ತಿರುವನಂತಪುರ: ಕಾಂಗ್ರೆಸ್ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿಯ ‘ಬಿ–ಟೀಮ್’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಆರೋಪಿಸಿದರು.

‘ಕೇಂದ್ರೀಯ ತನಿಖಾ ಸಂಸ್ಥೆಗಳು ಕೇರಳ ಮುಖ್ಯಮಂತ್ರಿ ವಿಜಯನ್ ಅವರನ್ನು ಹೊರತುಪಡಿಸಿ ವಿರೋಧ ಪಕ್ಷಗಳ ನಾಯಕರನ್ನು ಬಂಧಿಸುತ್ತಿವೆ ಅಥವಾ ಕರೆದು ವಿಚಾರಣೆ ನಡೆಸುತ್ತಿವೆ’ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ ಬಿಜೆಪಿಯ ಬಿ–ಟೀಮ್’ ಎಂದು ಹೇಳಿದರು.

‘ಕೆಲವು ಜನರು ನೋಡಿ ಅಥವಾ ಅನುಭವದಿಂದ ಕಲಿಯುವುದಿಲ್ಲ. ಅವರು ಸಾಮಾನ್ಯ ಜನರಂತಲ್ಲ, ಅಪರೂಪದ ವ್ಯಕ್ತಿಗಳು. ಇಂಥವರು ಸಾಮಾನ್ಯ ಸಂಗತಿಯನ್ನು ಗ್ರಹಿಸಲೂ ಅಸಮರ್ಥರಿರುತ್ತಾರೆ. ರಾಹುಲ್ ಗಾಂಧಿ ಈ ವರ್ಗಕ್ಕೆ ಸೇರುತ್ತಾರೆ’ ಎಂದು ಟೀಕಿಸಿದರು.

‘ರಾಹುಲ್ ಗಾಂಧಿ ಅವರು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದರು. ಆದರೆ ನ್ಯಾಯಾಲಯವು ಅವರ ವಿರುದ್ಧದ ಎಲ್ಲ ಆರೋಪಗಳನ್ನು ಅಲ್ಲಗಳೆದು ಖುಲಾಸೆಗೊಳಿಸಿತು. ಇದು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಹಿನ್ನಡೆಯನ್ನುಂಟುಮಾಡಿತ್ತು. ಆದರೆ ಇದಾದ ಬಳಿಕವೂ ರಾಹುಲ್ ತಮ್ಮ ಚಾಳಿ ಮುಂದುವರಿಸಿದ್ದಾರೆ’ ಎಂದು ಹೇಳಿದರು.

ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್–ಬಿಜೆಪಿ ಅನೇಕ ಬಾರಿ ಮೈತ್ರಿ ಮಾಡಿಕೊಂಡಿವೆ. ಆದರೆ ಮುಂಬರುವ ಚುನಾವಣೆಯಲ್ಲಿ ಏನಾಗುತ್ತದೋ ಕಾದು ನೋಡಬೇಕು. ಎರಡೂ ಪಕ್ಷಗಳು ಎಲ್ಡಿಎಫ್ ಅನ್ನು ವಿರೋಧಿಸುತ್ತವೆ’ ಎಂದು ಹೇಳಿದರು.

ನಾಲ್ವರು ಪಕ್ಷೇತರರಿಗೆ ಯುಡಿಎಫ್ ಬೆಂಬಲ

ಇತ್ತೀಚೆಗೆ ಸಿಪಿಐ ತ್ಯಜಿಸಿರುವ ನಾಲ್ವರು ಪಕ್ಷೇತರ ಅಭ್ಯರ್ಥಿಗಳನ್ನು ಕೇರಳ ವಿಧಾನಸಭೆ ಚುನಾವಣೆಯಲ್ಲಿ ಯುಡಿಎಫ್ ಬೆಂಬಲಿಸಲಿದೆ ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ತಿಳಿಸಿದರು.

