ಕೊಚ್ಚಿ: ‘ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಸಿಪಿಎಂ ಕಣ್ಣಾಮುಚ್ಚಾಲೆ ಆಡುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ಆರೋಪಿಸಿದ್ದಾರೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಶಬರಿಮಲೆ ಚಿನ್ನ ಕಳವು ಪ್ರಕರಣದ ಆರೋಪಿಗಳಾಗಿರುವ ಸಿಪಿಎಂ ಮುಖಂಡರನ್ನು ಈಗಲೂ ಸರ್ಕಾರ ರಕ್ಷಿಸುತ್ತಿದೆ’ ಎಂದು ಆರೋಪಿಸಿದರು. ‘ವಿ. ಕುಂಞಿಕೃಷ್ಣನ್ ಎಂಬುವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದು ಬಿಟ್ಟರೆ ಉಳಿದ ಯಾರ ವಿರುದ್ಧವೂ ಸಿಪಿಎಂ ಕ್ರಮ ಕೈಗೊಂಡಿಲ್ಲ.

ಶಬರಿಮಲೆ ದೇವಸ್ಥಾನದಿಂದ ಕಳುವಾಗಿರುವ ಚಿನ್ನ ಈಗ ಎಲ್ಲಿದೆ ಎನ್ನುವುದಕ್ಕೂ ಸರ್ಕಾರದ ಬಳಿ ಉತ್ತರ ಇಲ್ಲ’ ಎಂದರು.‘ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳವನ್ನು ಕಳೆದ 10 ವರ್ಷಗಳಿಂದ ಕತ್ತಲಲ್ಲಿ ಇಟ್ಟಿದ್ದಾರೆ’ಎಂದು ಚೆನ್ನಿತ್ತಲ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.