ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ವಿಭಜನೆಗೆ ಆರ್‌ಎಸ್‌ಎಸ್ ಕಾರಣ, ಜಿನ್ನಾ ಅಲ್ಲ: ಎಸ್‌ಬಿಎಸ್‌ಪಿ ಮುಖ್ಯಸ್ಥ

Last Updated 11 ನವೆಂಬರ್ 2021, 13:49 IST
ಅಕ್ಷರ ಗಾತ್ರ

ನವದೆಹಲಿ:ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ)ಮುಖ್ಯಸ್ಥ ಓಂ ಪ್ರಕಾಶ್ ರಾಜಭರ್ ಅವರು, ಮೊಹಮ್ಮದ್ ಅಲಿ ಜಿನ್ನಾ ಭಾರತದ ಮೊದಲ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ ಎಂದು ಬುಧವಾರ ಹೇಳಿದ್ದರು. ಅದೇ ಮಾತನ್ನು ಪುನರುಚ್ಚರಿಸಿರುವ ಅವರು, ದೇಶ ವಿಭಜನೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಕಾರಣ ಎಂದು ಆರೋಪಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ಒಂದು ವೇಳೆ ಜಿನ್ನಾ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿದ್ದರೆ, ವಿಭಜನೆಯೇ ಇರುತ್ತಿರಲಿಲ್ಲ. ಭಾರತವು ಬೃಹತ್ ರಾಷ್ಟ್ರವಾಗಿರುತ್ತಿತ್ತು. ಯಾವುದೇ ರೀತಿಯ ಸಮಸ್ಯೆಗಳು ಸೃಷ್ಟಿಯಾಗುತ್ತಿರಲಿಲ್ಲ ಎಂದಿದ್ದಾರೆ.

‘ಭಾರತದ ವಿಭಜನೆಗೆ ಆರ್‌ಎಸ್‌ಎಸ್‌ ಹೊಣೆಯಾಗಿದೆ. ಜಿನ್ನಾ ಅವರಲ್ಲ. ಸಂಘದಿಂದಲೇ ವಿವಾದ ಸೃಷ್ಟಿಯಾಗಿದೆ‘ ಎಂದು ಕಿಡಿಕಾರಿದ್ದಾರೆ.

ಅಟಲ್ ಬಿಹಾರಿ ವಾಯಪೇಯಿ, ಎಲ್‌ಕೆ ಅಡ್ವಾನಿ ಮತ್ತು ಗೋವಿಂದ ವಲ್ಲಭ ಪಂತ್ ಅವರಂತಹ ನಾಯಕರು, ದೇಶದ ಸ್ವಾತಂತ್ರ್ಯ ಸಾಧನೆಗೆ ಕೊಡುಗೆ ನೀಡಿದ್ದಕ್ಕಾಗಿ ಜಿನ್ನಾ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT