ಪಟ್ನಾ: ಉದ್ಯೋಗಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕ ಹುದ್ದೆ ಆಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ. ನಿರುದ್ಯೋಗ ದೇಶದ ಅತಿದೊಡ್ಡ ಪಿಡುಗು ಎಂದು ಕರೆದ ಅವರು, ನಿರುದ್ಯೋಗಿ ಯುವಜನತೆಗೆ ಬಿಜೆಪಿಯ ಉತ್ತರ 'ಲಾಠಿ ಪ್ರಹಾರ' ಎಂದು ಟೀಕಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಪಟ್ನಾದಲ್ಲಿ ಶುಕ್ರವಾರ (ಮೇ 8) ಉದ್ಯೋಗಕ್ಕಾಗಿ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕ ಹುದ್ದೆ ಆಕಾಂಕ್ಷಿಗಳ ಮೇಲೆ ಬಿಹಾರ ಪೊಲೀಸರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ನಿರುದ್ಯೋಗಿ ಯುವಜನತೆ ಬಿಜೆಪಿ ನೀಡುವ ಉತ್ತರ ಎಂದರೆ ಅದು 'ಲಾಠಿ ಪ್ರಹಾರ' ಎಂದು ಕಿಡಿಕಾರಿದ್ದಾರೆ.

ಪ್ರತಿಭಟನಾ ನಿರತ ಯುವಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿದ್ದ ವಿಡಿಯೊಗಳನ್ನು ಅವರು ‘ಎಕ್ಸ್‘ನಲ್ಲಿ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ನಿರುದ್ಯೋಗ ಅತ್ಯಂತ ದೊಡ್ಡ ಪಿಡುಗು. ಅದರ ತೀವ್ರ ಪರಿಣಾಮ ಬಿಹಾರ ಮತ್ತು ಉತ್ತರ ಪ್ರದೇಶದ ಯುವಜನತೆಯ ಮೇಲಾಗುತ್ತಿದೆ. ಕೈಯಲ್ಲಿ ಪದವಿಗಳು ಮತ್ತು ಕೌಶಲ್ಯ ಹೊಂದಿರುವ ಲಕ್ಷಾಂತರ ಯುವಕರು ಕೆಲಸಕ್ಕಾಗಿ ಮನೆ–ಮನೆಗೆ ಅಲೆದಾಡುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರ ಅವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಯುವಕರು ತಮ್ಮ ಹಕ್ಕುಗಳನ್ನು ಪಡೆಯಲು ಬೀದಿಗಿಳಿದಾಗ, ಅವರಿಗೆ ಉದ್ಯೋಗ ನೀಡುತ್ತಿಲ್ಲ. ಬದಲಿಗೆ ಅವರ ಬೆನ್ನಿನ ಮೇಲೆ ಲಾಠಿ ಮಳೆಗರೆಯಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಯುವಜನತೆ ಬಿಜೆಪಿಯ ಸುಳ್ಳುಗಳಿಂದ ಬೇಸತ್ತಿದ್ದಾರೆ. ಆದರೆ ಇನ್ನು ಮುಂದೆ ಅವರು ಮೌನವಾಗಿರುವುದಿಲ್ಲ. ಹೋರಾಟದ ಪ್ರತಿ ಹಂತದಲ್ಲೂ ಕಾಂಗ್ರೆಸ್ ಅವರೊಂದಿಗೆ ನಿಲ್ಲುತ್ತದೆ ಎಂದು ರಾಹುಲ್ ಭರವಸೆ ನೀಡಿದ್ದಾರೆ.

ಪಟ್ನಾದಲ್ಲಿ ಪ್ರತಿಭಟನೆ:

ಬಿಹಾರ ಲೋಕಸೇವಾ ಆಯೋಗದ (ಬಿಪಿಎಸ್ಸಿ) ಟಿಆರ್ಇ 4.0 ಪರೀಕ್ಷೆಯ ದಿನಾಂಕವನ್ನು ಪ್ರಕಟಿಸುವಲ್ಲಿನ ವಿಳಂಬವ ವಿರೋಧಿಸಿ, ಉದ್ಯೋಗಾಕಾಂಕ್ಷಿಗಳು ಶುಕ್ರವಾರ ಪಟ್ನಾದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾಕಾರರು ಪಟ್ನಾ ಕಾಲೇಜಿನಿಂದ ಮೆರವಣಿಗೆ ಆರಂಭಿಸಿ ಡಾಕ್ ಬಂಗಲೆ ಚೌಕದತ್ತ ಮೆರವಣಿಗೆ ಹೋಗುತ್ತಿದ್ದಾಗ, ಗಾಂಧಿ ಮೈದಾನದ ಬಳಿ ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ಮನಬಂದಂತೆ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

2026ರ ಏಪ್ರಿಲ್ನಲ್ಲಿಯೇ ಈ ಪರೀಕ್ಷೆಯ ಅಧಿಸೂಚನೆ ಪ್ರಕಟಿಸಬೇಕಿತ್ತು. ಆದರೆ ಸರ್ಕಾರ ವಿಳಂಬ ಮಾಡುತ್ತಿದೆ ಎಂಬುವುದು ಪ್ರತಿಭಟನಾಕಾರರ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.