ನವದೆಹಲಿ: ‘ಸೆಪ್ಟೆಂಬರ್ 2013ರಿಂದ 2025 ರವರೆಗೆ 129 ಬಾರಿ ರಾಹುಲ್ ಗಾಂಧಿ ಅವರು ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಿದ್ದು, ಪ್ರಧಾನಿ ಮೋದಿ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ’ ಎಂದು ಕಾಂಗ್ರೆಸ್ ಹೇಳಿದೆ.

ನಾರ್ವೆಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡದೇ ಹೊರನಡೆದ ಪ್ರಧಾನಿ ನರೇಂದ್ರ ಮೋದಿ ನಡೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್, ರಾಹುಲ್ ನಡೆಸಿದ ಪತ್ರಿಕಾಗೋಷ್ಠಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

‘ರಾಹುಲ್ ಗಾಂಧಿ ಅವರು 2013ರಲ್ಲಿ ಮೂರು ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದರು. ನಂತರ 2014 ಮತ್ತು 2017 ರ ನಡುವೆ ತಲಾ ಒಂದು ಮಾಧ್ಯಮ ಗೋಷ್ಠಿಯನ್ನು ನಡೆಸಿದ್ದರು. 2018ರಲ್ಲಿ 13, 2019ರಲ್ಲಿ 21, 2020ರಲ್ಲಿ 14 ಮತ್ತು 2021ರಲ್ಲಿ 16 ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ’ ಎಂದು ತಿಳಿಸಿದೆ.

‘2022ರ ಭಾರತ್ ಜೋಡೋ ಯಾತ್ರೆ ವೇಳೆ 11 ಪತ್ರಿಕಾಗೋಷ್ಠಿಗಳನ್ನು, 2023ರಲ್ಲಿ 9 ಗೋಷ್ಠಿಗಳನ್ನು ನಡೆಸಿದ್ದಾರೆ. 2024ರಲ್ಲಿ 20 ಮತ್ತು 2025ರಲ್ಲಿ 7 ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ’ ಎಂದು ಹೇಳಿದೆ.

ನಾರ್ವೆ: ಪ್ರಶ್ನೆಗೆ ಉತ್ತರಿಸದೇ ತೆರಳಿದ ಮೋದಿ

3ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ನಾರ್ವೆಗೆ ಭೇಟಿ ನೀಡಿದ್ದ ಸಂದರ್ಭ ನಾಟಕೀಯ ಬೆಳವಣಿಗೆ ನಡೆದಿದೆ. ನಾರ್ವೆಯ ಪತ್ರಕರ್ತೆಯೊಬ್ಬರು ಮಾಧ್ಯಮಗಳಿಂದ ಕೆಲವು ಪ್ರಶ್ನೆಗಳನ್ನು ಸ್ವೀಕರಿಸುವಂತೆ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. ಆದರೆ, ಅದನ್ನು ಕೇಳಿಯೂ ಕೇಳದಂತೆ ಮೋದಿ ಕೊಠಡಿಯಿಂದ ಹೊರನಡೆಯುತ್ತಿರುವುದು ಕಂಡುಬಂದಿದೆ.

ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಕುಸಿದ ಭಾರತ

ಜಾಗತಿಕ ಮಾಧ್ಯಮ ಕಾವಲು ಸಂಸ್ಥೆ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್ಎಸ್ಎಫ್) ಪ್ರಕಟಿಸಿದ 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು 180 ದೇಶಗಳ ಪೈಕಿ 157ನೇ ಸ್ಥಾನಕ್ಕೆ ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.