳುವುದಾದರೆ ಅಂತಹವರನ್ನು ‘ನುಸುಳುಕೋರರು’ ಎಂದು ಕರೆಯಬೇಕೇ?, ಇನ್ನು ಹರಿಯಾಣದ ಕಥೆಯೇನು? ಅಲ್ಲಿರುವ ಇಡೀ ಸರ್ಕಾರ ‘ನುಸುಳುಕೋರರು’ ಇದ್ದಂತೆ. ಮತದಾರರ ಪಟ್ಟಿ ಮತ್ತು ಚುನಾವಣಾ ಪ್ರಕ್ರಿಯೆಯನ್ನು ತಿರುಚಲು ಬಿಜೆಪಿ, ಚುನಾವಣಾ ಆಯೋಗವನ್ನು ‘ರಿಮೋಟ್ ಕಂಟ್ರೋಲ್’ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ’ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ಈ ಬಾರಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದನ್ನು ‘ಜನಾದೇಶದ ಕಳ್ಳತನ’ ಎಂದು ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದರು. ಇದು ದೇಶದ ಪ್ರಜಾಪ್ರಭುತ್ವವನ್ನು ನಾಶಪಡಿಸುವ ಬಿಜೆಪಿ ಅಭಿಯಾನದ ದೊಡ್ಡ ಷಡ್ಯಂತ್ರ ಎಂದೂ ಅವರು ದೂರಿದ್ದರು.

ಇದೇ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಕ್ಷದ ಸೋಲಿನ ಬಗ್ಗೆ ಸಂಭ್ರಮಿಸುತ್ತಿರುವವರು ಕ್ಷುಲ್ಲಕ ರಾಜಕೀಯವನ್ನು ಬದಿಗಿಡಬೇಕು ಎಂದು ರಾಹುಲ್ ಆಗ್ರಹಿಸಿದ್ದಾರೆ.

ಕಾಂಗ್ರೆಸ್ನಲ್ಲಿರುವ ಕೆಲವು ನಾಯಕರು ಮತ್ತು ಇತರರು ಟಿಎಂಸಿ ಸೋಲಿನ ಬಗ್ಗೆ ಸಂತೋಷಪಡುತ್ತಿದ್ದಾರೆ. ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಟ್ಟು ಅಸ್ಸಾಂ ಮತ್ತು ಬಂಗಾಳದ ಜನಾದೇಶ ಕಳ್ಳತನವು ದೇಶದ ಪ್ರಜಾಪ್ರಭುತ್ವವನ್ನು ಧ್ವಂಸ ಮಾಡುವ ಬಿಜೆಪಿಯ ಅಭಿಯಾನದ ಭಾಗವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ರಾಹುಲ್ ತಿಳಿಸಿದ್ದಾರೆ.

ಸೋಮವಾರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಿದ್ದರೆ, ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.