ಮುಂಬೈ: ಮಹಾಯುತಿ ಮೈತ್ರಿಕೂಟದ ಪ್ರಮುಖ ಆಡಳಿತ ಪಕ್ಷವೊಂದು ತನ್ನದೇ ಮಿತ್ರಪಕ್ಷಗಳ ಮೇಲೆ ಕಣ್ಣಿಟ್ಟಿದೆ ಎಂದು ಎನ್ಸಿಪಿ (ಎಸ್ಪಿ) ಶಾಸಕ ರೋಹಿತ್ ಪವಾರ್ ಭಾನುವಾರ ಆರೋಪಿಸಿದ್ದಾರೆ.
.ಕನ್ನಡದಲ್ಲಿ ಟಿಇಟಿ ನಡೆಸಿ ಎಂದು ಮಹಾರಾಷ್ಟ್ರ ಸಿ.ಎಸ್ಗೆ ಶಾಲಿನಿ ರಜನೀಶ್ ಪತ್ರ.
ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ಶಾಸಕರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ ಎಂಬ ವರದಿಗಳ ನಡುವೆಯೇ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಮುಂದಿನ ತಿಂಗಳ ಅಂತ್ಯದ ವೇಳೆಗೆ, ಅಧಿಕಾರದಲ್ಲಿರುವ ದೊಡ್ಡ ಪಕ್ಷವೊಂದು ಆಡಳಿತಾರೂಢ ಮೈತ್ರಿಕೂಟದ ಶಾಸಕರನ್ನೇ ಪಕ್ಷಾಂತರವನ್ನು ಮಾಡಿಸುವ ವಿಶ್ವಾಸಾರ್ಹ ಮಾಹಿತಿ ಇದೆ ಎಂದು ಪವಾರ್ ಹೇಳಿದ್ದಾರೆ. ಆಡಳಿತಾರೂಢ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಈ ಹೇಳಿಕೆ ನೀಡಿರುವ ಅವರು, ಸಣ್ಣ ಮಿತ್ರಪಕ್ಷಗಳು ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದ್ದಾರೆ.

‘ತನ್ನ ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ಅಚಲವಾದ ಸ್ನೇಹದ ನಿಲುವನ್ನು ಪ್ರದರ್ಶಿಸುತ್ತಿದ್ದರೂ, ಪರಿಸ್ಥಿತಿ ಬದಲಾಗಬಹುದು. ಇದು ಮಿತ್ರಪಕ್ಷಗಳಲ್ಲಿ ದ್ರೋಹದ ಭಾವನೆ ಮೂಡಲು ಕಾರಣವಾಗಬಹುದು’ ಎಂದು ಪವಾರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
.ಮಹಾರಾಷ್ಟ್ರ | ಟೆಂಪೋಗೆ ಟ್ರಕ್ ಡಿಕ್ಕಿ: 8 ಮಹಿಳಾ ಕಾರ್ಮಿಕರ ಸಾವು.
ನಾವು ಎಂದಿಗೂ ನಮ್ಮ ಸ್ನೇಹಿತರನ್ನು ಕೈಬಿಡುವುದಿಲ್ಲ ಎಂಬ ಭಾವನೆಯನ್ನು ಬಿಜೆಪಿ ತೋರಿಸಬಹುದು. ಆದರೆ ನಾಳೆ ಮಿತ್ರಪಕ್ಷಗಳಿಗೆ ದ್ರೋಹದ ಅನುಭವ ಆಗಬಹುದು. ಆದ್ದರಿಂದ ಮಿತ್ರಪಕ್ಷಗಳು ಎಚ್ಚರಿಕೆ ವಹಿಸುವುದು ಜಾಣತನ; ಎಂದು ಅವರು ಹೇಳಿದ್ದಾರೆ.

ದೇವೇಂದ್ರ ಫಡಣವೀಸ್ ನೇತೃತ್ವದ ಮಹಾಯುತಿ ಸರ್ಕಾರದಲ್ಲಿ ಬಿಜೆಪಿ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಮತ್ತು ಸುನೇತ್ರಾ ಪವಾರ್ ಅವರ ಎನ್ಸಿಪಿ ಮೈತ್ರಿ ಪಕ್ಷಗಳಾಗಿವೆ.

ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ವಿರೋಧ ಪಕ್ಷವಾದ ಶಿವಸೇನೆ (ಯುಬಿಟಿ) ನಾಯಕರನ್ನು ಸೆಳೆಯಲು ಶಿವಸೇನೆಯು ರಹಸ್ಯವಾಗಿ 'ಆಪರೇಷನ್ ಟೈಗರ್' ಅನ್ನು ಪ್ರಾರಂಭಿಸಿದೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಇದೆಲ್ಲಾ ಆಧಾರ ರಹಿತ ಎಂದು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದರು.
. ಆಕ್ಷೇಪಾರ್ಹ ವಿಡಿಯೊ: ಮಹಾರಾಷ್ಟ್ರ ಸಚಿವ ಜಿರವಾಲ್ ರಾಜೀನಾಮೆಗೆ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.