ಚೆನ್ನೈ: ಸಿನಿಮಾರಂಗದ ಸೂಪರ್ಸ್ಟಾರ್ ರಜನಿಕಾಂತ್ ಅವರು ರಾಜಕೀಯ ಪ್ರವೇಶಕ್ಕೆ ಯತ್ನಿಸಿದಾಗ ಡಿಎಂಕೆಯು ಅವರಿಗೆ ಬೆದರಿಕೆ ಒಡ್ಡಿತ್ತು ಎಂದು ಟಿವಿಕೆ ನಾಯಕರೊಬ್ಬರು ಮಾಡಿರುವ ಆರೋಪವನ್ನು ನಿರಾಕರಿಸಿರುವ ರಜನಿಕಾಂತ್, ‘ಸಮಯ ಕಾಯುತ್ತದೆ ಮತ್ತು ಉತ್ತರಿಸುತ್ತದೆ’ ಎಂದಿದ್ದಾರೆ.

ವಿವಾದ ಸೃಷ್ಟಿಸಿದ್ದ ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ್ ಹೇಳಿಕೆ ಸುಳ್ಳು ಎಂದು ರಜನಿಕಾಂತ್ ‘ಎಕ್ಸ್’ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಡಿಎಂಕೆ ಸರ್ಕಾರದ ವಿರುದ್ಧ ಮಾರ್ಚ್ 12ರಂದು ನಡೆದಿದ್ದ ಪ್ರತಿಭಟನೆಯಲ್ಲಿ ಅರ್ಜುನ್ ಅವರು ರಜನಿಕಾಂತ್ ಬಗ್ಗೆ ಹೇಳಿಕೆ ನೀಡಿದ್ದರು. ಅರ್ಜುನ್ ಹೇಳಿಕೆಯನ್ನು ರಜನಿಕಾಂತ್ ಅಭಿಮಾನಿಗಳು, ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ, ಕೇಂದ್ರ ಸಚಿವ ಎಲ್.ಮುರುಗನ್ ಮತ್ತು ಸಚಿವ ಎಸ್.ರೆಘುಪತಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್, ರಜನಿಕಾಂತ್ ಮಾಜಿ ಸಲಹೆಗಾರರು ಖಂಡಿಸಿದ್ದರು.

ಈ ವಿಚಾರದಲ್ಲಿ ಬೆಂಬಲ ನೀಡಿದ ಎಲ್ಲ ರಾಜಕೀಯ ನಾಯಕರಿಗೆ, ಸಚಿವರಿಗೆ, ಹಿತೈಷಿಗಳಿಗೆ ಮತ್ತು ಅಭಿಮಾನಿಗಳಿಗೆ ರಜನಿಕಾಂತ್ ಧನ್ಯವಾದ ಅರ್ಪಿಸಿದ್ದಾರೆ.
.ಇರಾನ್ ಸರ್ವೋಚ್ಚ ನಾಯಕ ಖಮೇನಿ ಎಲ್ಲಿದ್ದಾರೆ? ದಾಳಿಯಿಂದ ಪಾರಾದದ್ದು ಹೇಗೆ?.ಆಕಾಶದಾಚೆ ಹುಡುಕುವ ಅವಶ್ಯಕತೆ ಇಲ್ಲ: ಅಪ್ಪು ಜನ್ಮದಿನಕ್ಕೆ ಶುಭಕೋರಿದ ಶಿವಣ್ಣ.
ನಟ 'ದಳಪತಿ' ವಿಜಯ್ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೂಲಕ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಪ್ರಚಾರ ಸಮಾವೇಶಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿದ್ದಾರೆ. ಟಿವಿಕೆ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ತಂತ್ರ ರೂಪಿಸಿತ್ತು. ಆದರೆ ಟಿವಿಕೆ ಈ ಆಫರ್ ಅನ್ನು ನಿರಾಕರಿಸಿದೆ ಎನ್ನಲಾಗಿದೆ.

ತಮಿಳುನಾಡಿನ 234 ಸ್ಥಾನಗಳಿಗೆ ಏಪ್ರಿಲ್ 23ರಂದು ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ.
.ಬೆಟ್ಟದ ಹೂವು–ಗಂಧದ ಗುಡಿ: ಪುನೀತ್ ರಾಜಕುಮಾರ್ ಸಿನಿ ಪಯಣ ಹೀಗಿತ್ತು.ಧಾರ್ಮಿಕ ಭಾವನೆಗೆ ಧಕ್ಕೆ: ಭೀಮ ಆರ್ಮಿ ಯುವಕ ಘಟಕ ರಾಜ್ಯಾಧ್ಯಕ್ಷನ ವಿರುದ್ಧ ಪ್ರಕರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.