ಮುಂಬೈ: ರೈಲ್ವೆ ನೇಮಕಾತಿ ಪರೀಕ್ಷೆ ವೇಳೆ ಹಿಂಸಾಚಾರ ನಡೆಸಿ ಆಕಾಂಕ್ಷಿಗಳ ಮೇಲೆ ದಾಳಿ ನಡೆಸಿದ್ದ ಪ್ರಕರಣದಲ್ಲಿ ಎಂಎನ್ಎಸ್ ಸ್ಥಾಪಕ ರಾಜ್ ಠಾಕ್ರೆ ಖುಲಾಸೆಗೊಂಡಿದ್ದಾರೆ.

ಎರಡು ದಶಕಗಳ ಹಳೆಯದಾದ ಈ ಪ್ರಕರಣದಲ್ಲಿ ರಾಜ್ ಠಾಕ್ರೆ ಅವರ ಹೆಸರನ್ನು ಕೈಬಿಡಲಾಗಿದೆ. ಈ ಮೂಲಕ ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಘಟನೆಗೆ ಕಾನೂನಾತ್ಮಕ ತೆರೆ ಬಿದ್ದಂತಾಗಿದೆ.

2008ರಲ್ಲಿ ಈ ಘಟನೆ ನಡೆದಿತ್ತು. ಠಾಣೆ ಜಿಲ್ಲೆಯ ಕಲ್ಯಾಣ ರೈಲ್ವೆ ನಿಲ್ದಾಣದಲ್ಲಿ ಎಂಎನ್ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಉತ್ತರ ಭಾರತದ ಉದ್ಯೋಗಾಂಕ್ಷಿಗಳ ಮೇಲೆ ಅವರು ದಾಳಿ ನಡೆಸಿದ್ದರು. ಈ ಘಟನೆ ನಡೆದಾಗ ರಾಜ್ ಠಾಕ್ರೆ ಅವರು ತಮ್ಮ ಪಕ್ಷ ಆರಂಭಿಸಿ ಎರಡು ವರ್ಷವಾಗಿತ್ತಷ್ಟೆ.

ರಾಜ್ ಠಾಕ್ರೆ ಸೇರಿ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಯುತ್ತಿದ್ದ ಇಷ್ಟು ವರ್ಷಗಳಲ್ಲಿ ಅವಧಿಯಲ್ಲಿ ಇಬ್ಬರು ಆರೋಪಿಗಳು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.