ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರಗೊಳ್ಳಲು ವಿಫಲವಾದ ಬೆನ್ನಲ್ಲೇ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಮಹಿಳೆಯರ ಹೆಸರಿನಲ್ಲಿ ಸಂವಿಧಾನವನ್ನು ನಾಶಪಡಿಸಲು ಅಸಂವಿಧಾನಿಕ ತಂತ್ರವನ್ನು ಬಳಸಿದೆ’ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ವಿರೋಧ ಪಕ್ಷಗಳು ಒಗ್ಗಟ್ಟನ್ನು ಎತ್ತಿ ತೋರಿಸಿದ್ದು, ತಿದ್ದುಪಡಿ ಮಸೂದೆಯು ಬಿದ್ದುಹೋಗಿದೆ. ಕೇಂದ್ರ ಸರ್ಕಾರವು ಮಹಿಳೆಯರ ಹೆಸರಿನಲ್ಲಿ ಸಂವಿಧಾನವನ್ನು ಮುರಿಯಲು ಅಸಂವಿಧಾನಿಕ ತಂತ್ರವನ್ನು ಬಳಸಿತು. ಭಾರತವು ಅದನ್ನು ನೋಡಿದೆ. 'ಇಂಡಿಯಾ' ಒಕ್ಕೂಟವು ಅದನ್ನು ತಡೆದಿದೆ’ ಎಂದು ಹೇಳಿದ್ದಾರೆ.

ಮುಂದುವರಿದು, ‘ಪ್ರಧಾನಮಂತ್ರಿಗಳಿಗೆ ನನ್ನದೊಂದು ಮನವಿ ಏನೆಂದರೆ, ಅವರಿಗೆ ಮಹಿಳಾ ಮೀಸಲಾತಿ ಬೇಕಿದ್ದರೆ, 2023ರ ಕಾನೂನನ್ನು ಜಾರಿಗೊಳಿಸಲಿ. ಆಗ ಇಡೀ ವಿರೋಧ ಪಕ್ಷವು ಅದನ್ನು ಬೆಂಬಲಿಸುತ್ತದೆ’ ಎಂದಿದ್ದಾರೆ.

‘ಇದು ಮಹಿಳೆಯರ ಮೀಸಲಾತಿ ಮಸೂದೆ ಆಗಿರಲಿಲ್ಲ, ಬದಲಿಗೆ ಭಾರತದ ಚುನಾವಣಾ ರಚನೆಯನ್ನು ಬದಲಾಯಿಸುವ ಪ್ರಯತ್ನ’ ಎಂದು ಪುನರುಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.