ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟಿಎಂಸಿ ಶಾಸಕನ ಮನೆ, ನರ್ಸಿಂಗ್‌ ಹೋಂನಲ್ಲಿ ದಾಖಲೆಗಳ ಜಪ್ತಿ ಮಾಡಿದ ಇ.ಡಿ

ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅವ್ಯವಹಾರ
Published : 18 ಸೆಪ್ಟೆಂಬರ್ 2024, 13:51 IST
Last Updated : 18 ಸೆಪ್ಟೆಂಬರ್ 2024, 13:51 IST
ಫಾಲೋ ಮಾಡಿ
Comments

ಕೋಲ್ಕತ್ತ: ಆರ್‌.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ, ಟಿಎಂಸಿ ಶಾಸಕ ಸುದೀಪ್ತ ರಾಯ್‌ಗೆ ಸೇರಿದ ಮನೆಗಳು ಹಾಗೂ ನರ್ಸಿಂಗ್‌ನಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಶೋಧ ನಡೆಸಿದ್ದು, ಹಲವು ದಾಖಲೆಗಳನ್ನು ಜಪ್ತಿ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಲ್ಲಿನ ಸಿಥಿ ಪ್ರದೇಶದಲ್ಲಿರುವ ರಾಯ್‌ ಅವರ ಮನೆಗಳು ಹಾಗೂ ಅವುಗಳಿಗೆ ಹೊಂದಿಕೊಂಡಿರುವ ನರ್ಸಿಂಗ್‌ ಹೋಂನಲ್ಲಿ ಮಂಗಳವಾರ ಬೆಳಿಗ್ಗೆ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದರು. ಬುಧವಾರ ತಡರಾತ್ರಿ 2 ಗಂಟೆಗೆ ಶೋಧ ಕಾರ್ಯ ಪೂರ್ಣಗೊಳಿಸಿ, ಪೆಟ್ಟಿಗೆ ತುಂಬ ದಾಖಲೆಗಳನ್ನು ಕೊಂಡೊಯ್ದರು ಎಂದು ಅಧಿಕಾರಿ ಹೇಳಿದ್ದಾರೆ.

ರಾಯ್‌ ಅವರಿಗೆ ಸೇರಿದ ಮನೆಗಳು ಹಾಗೂ ನರ್ಸಿಂಗ್‌ ಹೋಂ ಅಲ್ಲದೇ, ಔಷಧ ವ್ಯಾಪಾರಿಯೊಬ್ಬರ ಮನೆ ಹಾಗೂ ಇತರ ನಾಲ್ಕು ಸ್ಥಳಗಳಲ್ಲಿ ಕೂಡ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT