ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ದೇಗುಲದ ಸನಿಹ ಭಾರತೀಯ ಕರಾವಳಿ ಪಡೆಯ (ಐಸಿಜಿ) ಹೆಲಿಕಾಪ್ಟರ್ ಹಾರಾಟ ನಡೆಸಿದ್ದರಿಂದ ಪಂಪಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದೆ. ವಾತಾವರಣ ಪೂರಕವಾದ ನಂತರ ಕೊಚ್ಚಿಯಲ್ಲಿನ ನೆಲೆಗೆ ಮರಳಿದೆ ಎಂದು ಐಸಿಜಿ ತಿಳಿಸಿದೆ.

ಬೆಟ್ಟದ ದೇಗುಲದ ಮೇಲ್ಭಾಗಕ್ಕೆ ತೀರಾ ಸಮೀಪದಲ್ಲಿ ಹೆಲಿಕಾಪ್ಟರ್ ಗುರುವಾರ ಹಾರಾಟ ನಡೆಸಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

ಪ್ರತಿ ವರ್ಷವೂ ಅಸಂಖ್ಯಾತ ಭಕ್ತರು ಭೇಟಿ ನೀಡುವ ಬೆಟ್ಟದ ದೇಗುಲದ ಸೂಕ್ಷ್ಮ ಭದ್ರತಾ ಸ್ವರೂಪವನ್ನು ಪರಿಗಣಿಸಿದ ಶಬರಿಮಲೆ ವಿಶೇಷ ಆಯುಕ್ತರು ತನಿಖೆಗೆ ಆದೇಶಿಸಿದ್ದಾರೆ. ಇದರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಫ್ಐಆರ್ನಲ್ಲಿ ಯಾರನ್ನೂ ಆರೋಪಿಗಳೆಂದು ಉಲ್ಲೇಖಿಸಿಲ್ಲ. ಸಿಜಿ 821 ಹೆಲಿಕಾಪ್ಟರ್ ಶಬರಿಮಲೆ ಸನ್ನಿಧಿಗೆ ಕಡಿಮೆ ಅಂತರದಲ್ಲಿ ನಾಲ್ಕು ಬಾರಿ ಹಾರಾಟ ನಡೆಸಿತು ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.