ಜಿ.ಸುಧಾಕರನ್, ಪಿ.ಕೆ.ಶಶಿ, ಟಿ.ಕೆ.ಗೋವಿಂದನ್, ವಿ.ಕುಞಿಕೃಷ್ಣನ್ ಅವರಿಗೆ ಬೆಂಬಲ ನೀಡುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಅಭ್ಯರ್ಥಿಗಳ ಗೆಲುವಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ

ನವದೆಹಲಿ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ 11 ಅಭ್ಯರ್ಥಿಗಳನ್ನು ಒಳಗೊಂಡ 3ನೇ ಪಟ್ಟಿಯನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿದೆ.

ಕರಮನ ಜಯನ್ ಅವರನ್ನು ತಿರುವನಂತಪುರದಿಂದ ಕಣಕ್ಕಿಳಿಸಿದೆ. ರವೀಂದ್ರನಾಥ್ ವಾಕಥಾನಂ ಅವರು ಪುತುಪಳ್ಳಿಯಿಂದ, ಕೆ.ಆರ್.ರಾಜೇಶ್ ಅವರು ಚವಾರಾದಿಂದ ಸ್ಪರ್ಧಿಸಲಿದ್ದಾರೆ.

ಬಿಜೆಪಿ ಸಿ.ಎಂಗಳು ಕೇರಳಕ್ಕೆ

ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಕೇರಳಕ್ಕೆ ಭೇಟಿ ನೀಡಿ, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಮಾರ್ಗದರ್ಶನ ನೀಡಿದರು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ತಿಳಿಸಿದರು.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ನನ್ನನ್ನೂ ಸೇರಿದಂತೆ 40 ಅಭ್ಯರ್ಥಿಗಳು ಶನಿವಾರ ನಾಮಪತ್ರ ಸಲ್ಲಿಸಿದರು. ಉಳಿದವರು ಸೋಮವಾರ ಸಲ್ಲಿಸಲಿದ್ದಾರೆ’ ಎಂದು ತಿಳಿಸಿದರು.

ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಕೆಲ ಕ್ಷೇತ್ರಗಳಿಗೆ ಭೇಟಿ ನೀಡಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ವೇಳೆ ಅಭ್ಯರ್ಥಿಗಳಿಗೆ ಸಲಹೆ ನೀಡಿದರು ಎಂದರು.

ರಾಜಸ್ಥಾನ ಉಪ ಮುಖ್ಯಮಂತ್ರಿ ಪ್ರೇಮ್ ಚಂದ್ ಬೈರವ, ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರೂ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.

ಕೇರಳ: ಮತ್ತಿಬ್ಬರು ನಟರು ಕಣಕ್ಕೆ

ತಿರುವನಂತಪುರ: ಕೇರಳ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಎಲ್ಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಪ್ರಕಟಿಸಿದ್ದು, ಮತ್ತಿಬ್ಬರು ನಟರು ಕಣಕ್ಕಿಳಿದಿದ್ದಾರೆ.

ನಟ ಸುಧೀರ್ ಕರಮನ ಅವರು ತಿರುವನಂತಪುರ ಕ್ಷೇತ್ರದಿಂದ ಎಲ್ಡಿಎಫ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕಿರುತೆರೆ ನಟ ವಿವೇಕ್ ಗೋಪನ್ ಅವರು ಎನ್ಡಿಎ ಅಭ್ಯರ್ಥಿಯಾಗಿ ಅರುವಿಕ್ಕರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಪಾಲಕ್ಕಾಡ್ ಕ್ಷೇತ್ರದಿಂದ ಸ್ಪರ್ಧಿಸಿರುವ ಯುಡಿಎಫ್ ಅಭ್ಯರ್ಥಿ ರಮೇಶ್ ಪಿಶಾರಾಡಿ ಅವರಿಗೆ ನಟ ಮಮ್ಮೂಟಿ ಅವರು ಶನಿವಾರ ವಿಡಿಯೊ ಕರೆ ಮಾಡಿ ಶುಭ ಹಾರೈಸಿದರು.
.ಆಳ–ಅಗಲ | ಚುನಾವಣೆ: ಐದು ವಿಧಾನಸಭೆಗಳ ಸ್ಥಿತಿಗತಿ.ಪ.ಬಂಗಾಳ ಚುನಾವಣೆ: DGP ಪಾಂಡೆ, ಕೋಲ್ಕತ್ತ ಪೊಲೀಸ್ ಆಯುಕ್ತರ ತೆರವುಗೊಳಿಸಿದ EC.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.