ರಾಯ್ಬರೇಲಿ (ಉತ್ತರಪ್ರದೇಶ) (): ‘ಆರ್ಥಿಕ ಆಘಾತ’ ಕಾದಿದೆ. ಆದರೆ, ಅದು ಅದಾನಿ, ಅಂಬಾನಿ ಅಥವಾ ಮೋದಿ ಅವರ ಮೇಲೆ ಪರಿಣಾಮ ಬೀರುವುದಿಲ್ಲ; ಯುವಕರು, ಕಾರ್ಮಿಕರು ಮತ್ತು ಸಣ್ಣ ವರ್ತಕರ ಮೇಲೆ ಬೀರಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದರು.

‘ತುಂಬಾ ಕಠಿಣವಾದ ಸಂದರ್ಭ ಬರಲಿದೆ. ಹಲವು ವರ್ಷಗಳಿಂದ ನೋಡದ ಆರ್ಥಿಕ ಸಂಕಷ್ಟದ ಬಿರುಗಾಳಿ ಬೀಸಲಿದೆ’ ಎಂದು ರಾಹುಲ್ ಗಾಂಧಿ ಸುದ್ದಿಗಾರರಿಗೆ ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಕ್ರಮ ಕೈಗೊಳ್ಳುವ ಬದಲು, ದೇಶದ ಜನರಿಗೆ ವಿದೇಶ ಪ್ರವಾಸ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಆದರೆ, ಅವರು ವಿದೇಶಗಳನ್ನು ಸುತ್ತುತ್ತಿದ್ದಾರೆ. ಅವರು ತಮ್ಮದೇ ಮಾತನ್ನು ಪಾಲಿಸುತ್ತಿಲ್ಲ’ ಎಂದು ಟೀಕಿಸಿದರು.

‘ಅವರು ಅಂಬಾನಿ ಮತ್ತು ಅದಾನಿಗಾಗಿ ಮಾಡಿರುವ ವ್ಯವಸ್ಥೆ ಹಾಗೇ ಉಳಿಯುವುದಿಲ್ಲ, ಅದು ಕುಸಿಯುತ್ತದೆ. ದುರದೃಷ್ಟವೆಂದರೆ ಅದರ ಪರಿಣಾಮವನ್ನು ಸಾಮಾನ್ಯ ಜನರು ಅನುಭವಿಸುತ್ತಾರೆ. ಅವರು ತಮ್ಮ ಅರಮನೆಗಳಲ್ಲಿ ಸುರಕ್ಷಿತರಾಗಿರುತ್ತಾರೆ. ಆದರೆ, ಉತ್ತರಪ್ರದೇಶದ ಯುವಕರು ಮತ್ತು ಜನರು ಸಂಕಷ್ಟವನ್ನು ಅನುಭವಿಸುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.