ನವದೆಹಲಿ: ‘ಸೂರ್ಯ ತಿಲಕ’ ಆಚರಣೆಯೊಂದಿಗೆ ಅಯೋಧ್ಯೆಯ ರಾಮ ಮಂದಿರಲ್ಲಿ ರಾಮನವಮಿಯು ಶುಕ್ರವಾರ ಅದ್ಧೂರಿಯಾಗಿ ನಡೆಯಿತು.

ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಜಾರ್ಖಂಡ್ ಸೇರಿದಂತೆ ದೇಶದಾದ್ಯಂತ ರಾಮನವಮಿ ಅಂಗವಾಗಿ ಮೆರವಣಿಗೆ, ಪೂಜೆಗಳು ನಡೆದವು.

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿನ ಶ್ರೀ ರಾಮನ ಮೂರ್ತಿಯ ಹಣೆಗೆ ಸೂರ್ಯರಶ್ಮಿ ಬಿದ್ದ ಕ್ಷಣವನ್ನು(ಸೂರ್ಯ ತಿಲಕ) ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಸುಮಾರು 9 ನಿಮಿಷ ಸೂರ್ಯ ಕಿರಣವು ಮೂರ್ತಿಯ ಹಣೆಯ ಮೇಲೆ ಬಿದ್ದಿತು.

ಜಮ್ಮು–ಕಾಶ್ಮೀರದ ಮಾತ ವೈಷ್ಣೊ ದೇವಿ ಬೆಟ್ಟದ ಮೇಲೆ 9 ದಿನಗಳಿಂದ ನಡೆದ ಶತ ಚಂಡಿ ಮಹಾ ಯಾಗ ಶುಕ್ರವಾರ ಸಂಪನ್ನಗೊಂಡಿತು.

ಪಶ್ಚಿಮಬಂಗಾಳದ ಹಲವು ಜಿಲ್ಲೆಗಳಲ್ಲಿ ಶೋಭಾಯಾತ್ರೆಗಳು ನಡೆದವು. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆ ವೇಳೆ ಅಲ್ಪಸಂಖ್ಯಾತರು ನೀರು, ಸಿಹಿತಿಂಡಿ ಮತ್ತು ಹಣ್ಣು ವಿತರಿಸುವ ಮೂಲಕ ಭಾವೈಕ್ಯತೆ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.