ಪತ್ತನಂತಿಟ್ಟ: ಪ್ರಧಾನಿ ನರೇಂದ್ರ ಮೋದಿ ಅವರು ಶಬರಿಮಲೆ ವಿಚಾರದಲ್ಲಿ ಮೌನವಹಿಸಿದ್ದು, ಧರ್ಮದ ಬಗ್ಗೆ ಅವರಿಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಅಡೂರ್ನಲ್ಲಿ ನಡೆದ ಯುಡಿಎಫ್ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ಸಿಪಿಐ(ಎಂ)– ಬಿಜೆಪಿಯನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ಕೇರಳ ಭೇಟಿ ವೇಳೆ ಪ್ರಧಾನಿ ಮೋದಿ ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆಗಳನ್ನು ನೀಡದೆ ಇರುವುದು ಎಲ್ಡಿಎಫ್ ಜತೆ ಬಿಜೆಪಿ ಒಟ್ಟಾಗಿ ಕೆಲಸ ಮಾಡುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
.ಹಿಂದಿ ಹೇರಿಕೆ ಬೇಡ: ಸರ್ಕಾರದ ನಿರ್ಧಾರಕ್ಕೆ ನಟಿ ಪೂಜಾಗಾಂಧಿ ಬೆಂಬಲ.ಡಿಕೆಡಿ ಸ್ಪರ್ಧಿಗಳಿಗೆ ಶಿವಣ್ಣ ದಂಪತಿಯಿಂದ ₹ 50 ಸಾವಿರ ಧನ ಸಹಾಯ.
ಕಾಂಗ್ರೆಸ್ ಪಕ್ಷವು ಬಿಜೆಪಿ ಹಾಗೂ ಆರ್ಎಸ್ಎಸ್ನ ಸೈದ್ಧಾಂತಿಕ ವಿಷಯಗಳ ವಿರುದ್ಧ ಹೋರಾಟ ನಡೆಸುತ್ತಿದೆ ಎಂದು ರಾಹುಲ್ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಧರ್ಮ ಮತ್ತು ದೇವಾಲಯಗಳು ಕೇವಲ ಮತ ಗಳಿಕೆಯ ಸಾಧನಗಳು. ಚುನಾವಣೆ ಸಂದರ್ಭದಲ್ಲಿ ಲಾಭವಾಗುತ್ತದೆ ಎಂದರೆ ಮಾತ್ರ ಮಾತನಾಡುತ್ತಾರೆ. ವಾಸ್ತವವನ್ನು ಅವರು ಎಂದೂ ಮಾತನಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಯುಡಿಎಫ್ ಅಧಿಕಾರಕ್ಕೆ ಬಂದಾಗ ದೇವಾಲಯಕ್ಕೆ ಸಂಬಂಧಿಸಿದ ಅಕ್ರಮಗಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
.ಕೆಡಿ ಚಿತ್ರದ ‘ಶಿವ ಶಿವ’ ಹಾಡಿನ ಮೇಕಿಂಗ್ ವಿಡಿಯೊ ಹಂಚಿಕೊಂಡ ಪ್ರೇಮ್.ಪ್ರೇಯಸಿಯ ಕೊಂದು, ಶವವನ್ನು ತುಂಡರಿಸಿ ಫ್ರಿಡ್ಜ್ನಲ್ಲಿಟ್ಟ ನೌಕಾಪಡೆ ಅಧಿಕಾರಿ.ರಾಜ್ಯದಲ್ಲಿ ನೌಕರರಿಗೆ ವೇತನ ನೀಡುವುದಕ್ಕೂ ಹಣ ಇಲ್ಲ: ಬಿ.ವೈ.ವಿಜಯೇಂದ್ರ.ಅಕಾಲಿಕ ಮಳೆಯಾರ್ಭಟಕ್ಕೆ ಬೆಳೆ, ಮನೆಗಳಿಗೆ ಹಾನಿ: ತ್ವರಿತ ಪರಿಹಾರಕ್ಕೆ ಅಶೋಕ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.