ಚೆನ್ನೈ: ದಕ್ಷಿಣ ರೈಲ್ವೆ ವಿಭಾಗವು ತಿರುಚಿರಾಪಳ್ಳಿ ವಿಭಾಗೀಯ ಕಚೇರಿಯ ಹೊಸ ಪ್ರವೇಶ ದ್ವಾರದ ಕಮಾನಿಗೆ ‘ಕರ್ತವ್ಯ ದ್ವಾರ’ ಎಂದು ಹೆಸರಿಡುವ ವಿಚಾರ ವಿವಾದಕ್ಕೆ ತಿರುಗಿ, ಪ್ರತಿಭಟನೆ ಸ್ವರೂಪ ಪಡೆಯುತ್ತಿದ್ದಂತೆ, ರೈಲ್ವೆ ಇಲಾಖೆ ಹಿಂದಿ, ತಮಿಳು ಮತ್ತು ಇಂಗ್ಲಿಷ್ನಲ್ಲಿ ಬರೆಸಿದ್ದ ಪದಗಳನ್ನು ತೆಗೆದಿದೆ.

ಪ್ರವೇಶ ದ್ವಾರದ ಕಮಾನಿಗೆ ‘ಕರ್ತವ್ಯ ದ್ವಾರ’ ಎಂದು ಹೆಸರು ಬರೆಸುತ್ತಿದ್ದಂತೆ, ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಸೇರಿದಂತೆ ಹಲವು ರಾಜಕೀಯ ನಾಯಕರು ಇದನ್ನು ‘ಹಿಂದಿ ಹೇರಿಕೆ’ ಎಂದು ಟೀಕಿಸಿದ್ದರು.

ಡಿಎಂಕೆ ಕಾರ್ಯಕರ್ತರು ಹಿಂದಿ ಹೇರಿಕೆಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.

ಕೇಂದ್ರದ ವಿರುದ್ಧ ಆಕ್ರೋಶ: ‘ಬಿಜೆಪಿ ಹಿಂದಿ ಹೆಸರುಗಳನ್ನು ಇಂಗ್ಲಿಷ್ ಮತ್ತು ತಮಿಳಿನಲ್ಲಿ ಬರೆಯುವ ಮೂಲಕ, ಹಿಂದಿ ಹೇರಿಕೆಯ ಎಲ್ಲ ಮಿತಿಗಳನ್ನೂ ಮೀರುತ್ತಿದ್ದಾರೆ’ ಎಂದು ಎಂ.ಕೆ. ಸ್ಟಾಲಿನ್ ಆರೋಪಿಸಿದರು.

‘ಬಿಜೆಪಿಯ ಈ ನೀತಿ ಮೇಲ್ನೋಟಕ್ಕೆ ಒಂದು ಭಾಷೆ, ಮೂರು ಲಿಪಿಗಳಂತೆ ಕಾಣುತ್ತದೆ. ಅವರು ಈಗಾಗಲೇ ನೌಕರರ ಭವಿಷ್ಯ ನಿಧಿ (ಇಪಿಎಫ್ಒ) ಕಚೇರಿಯನ್ನು ಭವಿಷ್ಯ ನಿಧಿ ಭವನ ಎಂದು ಹೆಸರಿಸಿದ್ದಾರೆ. ಹೊಸ ಅಪರಾಧ ಕಾನೂನುಗಳಿಗೂ ಅವರು ಇಂಗ್ಲಿಷ್ ಲಿಪಿಯಲ್ಲಿ ಬರೆಯಲಾದ ಸಂಸ್ಕೃತ ಹೆಸರುಗಳನ್ನು ಇಡಲಾಗಿದೆ. ಕೇಂದ್ರ ಜಲಸಂಪನ್ಮೂಲ ಸಚಿವಾಲಯವನ್ನು ‘ಜಲಶಕ್ತಿ’ ಎಂದು ಮರುನಾಮಕರಣ ಮಾಡಲಾಗಿದೆ’ ಎಂದು ಸ್ಟಾಲಿನ್ ಹಿಂದಿನ ಬೆಳವಣಿಗೆಗಳನ್ನು ಉಲ್ಲೇಖಿಸಿದರು.

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಾವಣೆಯಲ್ಲೂ ಬಿಜೆಪಿ ಇದೇ ರೀತಿ ಮಾಡಿದೆ’ ಎಂದು ಹೇಳಿದ ಸ್ಟಾಲಿನ್, ಇಂಥ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ದುರಾಹಂಕಾರ ಹೆಚ್ಚುತ್ತಲೇ ಇದೆ’ ಎಂದು ಟೀಕಿಸಿದರು.

‘ತಮಿಳರ ಸ್ವಾಭಿಮಾನವನ್ನು ಕೆರಳಿಸುವ ಇವರಿಗೆ ಸರಿಯಾದ ಪಾಠ ಕಲಿಸಬೇಕು. ತಮಿಳು ಮತ್ತು ಇಂಗ್ಲಿಷ್ ಹೆಸರುಗಳಲ್ಲಿಯೂ ಹಿಂದಿಯನ್ನು ಹೇರುವ ಈ ಪ್ರಯತ್ನವನ್ನು ಅವರು ತಕ್ಷಣ ಕೈಬಿಟ್ಟು ಸರಿಯಾದ ತಮಿಳು ಹೆಸರುಗಳನ್ನು ಬರೆಸಬೇಕು. ಇಲ್ಲದಿದ್ದರೆ, ಕೇಂದ್ರ ಸರ್ಕಾರವು ತಮಿಳರ ಕೋಪದ ಬಿಸಿಯನ್ನು ಅನುಭವಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

ತಮಿಳುನಾಡಿನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಕೂಡ ಕೇಂದ್ರ ಸರ್ಕಾರದ ಈ ಕ್ರಮವನ್ನು ಖಂಡಿಸಿದರು. ಹಿಂದಿ ಹೆಸರುಗಳನ್ನು ತೆಗೆದುಹಾಕಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.